ಯು.ಎ.ಇ.ಯಲ್ಲಿ ಬಂಟ್ಸ್ ಥ್ರೋಬಾಲ್ ದುಬಾಯಿ ಆಶ್ರಯದಲ್ಲಿ 2015 ಡಿಸೆಂಬರ್ 4 ರಂದು ಯು.ಎ.ಇ. ಮಟ್ಟದ ಮಹಿಳಾ ಥ್ರೋಬಾಲ್ ಹಾಗೂ ಮತ್ತು ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ ನಡೆಯಿತು. ದಿನಪೂರ್ತಿ ನಡೆದ ಪೈಪೋಟಿಯಲ್ಲಿ ಮಹಿಳಾ ಥ್ರೋಬಾಲ್ ಫೈನಲ್ ಹಂತದಲ್ಲಿ ಅಬುಧಾಬಿ ಕರ್ನಾಟಕ ಸಂಘ ತಂಡದ ವಿರುದ್ಧ ಬಂಟ್ಸ್ ದುಬಾಯಿ ತಂಡ ಜಯದೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಪುರುಷರ ಥ್ರೋಬಾಲ್ ಕೋಸ್ಟಲ್ ಫ್ರೆಂಡ್ಸ್ ತಂಡದ ವಿರುದ್ದ ಬಂಟ್ಸ್ ದುಬಾಯಿ ತಂಡ ಗೆಲುವು ಸಾಧಿಸಿದರು. ಪುರುಷರ ವಾಲಿಬಾಲ್ ಸೈಫ್ ಚಿಲ್ಲಿ ವಿಲ್ಲಿ ತಂಡದ ವಿರುದ್ಧ ಇಂಡಿಯನ್ ಸ್ಟೈಕರ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡರು.
ಆಕರ್ಷಕ ಉದ್ಘಾಟನಾ ಸಮಾರಂಭ
ಹಚ್ಚ ಹಸಿರಿನ ಹುಲ್ಲು ಹಾಸಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9.00 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಊರಿನಿಂದ ಆಗಮಿಸಿದ ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಮತ್ತು ಪಂದ್ಯಾಟದ ಪ್ರಮುಖ ಪ್ರಾಯೋಜಕರಾದ ಹೀಟ್ ಶೀಲ್ಡ್ ದುಬಾಯಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರೇಂನಾಥ ಶೆಟ್ಟಿ ಹಾಗೂ ಶ್ರೀಮತಿ ಭಾಗ್ಯ ಪ್ರೇಂನಾಥ್ ಶೆಟ್ಟಿ, ಆಟೋಟೆಕ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಫೈಸಲ್, ಶ್ರೀ ಜಯಾನಂದ ಪಕ್ಕಳ, ಶ್ರೀ ನಿಶಿತ್ ಆಳ್ವ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಶ್ರೀಮತಿ ಶಶಿ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸಂಗೀತಾ ಶೆಟ್ಟಿಯವರಿಂದ ಪ್ರಾರ್ಥನೆ, ಪುಟಾಣಿ ಮಕ್ಕಳ ಸ್ವಾಗತ ನೃತ್ಯ ನಡೆಯಿತು. ಕರ್ನಾಟಕ ರಾಜ್ಯ ಗೀತೆ, ಯು.ಎ.ಇ. ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ, ಕ್ರೀಡಾಪಟುಗಳ ಕ್ರೀಡಾವಚನ ಶ್ರೀಮತಿ ಶೃತಿ ದಿನಕರ್ ಭೋದಿಸಿದರು
ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರಿಗೆ ದುಬಾಯಿಯಲ್ಲಿ ಸನ್ಮಾನ
ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸುಸಂದರ್ಭದಲ್ಲಿ ಯು.ಎ.ಇ. ಯಲ್ಲಿ ನೆಲೆಸಿರುವ ಸಮಸ್ಥ ಕ್ರೀಡಾ