ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ)ಆಶ್ರಯದಲ್ಲಿ ಇಂಡಿಪೆಂಡೆಂಟ್ಸ್ ಪ್ರೊ ಕಬ್ಬಡ್ಡಿ ಇಂಡಿಪೆಂಡೆಂಟ್ಸ್ ಟೂರ್ನಮೆಂಟ್
ಸ್ಪೋಟ್ರ್ಸ್ ಪ್ರೊಮೋಟರ್ಸ್ (ರಿ), ಮತ್ತು ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ (ರಿ)ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚುರ್ ಕಬಡ್ಡಿ ಅಸೋಸಿಯೇಶನ್(ರಿ)ನ ಸಹಭಾಗಿತ್ವದಲ್ಲಿ ಪ್ರೊ ಕಬ್ಬಡ್ಡಿ ಮಾದರಿಯ ಟೂರ್ನಮೆಂಟ್ ದಿನಾಂಕ ಆಗಸ್ಟ್ 18 ಮತ್ತು 19ರಂದು ನಡೆಯಿತು.
ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶವು ಸೇರಿದಂತೆ ಹೈಸ್ಕೂಲ್ ಮತ್ತು ಪಿಯುಸಿ ವಿಭಾಗದ ಬಾಲಕ ಬಾಲಕಿಯರ ಒಟ್ಟು 56 ತಂಡಗಳು ಭಾಗವಹಿಸಿದ್ದವು. ಹೈಸ್ಕೂಲ್ ವಿಭಾಗದಿಂದ 18 ಹುಡುಗರ ಹಾಗೂ 14 ಹುಡುಗಿಯರ ತಂಡಗಳು ಹಾಗೂ ಪಿಯುಸಿ ವಿಭಾಗದಿಂದ 18 ಹುಡುಗರ ಹಾಗೂ 8 ಹುಡುಗಿಯರ ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯಲ್ಲಿ ಹೈಸ್ಕೂಲ್ ಹುಡುಗರ ವಿಭಾಗದಲ್ಲಿ ಕೊಲ್ಯ ಜಾಯ್ಲ್ಯಾಂಡ್ ಹೈಸ್ಕೂಲ್ ತಂಡವು ಪ್ರಥಮ ಸ್ಥಾನ ಹಾಗೂ ಸೆಬೆಸ್ಟಿನ್ ಹೈಸ್ಕೂಲ್ ತೊಕ್ಕೊಟ್ಟು ದ್ವಿತೀಯ ಸ್ಥಾನ ಗಳಿಸಿದವು.
ಸುಳ್ಯ ಅಸೋಶಿಯೇಶನ್ ತಂಡ ಹಾಗೂ ಸರಕಾರಿ ಹೈಸ್ಕೂಲ್ ಅತ್ತಾವರ ತಲಾ 3 ಮತ್ತು 4 ನೇ ಸ್ಥಾನ. ಹಾಗೂ ಜಾಯ್ಲ್ಯಾಂಡ್ ಹೈಸ್ಕೂಲ್ ಕೊಲ್ಯದ ಪ್ರಣಾಂ ಬೆಸ್ಟ್ ರೈಡರ್, ಸೆಬೆಸ್ಟಿನ್ ಹೈಸ್ಕೂಲ್ ತೊಕ್ಕೊಟ್ಟುನ ಯಶ್ವಿತ್ ಬೆಸ್ಟ್ ಕ್ಯಾಚರ್, ಕೊಲ್ಯ ಜಾಯ್ಲ್ಯಾಂಡ್ ಹೈಸ್ಕೂಲ್ನ ಯಶ್ ರಾಜ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಗಳಿಸಿದರು.
ಹೈಸ್ಕೂಲ್ ಬಾಲಕಿಯರ ವಿಭಾಗದಲ್ಲಿ ಪುತ್ತೂರು ಅಸೋಶಿಯೇಶನ್ ಪ್ರಥಮ ಹಾಗೂ ಭಗವತಿ ಹೈಸ್ಕೂಲ್ ಮಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನ, ವಿವೇಕಾನಂದ ಹೈಸ್ಕೂಲ್ ಎಡಪದವು ಹಾಗೂ 4ನೇ ಸ್ಥಾನವನ್ನು ಪ್ರಗತಿ ಹೈಸ್ಕೂಲ್ ಕಡಬ ಗಳಿಸಿಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಭಗವತಿ ಹೈಸ್ಕೂಲ್ ಮಂಗಳೂರು ಗ್ರಾಮಾಂತರದ ನಯುಶಿಯಾ ಬೆಸ್ಟ್ ರೈಡರ್, ಪುತ್ತೂರು ಅಸೋಶಿಯೇಶನ್ ಸೌಮ್ಯಶ್ರೀ ಪುತ್ತೂರು ಹಾಗೂ ಪವಿತ್ರ ಭಟ್ ಪುತ್ತೂರು ಆಲ್ ರೌಂಡರ್ ಪ್ರಶಸ್ತಿ ಗಳಿಸಿದರು.
ಪಿಯುಸಿ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ವಿಕಾಸ್ ಪಿಯು ಕಾಲೇಜ್ ಪ್ರಥಮ ಆಳ್ವಾಸ್ ಮೂಡಬಿದರೆ ದ್ವಿತೀಯ, ಬಂಟ್ವಾಳ ತಾಲೂಕು ಕಬ್ಬಡ್ಡಿ ಅಸೋಸಿಯೇಶನ್ ತೃತೀಯ ಹಾಗೂ ವಿಕಾಸ್ ಪಿಯು ಕಾಲೇಜು ಬಿ ತಂಡ 4ನೇ ಸ್ಥಾನ ಗಳಿಸಿಕೊಂಡವು.
ಆಳ್ವಾಸ್ ಕಾಲೇಜಿನ ಪಲ್ಲವಿ ಬೆಸ್ಟ್ ರೈಡರ್, ವಿಕಾಸ್ ಪಿಯು ಕಾಲೇಜಿನ ವಂದನಾ ಹಾಗೂ ಧನ್ಯಶ್ರೀ ಬೆಸ್ಟ್ ಕ್ಯಾಚರ್ ಹಾಗೂ ಆಲ್ ರೌಂಡರ್. ಪ್ರಶಸ್ತಿಗೆ ಭಾಜನರಾದರು.
ಪಿಯುಸಿ ಹುಡುಗರ ವಿಭಾಗದಲ್ಲಿ ವಿಕಾಸ್ ಪಿಯು ಕಾಲೇಜ್ ಪ್ರಥಮ, ಆಳ್ವಾಸ್ ಪಿಯು ಕಾಲೇಜು ಮೂಡಬಿದರೆ ದ್ವಿತೀಯ, ಎಸ್.ಡಿ.ಎಂ. ಉಜಿರೆ ತೃತೀಯ, ಪುತ್ತೂರು ಅಸೋಶಿಯೇಶನ್ 4ನೇ ಸ್ಥಾನ ಗಳಿಸಿಕೊಂಡವು.
ಆಳ್ವಾಸ್ ಪಿಯು ಕಾಲೇಜಿನ ವಿಶ್ವಾಸ್ ಬೆಸ್ಟ್ ರೈಡರ್, ಹಾಗೂ ವಿಕಾಸ್ ಪಿಯು ಕಾಲೇಜ್ನ ಕುಶಾ ಮತ್ತು ಜಾರ್ಜ್ ಬೆಸ್ಟ್ ಕ್ಯಾಚರ್ ಮತ್ತು ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.
ಕ್ರೀಡಾಕೂಟವನ್ನು ಎ. ಸದಾನಂದ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮಂಗಳೂರಿನ ಸಂಸದರಾದ ನಳೀನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಯು.ಟಿ ಖಾದರ್ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಕಾರ್ಯದರ್ಶಿ ರಾಜ್ ಗೋಪಾಲ್ ರೈ, ಡಾ. ಭಾಸ್ಕರ್ ಶೆಟ್ಟಿ, ಸುರೇಶ್ ಚಂದ್ರ ಶೆಟ್ಟಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಸತೀಶ್ ಭಂಢಾರಿ, ದೇವಿ ಚರಣ್ ಶೆಟ್ಟಿ, ಜಗದೀಶ್ ಶೆಣವ, ಕೆಟಿ ಸುವರ್ಣ, ರಾಂಚಂದ್ರ ಆಳ್ವ, ಮಾಜಿ ಎಂಎಳ್.ಸಿ. ಮೋನಪ್ಪ ಭಂಡಾರಿ, ಎಂ.ಆರ್.ಪಿ.ಎಲ್.ನ ಸುದರ್ಶನ್, ತೂಳು ಒಕ್ಕೂಟದ ಶಶಿಧರ್ ಶೆಟ್ಟಿ, ತಾರನಾಥ್ ಶೆಟ್ಟಿ ಬೋಳಾರ್, ದೀಪಕ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಅಮೆಚುರ್ ಕಬಡ್ಡಿ ಅಸೋಸಿಯೇಶನ್(ರಿ)ನ ರತನ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಪೋಟ್ರ್ಸ್ ಪ್ರೊಮೋಟರ್ಸ್ ನ ಪುರುಶೋತ್ತಮ ಪೂಜಾರಿ ಯವರ ನೇತ್ರತ್ವದಲ್ಲಿ ದಯಾನಂದ ಮಾಡ ಮತ್ತು ಜಿಲ್ಲೆಯ ನುರಿತ ತೀರ್ಪುಗಾರರ ಸಹಕಾರದೊಂದಿಗೆ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಿತು.