ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ

Spread the love

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ

ಮಂಗಳೂರು:ಭಾರತವು ಇತ್ತೀಚೆಗೆ ಪ್ರಪಂಚದ ಅತ್ಯಂತ ಬಲಿಷ್ಠ ರಾಷ್ಟ್ರವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುತ್ತಿದ್ದು, ಈ ಕಾಲಘಟ್ಟದಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯ ಸ್ತುತ್ಯಾರ್ಹವಾದುದು ಎಂದು ವಿಂಗ್ ಕಮಾಂಡರ್ ನಡುಹಿತ್ಲು ಮೋಹನ್ ರೈ ಅವರು ಹೇಳಿದರು.

ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್‍ಹಾಸ್ಟೆಲ್‍ನ ಓಂಕಾರನಗರದಲ್ಲಿ ಆ.25ರಿಂದ 28ರವರೆಗೆ ಆಯೋಜಿಸಲಾದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

ಗಣೇಶೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಕರ್ನಾಟಕ ಥಿಯೇಟರ್ಸ್‍ನ ಅಧ್ಯಕ್ಷ ಅಶೋಕ್ ಆಳ್ವ ಕೊಡಿಯಾಲ್‍ಗುತ್ತು ಅವರು ಮಾತನಾಡಿ ಅಜಿತ್ ಕುಮಾರ್ ರೈ ಮಾಲಾಡಿ ನೇತೃತ್ವದ ಉತ್ಸವ ಸಮಿತಿಯು ಕಳೆದ 14 ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿ ಗಣೇಶೋತ್ಸವವನ್ನು ಸಂಘಟಿಸುತ್ತಿರುವುದು ಅಭಿನಂದನಾರ್ಹ ಎಂದರು.

ತೆನೆಹಬ್ಬದ ಪ್ರಯುಕ್ತ ಸಾಂಕೇತಿಕವಾಗಿ ತನೆ ವಿತರಿಸಿ ಮಾತನಾಡಿದ ಖ್ಯಾತ ರೇಡಿಯಾಲಜಿಸ್ಟ್ ಡಾ. ನವೀನ್ ಚಂದ್ರ ಶೆಟ್ಟಿ ಅವರು ಕೃಷಿ ಪ್ರಧಾನ ಸಮಾಜವಾದ ಬಂಟರು ಗಣೇಶೋತ್ಸವ ಸಂದರ್ಭದಲ್ಲಿ ತೆನೆಹಬ್ಬವನ್ನು ಆಯೋಜಿಸಿದ್ದು

ಶ್ಲಾಘನೀಯ ಎಂದರು. ಇಂದಿರಾ ಮೋಹನ್‍ರೈ, ಜ್ಯೋತಿ ಎ.ಆಳ್ವ, ಗೀತಾ ನವೀನ್‍ಚಂದ್ರಶೆಟ್ಟಿ ಟ್ರಸ್ಟಿಗಳಾದ ಮಂಜುನಾಥ ಭಂಡಾರಿ ಶೆಡ್ಯೆ, ರವಿರಾಜಶೆಟ್ಟಿ ನಿಟ್ಟೆ ಗುತ್ತು, ಕೃಷ್ಣಪ್ರಸಾದ್‍ರೈ, ಬಾಲಕೃಷ್ಣಶೆಟ್ಟಿ, ಡಾ. ಆಶಾಜ್ಯೋತಿರೈ, ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರುಗುತ್ತು, ಖಜಾಂಚಿ ಆನಂದಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ವಿದ್ದಿವಿನಾಯಕ ಪ್ರತಿಷ್ಠಾನದ ಅಧ್ಯಕ್ಷ ಅಜಿತ್‍ಕುಮಾರ್‍ರೈ ಮಾಲಾಡಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಹಾಗೂ ಸತೀಶ್ ಶೆಟ್ಟಿ ಕೊಡಿಯಾಲ್‍ಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ವಂದಿಸಿದರು.


Spread the love