Home Mangalorean News Kannada News ಬಂಟ ಸಮಾಜ ಬಾಂಧವರ ಸ್ಥಿತಿಗತಿಗಳ ಕುರಿತು ಸಮೀಕ್ಷೆ; 220 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಕಟ್ಟಡ

ಬಂಟ ಸಮಾಜ ಬಾಂಧವರ ಸ್ಥಿತಿಗತಿಗಳ ಕುರಿತು ಸಮೀಕ್ಷೆ; 220 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಕಟ್ಟಡ

Spread the love

ಬಂಟ ಸಮಾಜ ಬಾಂಧವರ ಸ್ಥಿತಿಗತಿಗಳ ಕುರಿತು ಸಮೀಕ್ಷೆ; 220 ಕೋಟಿ ರೂ. ವೆಚ್ಚದಲ್ಲಿ ಶತಮಾನೋತ್ಸವ ಕಟ್ಟಡ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ 100ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಬಂಟ್ಸ್ ಹಾಸ್ಟೆಲ್ನ ಗೀತಾ ಎಸ್.ಎಂ. ಶೆಟ್ಟಿ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರವೀಂದ್ರನಾಥ ಎಸ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿಯನ್ನು ವಿವಿಧ ತಾಲೂಕುಗಳಿಂದ ಮಂಡಿಸಲಾಯಿತು. ಎಂ. ಕರುಣಾಕರ ಶೆಟ್ಟಿ, ಉಷಾ ಬಲ್ಲಾಳ್, ರಘುರಾಮ ಶೆಟ್ಟಿ ಬೆಳ್ತಂಗಡಿ, ಕೃಷ್ಣಪ್ರಸಾದ್ ರೈ, ಎಂ. ದಯಾನಂದ ರೈ ಮನವಳಿಕೆಗುತ್ತು, ಕಾವು ಹೇಮನಾಥ ಶೆಟ್ಟಿ, ಜಯರಾಮ ಸಾಂತ, ಜಯಕರ ಶೆಟ್ಟಿ ಇಂದ್ರಾಳಿ, ಸಂಪಿಗೇಡಿ ಸಂಜೀವ ಶೆಟ್ಟಿ, ಶಶಿಧರ ಶೆಟ್ಟಿ ಸುಳ್ಯ, ಮುಕ್ತನಾಂದ ರೈ ಕಾಸರಗೋಡು ಬಿ.ಮಣಿರಾಜ ಶೆಟ್ಟಿ ಆಯಾಯ ತಾಲೂಕುಗಳಿಂದ ವರದಿ £ೀಡಿದರು.

ಅಧಿಕಾರ ಸ್ವೀಕಾರ
ಬಂಟರ ಯಾನೆ ನಾಡವರ ಮಾತೃ ಸಂಘದ ನೂತನ ಪದಾಧಿಕಾರಿಗಳಾದ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷರಾಗಿ, ಗೋಪಾಲಕೃಷ್ಣ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ, ಕಾವು ಹೇಮನಾಥ ಶೆಟ್ಟಿ ಉಪಾಧ್ಯಕ್ಷರಾಗಿ, ಕೃಷ್ಣಪ್ರಸಾದ್ ರೈ ಕೋಶಾಧಿಕಾರಿಯಾಗಿ, ಸಂಪಿಗೇಡಿ ಸಂಜೀವ ಶೆಟ್ಟಿ ಜತೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಸಭೆಯಲ್ಲಿ ನೂತನ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ, ಯಾವುದೇ ಪ್ರತಿಫಲಾಪೇಕ್ಷೆ ದೊರೆಯದಂತೆ ದುಡಿಯುವುದಾಗಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಸಮಾಜ ಬಾಂಧವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಇತರ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು. ಅದೇ ರೀತಿ ಶತಮಾನೋತ್ಸವ ಕಟ್ಟಡ £ರ್ಮಾಣ ಯೋಜನೆಗೆ ಮಾಡಬೇಕಾದ ಭೂಮಿಗೆ ಸಂಬಂಧಪಟ್ಟ ದಾಖಲೆಗಳಲ್ಲಿ ಇದ್ದ ಹಲವಾರು ಲೋಪದೋಷಗಳನ್ನು ಸರಿಪಡಿಸಲಾಗಿದೆ. 16-3-2019 ರಂದು ಪ್ರಾಧಿಕಾರದ ಸಭೆಯು ಕಟ್ಟಡ £ರ್ಮಾಣ ನಕಾಶೆಯ ಮಂಜೂರಾತಿಗೆ ಆದೇಶ £ೀಡುವ £ರ್ಣಯವನ್ನು ಮಾಡಿತ್ತು.

ಪ್ರಾಧಿಕಾರದ ಅನುಮೋದನೆಯಂತೆ ಮೂರು ನೆಲಮಾಳಿಗೆಗಳ ವಾಹನ ಪಾರ್ಕಿಂಗ್, 21 ಮಾಳಿಗೆಗಳ ವಾಣಿಜ್ಯ ಸಂಕೀರ್ಣದೊಂದಿಗೆ ನಾಲ್ಕು ಸಭಾಭವನಗಳು ಮತ್ತು ಮಾತೃ ಸಂಘದ ಆಡಳಿತ ಕಚೇರಿ ಹೀಗೇ ಒಟ್ಟು 7,35,000 ಚದರ ಅಡಿ ಕಟ್ಟಡ £ರ್ಮಾಣ ಮಾಡುವ ನಕಾಶೆಗೆ £ಗದಿಪಡಿಸಿದ ಶುಲ್ಕವನ್ನು ದಿನಾಂಕ 13.3.2019ರಂದು ಪಾವತಿಸಿ ನಕಾಶೆಗೆ ಮಂಜೂರಾತಿ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಅಗ್ನಿಶಾಮಕ ಇಲಾಖೆ , ಪರಿಸರ ಇಲಾಖೆ, ಮಾಲಿನ್ಯ £ಯಂತ್ರಣ ಇಲಾಖೆಯಿಂದ £ರಾಪೇಕ್ಷಣಾ ಪತ್ರಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 220 ಕೋಟಿ ರೂ ಆಗಿರುತ್ತದೆ. ಡಾ. ಎಂ. ಮೋಹನ್ ಆಳ್ವರವರು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆಯನ್ನು £ೀಡಿದ್ದಾರೆ. ಡಾ. ಎ.ಜೆ. ಶೆಟ್ಟಿಯವರು ಮಹಾಪೋಷಕರಾಗಿ ಕಟ್ಟಡ £ರ್ಮಾಣ ಸಮಿತಿಯಲ್ಲಿದ್ದು, ಸಹಕಾರ ನೀಡಲಿದ್ದಾರೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಲೆಕ್ಕಪರಿಶೋಧಕ ಎಚ್.ಆರ್.ಶೆಟ್ಟಿ ಉಪಸ್ಥಿತರಿದ್ದರು. ಅಜಿತ್ ಕುಮಾರ್ ರೈ ಮಾಲಾಡಿ ಸ್ವಾಗತಿಸಿದರು. ವಸಂತ ಶೆಟ್ಟಿ ವಂದಿಸಿದರು. ಸುಖೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ £ರೂಪಿಸಿದರು.


Spread the love

Exit mobile version