ಬಕ್ರೀದ್ ಸಂದರ್ಭದಲ್ಲಿ ಪ್ರಾಣಿ ಬಲಿಗೆ ಮತ್ತು ಗೋ ಸಾಗಾಟಗಾರರಿಗೆ ಸೂಕ್ತ ಭದ್ರತೆ ನೀಡಲು ಎಸ್ ಡಿ ಪಿ ಐ ಆಗ್ರಹ
ಮಂಗಳೂರು:- ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿಗೆ ಮತ್ತು ಗೋಸಾಗಾಟಗಾರರಿಗೆ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸುವಂತೆ ದಕ ಜಿಲ್ಲಾ ಎಸ್ ಡಿ ಪಿ ಐ ಸಂಘಟನೆ ಆಗ್ರಹಿಸಿದೆ
ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವು ಇದೇ ಬರುವ ಜುಲೈ 31 ರಂದು ಶುಕ್ರವಾರ ಸರಕಾರ ಮತ್ತು ಆರೋಗ್ಯ ಇಲಾಖೆ ನಿರ್ದೇಶಿಸಿದ ರೀತಿಯಲ್ಲಿ ನಡೆಯಲಿದೆ. ಬಕ್ರೀದ್ ಹಬ್ಬದ ಪ್ರಯುಕ್ತ ಪ್ರಾಣಿ ಬಲಿ ರ್ಪಿಸಿ ದಾನ ನೀಡುವುದು ಈ ಹಬ್ಬದ ಪ್ರಮುಖ ಅಂಶವಾಗಿದೆ. ಆದರೆ ಇತ್ತೀಚಿನಿಂದ ಜಿಲ್ಲಾದ್ಯಂತ ಸಂಘಪರಿವಾರದ ಗೂಂಡಾಗಳು ಪಶು ಸಂಗೋಪನೆ ಇಲಾಖೆಯ ಪರವಾನಿಗೆ ಇದ್ದರೂ ದನ ಸಾಗಾಟದ ಹೆಸರಿನಲ್ಲಿ ಮಾರಕಾಯುಧಗಳಿಂದ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಾ ಇದೆ.
ಕಳೆದೊಂದು ತಿಂಗಳಿನಿಂದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಗೋಸಾಗಾಟಗಾರರನ್ನು ಗುರಿಯಾಗಿಸಿ ಸಂಘಪರಿವಾರದ ಗೂಂಡಾಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿ ದರ್ಜನ್ಯ ನಡೆಸಿದ್ದಾರೆ. ಆದರೆ ಪೋಲಿಸರು ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇರುವುದರಿಂದ ಅಂತಹ ಘಟನೆಗಳು ಪುನರಾರ್ತನೆ ಯಾಗುತ್ತಲೇ ಇದೆ.
ಈಗಾಗಲೇ ದ.ಕ ಜಿಲ್ಲಾಧಿಕಾರಿಯವರು ಗೋಸಾಗಾಟಗಾರರ ಮೇಲೆ ದಾಳಿ ನಡೆಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಇದು ಅಭಿನಂದನಾರ್ಹವಾಗಿದೆ.ಆದರೆ ಇದನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸದೆ ಕಾರ್ಯಪ್ರವೃತಗೊಳಿಸಬೇಕು.
ಹಾಗಾಗಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ಪ್ರಮುಖ ಅಂಶವಾಗಿರುವುದರಿಂದ ಜಾನುವಾರು ಸಾಗಾಟಗಾರರಿಗೆ ಸೂಕ್ತ ಭದ್ರತೆಯನ್ನು ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಭದ್ರತೆಯನ್ನು ಒದಗಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಎಸ್.ಎಚ್ ಪ್ರಕಟಣೆಯಲ್ಲಿ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ