Home Mangalorean News Kannada News ಬಜಪೆ : ಸರ ಅಪಹರಣ ಆರೋಪಿಯ ಬಂಧನ

ಬಜಪೆ : ಸರ ಅಪಹರಣ ಆರೋಪಿಯ ಬಂಧನ

Spread the love

ಬಜಪೆ : ಸರ ಅಪಹರಣ ಆರೋಪಿಯ ಬಂಧನ

ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಕುತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ಎಳೆದು ಪರಾರಿಯಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ

ಬಂಧಿತನನ್ನು ಮಂಗಳೂರು ಪಡುಪೆರಾರ ನಿವಾಸಿ ತಿಲಕ್ (27) ಎಂದು ಗುರುತಿಸಲಾಗಿದೆ.

 ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಶ್ರೀಮತಿ ಪುಪ್ಪಾ ರವರು ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ವೇಳೆಯಲ್ಲಿ  ಓಬ್ಬ ವ್ಯಕ್ತಿಯು ಕಪ್ಪು ಬಣ್ಣದ ಸ್ಕೂಟರಿನಲ್ಲಿ ಬಂದು ಶ್ರೀಮತಿ ಪುಷ್ಪಾರವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿಸರವನ್ನು ಎಳೆದುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ ಅ.ಕ್ರ:343/2018 ಕಲಂ 394 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

 ಅಲ್ಲದೇ ದಿನಾಂಕ 17.12.2018 ರಂದು ಕೊಳಂಬೆ ಗ್ರಾಮದ ಹೊಯಿಗೆಪದವು ನಿವಾಸಿ ಕು.ಅಕ್ಷತಾರವರು ತನ್ನ ಸಹೋದರಿ ಅಶ್ವಿತರೊಂದಿಗೆ ತನ್ನ ಮನೆಯಿಂದ ಬಜಪೆಗೆ ಕಜೆಪದವು ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ ಕೊಳಂಬೆ ಗ್ರಾಮದ, ಹೊಯಿಗೆಪದವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಓರ್ವ ವ್ಯಕ್ತಿಯು ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರಿನಲ್ಲಿ ಬಂದು, ಫಿರ್ಯಾದಿದಾರರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಬಜಪೆ ಠಾಣೆಯಲ್ಲಿ ಅ.ಕ್ರ:348/2018 ಕಲಂ 394 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಒಂದೇ ತಿಂಗಳಲ್ಲಿ ನಡೆದ ಈ ಎರಡು ಸರ ಅಪಹರಣ ಪ್ರಕರಣದ ಆರೋಪಿಯ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ದಿನಾಂಕ 19-12-2018 ರಂದು ಈ ಪ್ರಕರಣದಲ್ಲಿ ಸರ ಅಪಹರಣ ಮಾಡಿದ ವ್ಯಕ್ತಿಯನ್ನೇ ಹೋಲುವ ವ್ಯಕ್ತಿಯೊಬ್ಬ ಮೂಡುಪೆರಾರ ಗ್ರಾಮದ, ಬಲವಂಡಿ  ದೈವಸ್ಥಾನ ರಸ್ತೆ ಬಳಿ ಕಂಡು ಬಂದಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಯನ್ನು ನಡೆಸಿ ಆರೋಪಿಯಿಂದ ಕಳವು ಮಾಡಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತನಿಂದ ರೂ. 25000 ಮೌಲ್ಯದ ಒಂದು ಚಿನ್ನದ ಸರ, ರೂ 15000 ಮೌಲ್ಯದ ಚಿನ್ನದ ಸರ, ಹೋಂಡಾ ಅಕ್ಟಿವಾ ದ್ವಿಚಕ್ರ ವಾಹನ, ನಗದು ರೂ 3700 ವಶಪಡಿಸಿಕೊಳ್ಳಲಾಗಿದೆ.

 ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್ ರವರ ಆದೇಶದಂತೆ ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ(ಕಾಮತ್ತುಸು), ಉಮಾ ಪ್ರಶಾಂತ್(ಅ ಮತ್ತು ಸ) ರವರ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಮಂಜುನಾಥ ಶೆಟ್ಟಿರವರ ನಿರ್ದೇಶನದಂತೆ ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿ., ಪೊಲೀಸ್ ಉಪನಿರೀಕ್ಷಕರಾದ ಶಂಕರ ನಾಯರಿ, ಸಿಬ್ಬಂದಿಗಳಾದ ಹೆಚ್.ಸಿ. 2082 ಪ್ರಕಾಶ್ ಮೂರ್ತಿ, ಹೆಚ್.ಸಿ. 552      ಚಂದ್ರಮೋಹನ್., ಪಿ.ಸಿ. 436 ಪ್ರೇಮಾನಂದ, ಪಿ.ಸಿ. 990 ಶಶಿಧರ, ಪಿ.ಸಿ. 648 ಲಕ್ಷ್ಮಣ ಕಾಂಬ್ಳೆ, ಪಿ.ಸಿ. 2429   ಮುತ್ತಣ್ಣ ಶಿರಗ, ಪಿ.ಸಿ. 917 ಹೇಮಂತ ಗೌಡ., ಎಪಿಸಿ 2789 ಉಮೇಶ್., ಪಿಸಿ 2443 ಕಿರಣ್ ಕುಮಾರ್ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.


Spread the love

Exit mobile version