ಬಜಾಲ್ ಫೈಸಲ್ ನಗರಕ್ಕೆ 3 ಕೋಟಿ ರೂಪಾಯಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ
ಮಂಗಳೂರು: ಬಜಾಲ್ ಫೈಸಲ್ ನಗರ ತೀರ ಒಳ ಪ್ರದೇಶವಾಗಿದ್ದು ಇದರ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮೂರು ಕೋಟಿ ರೂಪಾಯಿ ಅನುದಾನದ ಮೂಲಕ ರಸ್ತೆ ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಬಜಾಲ ಫೈಸಲ್ ನಗರ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯಿಂದ 1 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.
ಕೆಲವು ಕಡೆಗಳಲ್ಲಿ ರಸ್ತೆ ತೀರಾ ಇಕ್ಕಟ್ಟಾಗಿದ್ದು ಇದನ್ನು 5.5 ಮೀಟರ್ ಅಗಲಗೊಳಿಸಬೇಕಾಗಿದೆ. ಇದಕ್ಕೆ ಜನರೂ ಕೂಡಾ ಉದಾರವಾಗಿ ವರ್ತಿಸಬೇಕು. ರಸ್ತೆ ಅಗಲೀಕರಣ ಸದುದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಕೆಲಸ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಇಲ್ಲಿ ಒಳಚರಂಡಿ ವ್ಯವಸ್ಥೆ ಆಗಬೇಕಾಗಿದೆ. ಇದನ್ನೂ ಕೂಡಾ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಜನರು ಸಹಭಾಗಿತ್ವವನ್ನು ನಿರೀಕ್ಷಿಸಲಾಗುತ್ತಿದೆ. ಜನರು ಇಲಾಖೆಗಳ ಜೊತೆ ಸಹಕರಿಸಿದರೆ ಮಾತ್ರ ಇದು ಯಶಸ್ವಿಯಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೋ, ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಸುಮಯ್ಯ ಅಶ್ರಫ್, ಅಬ್ಧುಲ್ ರವೂಫ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಅಶ್ರಫ್ ಬಜಾಲ್, ಭರತೇಶ್ ಅಮೀನ್, ಆನಂದ ರಾವ್, ಅಬೂಬಕ್ಕರ್, ಅಹ್ಮದ್ ಬಾವಾ, ಹನೀಫ್, ಫಕ್ರುದ್ದೀನ್, ರತ್ನಮ್ಮ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳಾದ ಕಾಂತರಾಜ್, ರವಿ ಹೆಗ್ಡೆ, ಪಾಲಿಕೆ ಇಂಜಿನಿಯರಗಳಾದ ಯಶವಂತ, ಗಣಪತಿ, ಗುತ್ತಿಗೆದಾರ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಸಚಿವ ಮಹಾದೇವ ಪ್ರಸಾದ್ ಸಜ್ಜನ ರಾಜಕಾರಣಿ: ಜೆ.ಆರ್.ಲೋಬೊ
ಮಂಗಳೂರು: ಅಖಾಲಿಕವಾಗಿ ನಿಧನರಾದ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸಜ್ಜನರಾಜಕಾರಣಿ ಮತ್ತು ಸದಾ ತಾಳ್ಮೆಯಿಂದ ಇದ್ದವರು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಅವರು ಸಂತಾಪ ಸೂಚಕ ಸಂದೇಶ ನೀಡಿ ಅವರು ಎಂಥ ಒತ್ತಡದಲ್ಲೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಸದನದಲ್ಲೂ ಅವರು ವಿನಯತೆಯನ್ನು ಕಾಪಾಡುತ್ತಿದ್ದರು.ಅವರು ಕಿರಿಯರಿಗೆ ಮಾರ್ಗದರ್ಶಕ ಎಂದರಲ್ಲದೆ ಅವರು ಅನುಕರಣೆಗೆ ಯೋಗ್ಯರು ಎಂದರು.
ಅವರ ನಿಧನದಿಂದ ಸಹಕಾರಿ ಕ್ಷೇತ್ರ ನಿಷ್ಠಾವಂತರನ್ನು ಕಳೆದುಕೊಂಡಂತಾಗಿದೆ. ಅವರ ಅಗಲುವಿಕೆಯನ್ನು ಅವರ ಮನೆಯರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.