ಬಜಾಲ್ ಫೈಸಲ್ ನಗರ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ
ಮಂಗಳೂರು: ಬಜಾಲ್ ಫೈಸಲ್ ನಗರ ತೀರ ಒಳಪ್ರದೇಶವಾಗಿದ್ದು ಇದರ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮೂರು ಕೋಟಿ ರೂಪಾಯಿ ಅನುದಾನದ ಮೂಲಕ ರಸ್ತೆ ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಬಜಾಲ ಫೈಸಲ್ ನಗರ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂಪಾಯಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯಿಂದ 1 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.
ಕೆಲವು ಕಡೆಗಳಲ್ಲಿ ರಸ್ತೆ ತೀರಾ ಇಕ್ಕಟ್ಟಾಗಿದ್ದು ಇದನ್ನು 5.5 ಮೀಟರ್ ಅಗಲಗೊಳಿಸಬೇಕಾಗಿದೆ. ಇದಕ್ಕೆ ಜನರೂ ಕೂಡಾ ಉದಾರವಾಗಿ ವರ್ತಿಸಬೇಕು. ರಸ್ತೆ ಅಗಲೀಕರಣ ಸದುದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಕೆಲಸ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಇಲ್ಲಿ ಒಳಚರಂಡಿ ವ್ಯವಸ್ಥೆ ಆಗಬೇಕಾಗಿದೆ. ಇದನ್ನೂ ಕೂಡಾ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಜನರು ಸಹಭಾಗಿತ್ವವನ್ನು ನಿರೀಕ್ಷಿಸಲಾಗುತ್ತಿದೆ. ಜನರು ಇಲಾಖೆಗಳ ಜೊತೆ ಸಹಕರಿಸಿದರೆ ಮಾತ್ರ ಇದು ಯಶಸ್ವಿಯಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೋ, ಮುಖ್ಯಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಸುಮಯ್ಯ ಅಶ್ರಫ್, ಅಬ್ಧುಲ್ ರವೂಫ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಅಶ್ರಫ್ ಬಜಾಲ್, ಭರತೇಶ್ ಅಮೀನ್, ಆನಂದ ರಾವ್, ಅಬೂಬಕ್ಕರ್, ಅಹ್ಮದ್ ಬಾವಾ, ಹನೀಫ್, ಫಕ್ರುದ್ದೀನ್, ರತ್ನಮ್ಮ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳಾದ ಕಾಂತರಾಜ್, ರವಿ ಹೆಗ್ಡೆ, ಪಾಲಿಕೆ ಇಂಜಿನಿಯರಗಳಾದ ಯಶವಂತ, ಗಣಪತಿ, ಗುತ್ತಿಗೆದಾರ ನಾಗಯ್ಯ ಶೆಟ್ಟಿ ಉಪಸ್ಥಿತರಿದ್ದರು.