Home Mangalorean News Kannada News ಬಜೆಟ್ ಬಗ್ಗೆ ವಿರೋಧ ಪಕ್ಷಗಳಿಗೆ ಮಾಹಿತಿಯ ಕೊರತೆ: ಸಚಿವ ಖಾದರ್

ಬಜೆಟ್ ಬಗ್ಗೆ ವಿರೋಧ ಪಕ್ಷಗಳಿಗೆ ಮಾಹಿತಿಯ ಕೊರತೆ: ಸಚಿವ ಖಾದರ್

Spread the love

ಬಜೆಟ್ ಬಗ್ಗೆ ವಿರೋಧ ಪಕ್ಷಗಳಿಗೆ ಮಾಹಿತಿಯ ಕೊರತೆ: ಸಚಿವ ಖಾದರ್

ಮಂಗಳೂರು: ರಾಜ್ಯ ಬಜೆಟ್ ಬಗ್ಗೆ ಮಾಹಿತಿಯ ಕೊರತೆಯಿಂದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಿಗೆ ಈ ಹಿಂದಿನ ಬಜೆಟ್ ನಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಲಾಗಿದ್ದು, ಅವು ಮುಂದುವರಿಯಲಿವೆ. ಪ್ರಸಕ್ತ ಬಜೆಟ್ ಕೇವಲ 10000 ಕೋಟಿ ರೂ.ಗಳ ಹೆಚ್ಚುವರಿ ಕಾರ್ಯಕ್ರಮ ಒಳಗೊಂಡಿದೆ. ಸಿದ್ಧ ರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಸರಕಾರಗಳೆರಡರ ಬಜೆಟ್ ಕಾರ್ಯಕ್ರಮಗಳು ಜಾರಿಗೆ ಬರಲಿದೆ. ಎಲ್ಲಾ ಶಾಸಕರು ಸರಕಾರದ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ನಿಗದಿತ ಅವಧಿಯೊಳಗೆ ಅನುದಾನ ಸದ್ಭಳಕೆ ಮಾಡಲು ಸಹಕರಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.


Spread the love

Exit mobile version