Home Mangalorean News Kannada News ಬಜ್ಪೆ: ಕಾರು ಡಿಕ್ಕಿ – ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಗಾಯ

ಬಜ್ಪೆ: ಕಾರು ಡಿಕ್ಕಿ – ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಗಾಯ

Spread the love

ಬಜ್ಪೆ: ಕಾರು ಡಿಕ್ಕಿ – ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗೆ ಗಾಯ

ಬಜ್ಪೆ: ಬಜ್ಪೆಯಲ್ಲಿ ಭಾನುವಾರ ನಡೆದ ಅಪಘಾತವೊಂದರಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗಾಯಗೊಂಡ ಘಟನೆ ನಡೆದಿದೆ.

ಪೋಲಿಸ್ ಮೂಲಗಳ ಪ್ರಕಾರ ಭಾನುವಾರ ಮಧ್ಯಾಹ್ನ 1:30ಕ್ಕೆ ತೆಂಕಯಡಪದವು ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಕಾಲ್ನಡಿಗೆಯಲ್ಲಿ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರು (ಆರ್ಸಿ ನಂ ಕೆಎ 19 ಎಂಡಿ 6298) ರಾಜೇಶ್ ನಾಯ್ಕ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಕಾರು ನಿಲ್ಲಿಸದೆ ವೇಗವಾಗಿ ಹೋಗಿದ್ದು. ನಂತರ 112 ಹೊಯ್ಸಳ ವಾಹನದ ಸಹಾಯದಿಂದ ಗುರುಪುರ ಜಂಕ್ಷನ್ನಲ್ಲಿ ಕಾರನ್ನು ತಡೆದು ಠಾಣೆಗೆ ತರಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಅವರ ಎರಡು ಮೊಣಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಪವನ್ ಕುಮಾರ್ ರವರ ದೂರಿನ ಮೇರೆಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 9/2024 ಯು/ಎಸ್ 279, 337 ಐಪಿಸಿ, 134(ಎ)(ಬಿ) ಯಂತೆ ಕಾರು ಚಾಲಕನ ವಿರುದ್ಧ ಎಫ್ ಐಆರ್ ದಾಖಲಾಗಿರುತ್ತದೆ.


Spread the love

Exit mobile version