ಬಡವರ ನೋವಿಗೆ ಸ್ಪಂದಿಸಲು, ರಾಜಕೀಯದಲ್ಲಿ ಇದ್ದೇನೆ: ಶಾಸಕ ಭರತ್ ಶೆಟ್ಟಿ
ಮಂಗಳೂರು: ಸಮಾಜ ಸೇವೆಯೇ ರಾಜಕೀಯದ ಮೂಲ ಉದ್ದೇಶ ವಾಗಬೇಕು, ನಾನು ಕೂಡ ನೊಂದವರ ಸೇವೆ ಹಾಗೂ ಬಡವರ ನೋವಿಗೆ ಸ್ಪಂದಿಸಲು, ರಾಜಕೀಯದಲಿ ಇದ್ದೇನೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ವೈ ಭರತ್ ಶೆಟ್ಟಿ ಹೇಳಿದರು.
ಅವರು ನಾಗರಿಕ ಸಮಿತಿ ಕುಳಾಯಿ ಇದರ ವತಿಯಿಂದ ಊರ ನಾಗರಿಕರ ಪರವಾಗಿ ಅಭಿನಂದನಾ ಸಮಾರಂಭದಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವೈದ್ಯರಾಗಿರುವುದರಿಂದ ಜನರ ಕಷ್ಟ ಕಾರ್ಪಣ್ಯ ಗಳನ್ನು ಹತ್ತಿರದಿಂದ ಕಂಡಿದು ಸಮಾಜ ಸೇವೆಗೆ ಮೊದಲ ಅದತ್ಯೆ ನೀಡುತ್ತೆನೆ ಎಂದರು.
ದ ಕ ಜಿಲ್ಲಾ ಗ್ರಾಹಕರ ಒಕ್ಕೂಟದ ಅಧ್ಯಕ್ಷ ಎಂ ಜೆ ಸಾಲಿಯಾನ್ ಅಭಿನಂದನಾ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಮ ನಾ ಪ ಸದಸ್ಯ ಗಣೇಶ್ ಹೊಸಬೆಟ್ಟು, ಡಿಂಕಿ ಐಸ್ ಕ್ರೀಮ್ ಮಾಲಕ ಗಿಲ್ಬರ್ಟ್ ಪಿಂಟೋ, ಕುಳಾಯಿ ಬದ್ರಿಯ ಜುಮ್ಮಾ ಮಸೀದಿಯ ಕಾರ್ಯ ದರ್ಶಿ ಅಬ್ದುಲ್ ಹಮೀದ್, ನಾಗರಿಕ ಸಮಿತಿ ಅಧ್ಯಕ್ಷ ಭರತ್ ಶೆಟ್ಟಿ, ಕಾರ್ಯದರ್ಶಿ ಗಂಗಾಧರ್ ಬಂಜನ್, ಸತೀಶ್ ಅಮೀನ್, ರಮೇಶ್ ಅಳಪೆ , ವರುಣ್ ಚೌಟ, ರತನ್ ಎಚ್ ಪಿ ಸಿ ಎಲ್, ಜನಾರ್ಧನ್ ಸಾಲಿಯಾನ್, ಗಣೇಶ್ ಕುಲಾಲ್, ಬೇಬಿ ಟೀಚರ್, ಹರೀಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ನಾಗೇಶ್ ಕುಲಾಲ್ ನಿರೂಪಿಸಿದರು. ಜಯರಾಮ್ ಆಚಾರ್ಯ ವಂದಿಸಿದರು.