ಬದುಕಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಳ್ನಲ್ಲಿವೆ: ಒಡಿಯೂರುಶ್ರೀ

Spread the love

ಬದುಕಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಳ್ನಲ್ಲಿವೆ: ಒಡಿಯೂರುಶ್ರೀ

ಮುಂಬಯಿ: ಅಯ್ಯಪ್ಪ ದೇವರು ಸಾಮರಸ್ಯದ ದೇವರು. ಇಂತಹ ದೇವರ ಪ್ರತಿಷ್ಠೆಯ ಮಂದಿರದ ಸಂಭ್ರಮದಲ್ಲಿರುವ ಭಕ್ತರೆಲ್ಲ್ಲರ ಮುಖಗಳಲ್ಲಿ ಐಸ್ರದ ಕಳೆ ತುಂಬಿರುವುದು ಸಂತೋಷದಾಯಕ. ನುಕುಲದ ಬಾಳಿಗೆ ನೆರಳು ನೀಡುವ ಕ್ಷೇತ್ರಗಳು ನೆರೂಳ್‍ನಲ್ಲಿದೆ ಎಂದರೆ ತಪ್ಪಾಗಲಾರದು. ಇಂತಹ ನೆರೂಳ್‍ನ ನೆರಳು ಬಲವಾಗಲು ಧರ್ಮದ ಪ್ರಜ್ಞೆ ಹುಟ್ಟಿಬರಬೇಕಾಗಿದೆ. ಸಂಕಲ್ಪ ಶಕ್ತಿ ಸಾಕಾರವಾಗಿರುವುದರಿಂದ ಇಲ್ಲಿ ಮಂದಿರ ನಿರ್ಮಾಣ ಸಾಧ್ಯವಾಗಿದೆ. ನಮ್ಮಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯದ ಸದ್ಗುಣಗಳು ಬೆಳೆದಾಗ ಇವೆಲ್ಲವೂ ಕೂಡಿ ಬರುವುದು. ಧರ್ಮ ರಕ್ಷಣೆ ಎಲ್ಲಿ ಇರುತ್ತದೋ ಅಲ್ಲಿ ಆಧ್ಯಾತ್ಮಕದ ಬೆಳಕು ಬೆಳಗಿರುತ್ತದೆ. ಎಲ್ಲಿ ನಿರ್ಮಲ ಮನಸ್ಸು ಇರುವುದಿಲ್ಲವೋ ಅಲ್ಲಿ ಭಗವಂತನ ಕೃಪೆ ಇರಲಾಸಾಧ್ಯ. ಕೆ.ಡಿ ಶೆಟ್ಟಿ ಅವರು ನೆರೂಳ್‍ನಲ್ಲಿ ಮಾತ್ರವಲ್ಲ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ತವರೂರ ಅನೇಕ ದೈವದೇವಸ್ಥಾನಗಳ ಏಳಿಗೆಗೆ ಶ್ರಮಿಸಿದ ಧಾರ್ಮಿಷ್ಠರು. ಅವರ ಹಾಗೂ ಪದಾಧಿಕಾರಿಗಳ ಅವಿರತ ಶ್ರಮದ ಈ ನೆರೂಳ್‍ನ ಮಂದಿರ ಇತಿಹಾಸದ ಪುಟದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆಯುವಂತಾಗಲಿ. ಇಲ್ಲಿನ ಕ್ಷೇತ್ರದಲ್ಲಿ ಅಧ್ಯಾತ್ಮದ ಜ್ಯೋತಿ ಹಚ್ಚಿರಿ ಆ ಮೂಲಕ ಸರ್ವ ಭಕ್ತರ ಹೃದಯಗಳಲ್ಲಿ ಬೆಳಕು ಬೆಳಗಲಿ. ಈ ಶುಭಾವಸರದಲ್ಲಿ ಮಂದಿರದ ಸ್ಥಾಪನೆಗೆ ಕಾರಣಕರ್ತ ಸರ್ವರಿಗೂ ಅಭಿವಂದನೆಗಳು. ಧರ್ಮ ನಂದಾದೀಪವಾಗಲಿ. ಭಕ್ತಿಯ ಸಿಂಚನವಾಗಲಿ ಎಂದು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರುನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ನವಿ ಮುಂಬಯಿ ಇಲ್ಲಿನ ನೆರೂಲ್ ಶ್ರೀಮಣಿಕಾಂದ ಸೇವಾ ಸಂಘಂ ಇದರ ನೆರೂಲ್‍ನಲ್ಲಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ ಶ್ರೀ ಗಣಪತಿ, ಶ್ರೀ ಅಯ್ಯಪ್ಪ, ಶ್ರೀ ದುರ್ಗಾದೇವಿ ಮಂದಿರದ ನೂತನ ಕಟ್ಟಡವನ್ನು ಉದ್ಘಾಟಿಸಿ ನೆರೆದ ಸದ್ಭಕ್ತರನ್ನುದ್ದೇಶಿಸಿ ಒಡಿಯೂರುಶ್ರೀ ಹರಸಿದರು.

ಇಂದಿಲ್ಲಿ ಶನಿವಾರ ಸಂಜೆ ನವಿಮುಂಬಯಿ ನೆರೂಲ್ ರೈಲ್ವೇ ಸ್ಟೇಷನ್‍ನ ಸಮೀಪದಲ್ಲಿನ ಕ್ಷೇತ್ರದ ಸಭಾಂಗಣದಲ್ಲಿ
ನೆರೂಲ್ ಶ್ರೀಮಣಿಕಾಂದ ಸೇವಾ ಸಂಘಂ ಅಧ್ಯಕ್ಷ ಚೆಲ್ಲಡ್ಕ ದಡ್ದಂಗಡಿ ಕುಸುಮೋದರ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಅಯ್ಯಪ್ಪ, ಶ್ರೀ ದುರ್ಗಾದೇವಿಯ ಬಿಂಬ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಶೋತ್ಸವ ಮಹೋತ್ಸವದ ಧಾರ್ಮಿಕ ಸಭೆಗೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ತುಳುನಾಡು ಉಳಿಯ ಬೇಕಾದರೆ ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳು ಉಳಿಯ ಬೇಕಾಗಿದೆ. ಇಲ್ಲಿಯ ನೆಲ, ಜಲ, ನದಿ, ಅರಣ್ಯಗಳು ಉಳಿಯಬೇಕು. ಧರ್ಮ ರಕ್ಷಣೆಯ ಜೊತೆಜೊತೆಗೆ ಇದಕ್ಕೂ ಸರ್ವರ ಸಹಯೋಗವಿರಲಿ ಎಂದು ತಿಳಿಸಿದರು.

ಮುಖ್ಯ ಅತಿಥಿsಯಾಗಿ ಚರಿಷ್ಮಾ ಬಿಲ್ಡರ್ಸ್‍ನ ಕಾರ್ಯಾಧ್ಯಕ್ಷ ಸುಧೀರ್ ವಿ.ಶೆಟ್ಟಿ, ಗೌರವ ಅತಿಥಿsಗಳಾಗಿ ಸಂಸದ ನಳಿನ್‍ಕುಮಾರ್ ಕಟೀಲು, ಶಾಸಕಿ ಮಂದಾವತಿ ಮ್ಹಾತ್ರೆ, ಶಾಸಕ ಪ್ರಶಾಂತ್ ಠಾಕೂರ್, ನವಿ ಮುಂಬಯಿ ಮೇಯರ್ ಸುಧಾಕರ ಸೋನಾವಣೆ, ಸ್ಥಳೀಯ ನಗರ ಸೇವಕಿ ಶಿಲ್ಪಾ ಎಸ್.ಕಾಂಬ್ಳಿ, ವಿ.ಜಯಂತ್ ಸುತಾರ್, ಶಾಸಕ ಸುಧೀರ್ ಬಿ.ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ನಗರ ಸೇವಕ ಇಥಪೆ ರವೀಂದ್ರ ಉದ್ಧಾವ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಧ್ಯಾನ ಮಂದಿರ ನಾಮಕರಣ ಘೋಷಣೆ ಮಾಡಿದರು.

ಮುಖ್ಯ ಅತಿಥಿü ಸ್ಥಾನದಿಂದ ಸುಧೀರ್ ಶೆಟ್ಟಿ ಮಾತನಾಡಿ ದೇವಸ್ಥಾನ ದೈವಸ್ಥಾನದ ಜೊತೆಗೆ ಬಡವರಿಗೆ ಸಹಾಯ ನೀಡುತ್ತಿರುವ ಕೆ.ಡಿ ಶೆಟ್ಟಿ ಅವರು ನಿಜವಾಗಿ ಓರ್ವ ಸಮಾಜ ಸೇವಕರಾಗಿದ್ದಾರೆ. ವಿದ್ಯಾದಾನಕ್ಕೂ ಅವರ ಅನನ್ಯ ಸೇವೆ ಮೆಚ್ಚುಗೆಯದ್ದು. ಇಂತಹ ಮಹಾನೀಯರಿಗೆ ನನ್ನ ಸಂಪೂರ್ಣ ಸಹಯೋಗವಿದೆ ಎಂದರು.

ಈ ದೇಶದ ಜನತೆ ಶಬರಿಮಲೆಯಲ್ಲಿನ ಅಯ್ಯಪ್ಪ ದರ್ಶನಕ್ಕೆ ಬೆಟ್ಟ ಹತ್ತುತ್ತಾರೆ. ಶಬರಿಮಾಲೆ ಯಾತ್ರೆÀ ಮಾಡುತ್ತಾರೆ, ಅಂತಹ ಅಯ್ಯಪ್ಪ ದೇವರನ್ನೇ ನೆರೂಳ್‍ಗೆ ಬರಮಾಡಿ ಪ್ರತಿಷ್ಠಾಪಿಸಿ ಇರುವುದು ಪುಣ್ಯಾಧಿ ಕೆಲಸವಾಗಿದೆ. ಅಸ್ಪ್ರಶ್ಯತೆ ಇಲ್ಲದ ಏಕೈಕ ಕ್ಷೇತ್ರ ಶಬರಿ ಮಾಲೆ ಆಗಿದೆ. ಹರಿಹರರು ಒಂದೇ ಎನ್ನುವ ಶ್ರೇಷ್ಠ ಕ್ಷೇತ್ರವೂ ಹೌದು. ವ್ರತ, ಜಪ ಇತ್ಯಾದಿ ಕಟ್ಟಳುಗಳು ಇಲ್ಲಿನ ಧಾರ್ಮಿಕ ಸಿದ್ಧಾಂತಗಳು. ಆದರೆ ನೆರೂಳ್‍ನಲ್ಲಿ ಪುರುಷರಂತೆ ಮಹಿಳೆಯರೂ ಅಯ್ಯಪ್ಪ ದೇವರನ್ನು ಆರಾಧಿಸುವ ಪುಣ್ಯ ಕ್ಷೇತ್ರ ಆಗಿರುವುದು ಅಭಿನಂದನೀಯ. ಸಮಯ ನಿರಾಕಾರ, ಗಡಿಯಾರ ಸಾಧನ. ಅಂತೆಯೇ ಭಗವಂತ ಸಾಧನ ಆದರೆ ದೇವಸ್ಥಾನ ನಿರಾಕಾರ. ಇಂತಹ ನಿರಾಕಾರ ಸಮಾಜವೇ ಹಿಂದೂ ಸಮಾಜ. ಇಂತಹ ಧರ್ಮ ಸಂಸ್ಕಾರಕ್ಕೆ ಮುಂಬಯಿಗರು ಮಾದರಿ ಆಗಿದ್ದಾರೆ ಎಂದು ಸಂಸದ ಕಟೀಲು ತಿಳಿಸಿದರು.

ಮಂದತಾಯಿ ಮ್ಹಾತ್ರೆ ಮಾತನಾಡಿ ಮಂಗಳೂರು ಜನತೆ, ಬಂಟ ಜನರು ತುಂಬಾ ಪರಿಶ್ರಮಿಗಳು. ಸಮಾಜಕ್ಕೆ ಇವರ ಸಹಯೋಗ ಬಹಳಷ್ಟಿದೆ. ದಾನಶೂರರು, ಸಮಾಜ ಪ್ರಿಯರು ಆಗಿರುವ ನಿಮ್ಮಿಂದ ಸಂಸ್ಕಾರಯುತ ಕೆಲಸ ಮಾಡಲು ಸಾಧ್ಯವಾಗಿದೆ. ಅತೀವ ಸಮಾಜ ಕಳಕಳಿಯುಳ್ಳ ತಾವುಗಳು ಸಮಾಜ ಮೆಚ್ಚುವ ಕೆಲಸ ಮಾಡುತ್ತಿದ್ದೀರಿ. ತಮಗೆಲ್ಲರಿಗೂ ಅಭಿನಂದನೆಗಳು ಎಂದರು.

ದೇವರ ಮುಂದೆ ನಾವೆಲ್ಲವನ್ನೂ ಮರೆತು ನಿಂತಿದ್ದೇವೆ.ಇಲ್ಲಿ ದ್ವೇಷ ವೈಷಮ್ಯದಿಂದ ಯಾವ ಉಪಯೋಗವೂ ಇಲ್ಲ. ಈ ಬಗ್ಗೆ ರಾಜಕೀಯ ಸಲ್ಲದು. ದೇವರ ಕೆಲಸಗಳಿಗೆ ಸನ್ಯಾಸಿನಂತಿರಬೇಕು ಎಂದು ಮೇಯರ್ ಸೋನವಣೆ ಅಭಿಪ್ರಾಯ ಪಟ್ಟರು.

ಹಿರಿಯ ಮುತ್ಸ್ಸದ್ಧಿ ಎಂ.ಡಿ ಶೆಟ್ಟಿ ಮಾತನಾಡಿ ಕೆ.ಡಿ ಶೆಟ್ಟಿ ನನ್ನೊಂದಿಗೆ ಬಾಲ್ಯದಿಂದಲೂ ಇದ್ದು ಇಂದು ಸಾಧನೀಯ ಯಶಸ್ಸು ಕಂಡಿದ್ದಾರೆ ಎನ್ನಲು ಅಭಿಮಾನವೆನಿಸುತ್ತಿದೆ. ಬಂಟರ ಸಂಘಕ್ಕೂ ಅವರ ಸಹಯೋಗ ಅಪಾರವಾದದ್ದು. ಶೈಕ್ಷಣಿಕ, ಸಾಮಾಜಿಕ ಸೇವೆಗೆ ತ್ವರಿತವಾಗಿ ಸ್ಪಂದಿಸುತ್ತಿರುವ ಕೆ.ಡಿ ಶೆಟ್ಟಿ ಓರ್ವ ಹೃದಯವಂತ ಕ್ರಿಯಾಶೀಲ ವ್ಯಕ್ತಿ ಆಗಿದ್ದು ಇಂತಹ ನೂರಾರು ಮಹಾನೀಯರು ಹುಟ್ಟು ಬರಲಿ ಎಂದÀು ಹಾರೈಸಿದರು.

ನನ್ನನ್ನು ಇಂದು ಸನ್ಮಾನಿಸಿದ್ದೀರಿ. ಆದರೆ ನಾನು ಅದನ್ನು ಎಂದೂ ಬಯಸಿದವನಲ್ಲ. ಸನ್ಮಾನಕ್ಕಾಗಿ ನಾನು ಯಾವ ಸೇವೆಯನ್ನು ಮಾಡುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಮಂದಿರದ ಆರಂಭದ ದಿನದ ಹೊರೆ ಕಾಣಿಕೆಯಿಂದ ಇಂದಿನವರೆಗೆ ಇಲ್ಲಿನ ಎಲ್ಲಾ ಕಾರ್ಯಕ್ರಮಗಳು ಜನಸ್ತೋಮದಿಂದ ಯಶಸ್ವಿ ೀ ಆಗಿರುವುದಕ್ಕೆ ಹೃದಯ ತುಂಬಿ ಬಂದಿದೆ. ನಮ್ಮ ಸರ್ವ ದಾನಿಗಳೇ ನಿಜವಾದ ದೇವರು. ಅವರನ್ನೆಂದೂ ಮರೆಯುವಂತಿವಿಲ್ಲ. ನಿಜವಾದ ಸನ್ಮಾನ ದಾನಿಗಳಿಗೆ ಸಲ್ಲಬೇಕು. ನಮ್ಮ ಮುಂದಿನ ಜವಾಬ್ದಾರಿ ಹೆಚ್ಚಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನಾವೆಲ್ಲರೂ ಒಂದಾಗಿ ಜೊತೆ ಗೂಡಿ ದೇವರ ಸೇವೆಗೆ ಬದ್ಧರಾಗೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಕುಸುಮೋದರ ಡಿ.ಶೆಟ್ಟಿ ತಿಳಿಸಿದರು.

ಇತರೇ ಅತಿಥಿsಗಳು ಸಂದರ್ಭೋಚಿತವಾಗಿ ಮಾತನಾಡಿ ಶ್ರೀ ಕ್ಷೇತ್ರವು ಬೆಳಗುತ್ತಾ ಕೃಪೆಯನ್ನು ಅರಸಿ ಬಂದ ಸಮಸ್ತ ಭಕ್ತರಿಗೆ ನೆಮ್ಮದಿ ನೀಡುವ ತಾಣವಾಗಿ ಬೆಳಗಲಿ ಎಂದು ಆಶಯವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಮತ್ತು ಸರಿತಾ ಕೆ.ಶೆಟ್ಟಿ, ಸುರೇಶ್ ಜಿ.ಶೆಟ್ಟಿ ಮತ್ತು ಅನಿತಾ ಎಸ್.ಶೆಟ್ಟಿ, ದಾಮೋದರ ಎಸ್.ಶೆಟ್ಟಿ ಮತ್ತು ಸ್ವರ್ಣಲತಾ ಡಿ.ಶೆಟ್ಟಿ, ಡಾ| ಶಿವ ಎಂ.ಮೂಡಿಗೆರೆ ಮತ್ತು ಜ್ಯೋತಿ ಶಿವ ಮೂಡಿಗೆರೆ, ಹರಿ ಶೆಟ್ಟಿ ಮತ್ತು ವಿದ್ಯಾ ಹರಿ ಶೆಟ್ಟಿ, ಕಿಶೋರ್ ಕುಮಾರ್ ಎಂ.ಶೆಟ್ಟಿ ಮತ್ತು ಪ್ರಮೋದ ಕೆ.ಶೆಟ್ಟಿ, ಸಂಜೀವ ಎನ್.ಶೆಟ್ಟಿ ಮತ್ತು ಜಯಂತಿ ಎಸ್.ಶೆಟ್ಟಿ, ದಯಾನಂದ ಶೆಟ್ಟಿ ಮತ್ತು ಶೋಭಾ ಡಿ.ಶೆಟ್ಟಿ ದಂಪತಿಗಳನ್ನು, ಖಾಂದೇಶ್ ಭಾಸ್ಕರ್ ಶೆಟ್ಟಿ, ಸುಂದರ ಯು.ಪೂಜಾರಿ, ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಿನ್ನ ಪದಕ ವಿಜೇತ ಸ್ವೀಕೃತ್ ಎಸ್.ಶೆಟ್ಟಿ ಮತ್ತಿತರರನ್ನು ಹಾಗೂ ಶಂಕರನಾರಾಯಣ ನಂಬೂದಿರಿ, ವಾಸ್ತುತಜ್ಞ ಮಹೇಶ್ ಮುನಿಯಂಗಲ ಅವರಿಗೆ ಚಿನ್ನದ ಉಂಗುರ ತೊಡಿಸಿ ಶ್ರೀಗಳು ಸನ್ಮಾನಿಸಿ ಅಭಿನಂದಿಸಿ ಅನುಗ್ರಹಿಸಿದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ಅಭಿಷೇಕ ಪುರ್ವಾಂಗಂ, ಧನುಲಗ್ನ ಸುಮುಹೂರ್ತ, ಅಯ್ಯಪ್ಪ ದೇವರಿಗೆ ಬ್ರಹ್ಮಕಲಶ ಅಭಿಷೇಕ, ಸಹಸ್ರಾ ಕಲಶ (1001) ಅಭಿಷೇಕ, ಕಲನ್ಯಾಸ, ತಥ್ವಾನ್ಯಾಸ, ಪ್ರಸನ್ನ ಪೂಜೆ, ಮಹಾ ಪೂಜೆ, ಅವಸ್ತುತ ಬಲಿ, ಪಲ್ಲ ಪೂಜೆ, ಮಹಾ ರಂಗಪೂಜೆ, ಉತ್ಸವ ಬಲಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು. ಶ್ರೀ ಗುರುಪ್ರಸಾದ್ ಭಟ್ ಘನ್ಸೋಲಿ ಮಾರ್ಗದರ್ಶನದಲ್ಲಿ ವೇದಾಗಮ ತಜ್ಞ ಋತ್ವಿಜರ ಸಹಯೋಗದೊಂದಿಗೆ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಮತ್ತು ವೇ| ಮೂ| ಕಳತ್ತೂರು ಉದಯ ತಂತ್ರಿ ಪೂಜಾಕೈಂಕರ್ಯಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಸೌರಭ ಮುಂಬಯಿ ತಂಡದ ಮುಖ್ಯಸ್ಥ ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಚೆಲ್ಲಡ್ಕ ದಡ್ಡಂಗಡಿ ರಾಧಾಕೃಷ್ಣ ಡಿ.ಶೆಟ್ಟಿ, ಸೇವಾ ಸಂಘದÀ ಅಧ್ಯಕ್ಷ ಕಿಶೋರ್‍ಕುಮಾರ್ ಎಂ.ಶೆಟ್ಟಿ, ಉಪಾಧ್ಯಕ್ಷ ದಾಮೋದರ ಎಸ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುಂದರ ಯು.ಪೂಜಾರಿ, ಜತೆ ಕಾರ್ಯದರ್ಶಿ ಹರಿ ಎಲ್.ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ ಮಾಡ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಎನ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಇಂದಿರಾ ಎಸ್.ಶೆಟ್ಟಿ, ವಿಶ್ವಸ್ಥ ಸದಸ್ಯರುಗಳಾದ ರವಿ ಆರ್.ಶೆಟ್ಟಿ, ಪ್ರಕಾಶ್ ಮಹಾಧಿಕ್, ಹರೀಶ್ ಎನ್.ಶೆಟ್ಟಿ, ಮಹೇಶ್ ಡಿ.ಪಟೇಲ್, ನರೇನ್ ಭಾೈ ಪಾಟೇಲ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಾಮಕೃಷ್ಣ ಎಸ್.ಶೆಟ್ಟಿ, ಅಣ್ಣಪ್ಪ ಕೋಟೆಕರ್, ಸುರೇಂದ್ರ ಆರ್.ಶೆಟ್ಟಿ, ನಿತ್ಯಾನಂದ ವಿ.ಶೆಟ್ಟಿ, ಸದಾಶಿವ ಎನ್.ಶೆಟ್ಟಿ, ಮೋಹನ್‍ದಾಸ್ ಕೆ.ರೈ, ಮೇಘರಾಜ ಎಸ್.ಶೆಟ್ಟಿ, ಸುರೇಶ್ ಆರ್.ಶೆಟ್ಟಿ, ವಿಶ್ವನಾಥ ಡಿ.ಶೆಟ್ಟಿ, ಇಂದಿರಾ ಎಸ್.ಶೆಟ್ಟಿ ಸೇರಿದಂತೆ ಅತ್ಯಾಧಿಕ ಸಂಖ್ಯೆಯ ಭಕ್ತಾಭಿಮಾನಿಗಳು ಹಾಜರಿದ್ದರು.

ಶ್ರೀಗಳÀು ಹಾಗೂ ಅತಿಥಿüವರ್ಯರನ್ನು ಕುಂಭಾ ಸ್ವಾಗತದೊಂದಿಗೆ ಮಂದಿರಕ್ಕೆ ಬರಮಾಡಿ ಕೊಳ್ಳಲಾಗಿದ್ದು, ಶ್ರೀಗಳು ದೇವರಿಗೆ ಆರತಿಗೈದು ಪೂಜಿಸಿ ನೂತನ ಕಟ್ಟಡಕ್ಕೆ ಚಾಲನೆಯನ್ನಿತ್ತರು. ಹೇಮಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ದಯಾಸಾಗರ್ ಚೌಟ ನಿರೂಪಿಸಿದರು. ಬಾಬಾ ಪ್ರಸಾದ್ ಅರಸ ಸನ್ಮಾನಿತರು ಹಾಗೂ ದಾನಿಗಳನ್ನು ಪರಿಚಯಿಸಿದರು. ಸುರೇಶ್ ಜಿ.ಶೆಟ್ಟಿ ಕಾರ್ಯಕ್ರಮ ಧನ್ಯವದಿಸಿದರು.


Spread the love