ಬರಂದೆ ಕುಲ್ಲಯೆ ನಾಟಕ 50ರ ಸಂಭ್ರಮ
ಉಡುಪಿ: ಉಡುಪಿಯ ಪ್ರಸಿದ್ಧ ವೃತ್ತಿಪರ ತಂಡ ಅಭಿನಯ ಕಲಾವಿದರ ಈ ವರ್ಷದ ಯಶಸ್ವಿ ನಾಟಕ ಬರಂದೆ ಕುಲ್ಲಯ ಇದರ 50 ಪ್ರದರ್ಶನದ ಸುವರ್ಣ ಸಂಭ್ರಮ ಕಾರ್ಯಕ್ರಮ ಅಲೆವೂರಿನ ಸಂಕಲ್ಪ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಿ4 ಡೆವಲಪ್ಪರ್ಸ್ ನ ಕಾರ್ತಿಕ್ ನೆರವೇರಿಸಿದರು. ಸಮಾಜಸೇವಕ ಲೀಲಾಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ದೇಶದ ಸೈನಿಕನ ಬದುಕಿನ ಕಥಾವಸ್ತುವನ್ನು ಒಳಗೊಂಡ ಬರಂದೆ ಕುಲ್ಲಯೆ ನಾಟಕ 50 ಪ್ರದರ್ಶನ ಗೊಂಡ ಸವಿನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸೈನಿಕ ಬೋಗೀಶ್ ಆಚಾರ್ಯ ಕಟಪಾಡಿ ಗಿನ್ನೆಸ್ ದಾಖಲೆ ಬಾಲೆ ತನುಶ್ರೀ ಪಿತ್ರೋಡಿ , ನಿರ್ದೇಶಕ ದಿನೇಶ್ ಅತ್ತಾವರ್ ಮತ್ತು ಕಾರ್ತಿಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ತಂಡದ ನಿರ್ವಾಹಕ ಕಾರ್ತಿಕ್ ಕಡೇಕಾರ್ ಮತ್ತು ನಾಟಕ ರಚನೆಕಾರ ವಿಕ್ರಂ ಮಂಚಿ ಅವರನ್ನು ಅಬಿನಂದಿಸಲಾಯಿತು.
ವೇದಿಕೆಯಲ್ಲಿ ಮೋಹನ್ ತಂತ್ರಿ,ರೂಪೇಶ್ ಕಲ್ಮಾಡಿ, ರಂಗನಟ ರತ್ನಾಕರ ಕಲ್ಯಾಣಿ ಜತಿನ್ ಕಡೆಕಾರು, ಸಕರಾಮ್ ಶೆಟ್ಟಿ, ಶೇಖರ್ ಸುವರ್ಣ, ಯತೀಶ್ ಕುಮಾರ್, ಪ್ರಕಾಶ್ ಭಟ್, ಅಶೋಕ್ ಬಂಡಾರಿ, ರಾಜೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ನಿಟ್ಟೂರು ಮತ್ತು ತಂಡದ ಅಧ್ಯಕ್ಷ ಉಮೇಶ್ ಅಲೆವೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಭಿನಯಾ ತಂಡದ ಹೊಸ ನಾಟಕ ಒಂಚಿ ತೂಪಿನಿ ಇದರ ಶೀರ್ಷಿಕೆ ಬಿಡುಗಡೆಗೊಳಿಸಲಾಯಿತು. ತಂಡದ ಕಲಾವಿದರನ್ನು, ತಂತ್ರಜ್ನರನ್ನು ಅಬಿನಂದಿಸಲಾಯಿತು.
ರವಿನಂದನ್ ಭಟ್ ಮತ್ತು ರಾಜೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿನೋದ್ ಮಂಚಿ ಸ್ವಾಗತಿಸಿದರು. ಕಾರ್ಯಕ್ರಮದ ಬಳಿಕ ತನುಶ್ರೀ ನೃತ್ಯ ಮತ್ತು ಬರಂದೆ ಕುಲ್ಲಯೆ ನಾಟಕ ಪ್ರದರ್ಶನಗೊಂಡಿತು.