Home Mangalorean News Kannada News ಬಳ್ಕುಂಜೆ ಮನೆ ಕಳ್ಳತನ – ಲಕ್ಷಾಂತರ ಮೌಲ್ಯದ ಸೊತ್ತು ಸಮೇತ ಆರೋಪಿ ಬಂಧನ

ಬಳ್ಕುಂಜೆ ಮನೆ ಕಳ್ಳತನ – ಲಕ್ಷಾಂತರ ಮೌಲ್ಯದ ಸೊತ್ತು ಸಮೇತ ಆರೋಪಿ ಬಂಧನ

Spread the love

ಬಳ್ಕುಂಜೆ ಮನೆ ಕಳ್ಳತನ – ಲಕ್ಷಾಂತರ ಮೌಲ್ಯದ ಸೊತ್ತು ಸಮೇತ ಆರೋಪಿ ಬಂಧನ

ಮಂಗಳೂರು: ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಜುಲೈ 3 ರಂದು ರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆಎಂಬಲ್ಲಿರುವ ಶ್ರೀಮತಿ ಸಾಗೀರ ಎಂಬವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮೀಟಿ ಮನೆಯ ಕಪಾಟಿನ ಒಳಗಿದ್ದಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮುಲ್ಕಿ ಠಾಣೆಗೆ ಸಾಗೀರ ಎಂಬವರು ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ಆರೋಪಿ ಚಿಕ್ಕಮಗಳೂರು ನಿವಾಸಿ ಅಬೂಬಕ್ಕರ್ @ ಇತ್ತೆ ಬರ್ಪೆ ಅಬೂಬಕ್ಕರ್,(69) ಎಂಬಾತನನ್ನು ಮುಲ್ಕಿ ಠಾಣಾ ಪಿ.ಎಸ್.ಐ. ವಿನಾಯಕ ಬಾವಿಕಟ್ಟಿ ಮತ್ತು ಸಿಬ್ಬಂದಿಗಳು ಜುಲೈ 20 ರಂದು ದಸ್ತಗಿರಿ ಮಾಡಿದ್ದು ಆರೋಪಿಯಿಂದ ಪ್ರಕರಣದ ಕಳವಿಗೆ ಸಂಬಂಧಿಸಿದ ಒಟ್ಟು 19 ಗ್ರಾಂ ಚಿನ್ನಾಭರಣಗಳನ್ನು ಮತ್ತು ಕಳವು ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್ ಜುಪಿಟರ್ ಸ್ಕೂಟರ್ ಮತ್ತು ಇತರ ಸಾಧನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,89,400/- ರೂ ಆಗಿರುತ್ತದೆ.

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯಕ್ತರಾದ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ಮತ್ತು ಮುಲ್ಕಿ ಠಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಯ್ಕೇರಿಕರ್ ರವರ ನೇತೃತ್ವದಲ್ಲಿ ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ. ವಿನಾಯಕ ಬಾವಿಕಟ್ಟಿ, ಎ.ಎಸ್.ಐ ಸಂಜೀವ ಎ.ಪಿ, ಹೆಡ್ ಕಾನ್ ಸ್ಟೇಬಲ್ ಕಿಶೋರ್ ಕೋಟ್ಯಾನ್, ಚಂದ್ರಶೇಖರ್, ಶಶಿಧರ, ಮಹೇಶ್, ಜಾಯ್ಸ್ ಸುಚಿತಾ ಡಿ ಸೋಜ, ಕಾನ್ ಸ್ಟೇಬಲ್ ಗಳಾದ ಅರುಣ್ ಕುಮಾರ್, ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ರವರು ಸಹಕರಿಸಿರುತ್ತಾರೆ.


Spread the love

Exit mobile version