ಬಳ್ಳಾರಿಯಲ್ಲಿ 11ನೇ ಕರ್ನಾಟಕ ಪ್ರಾಂತೀಯ ಯುವಜನೋತ್ಸವ 2019 ಕ್ಕೆ ಚಾಲನೆ
ಬಳ್ಳಾರಿ:“ಭೂಮಿಯ ಆರೈಕೆಯ ಮೂಲಕ ನವ ವಿಶ್ವದ ನಿರ್ಮಾಣ” ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಕಥೋಲಿಕ ಯುವಜನ ಆಯೋಗವು ತನ್ನ 11ನೇ ಪ್ರಾಂತೀಯ ಯುವಜನೋತ್ಸವ 2019ನ್ನು ಬಳ್ಳಾರಿಯ ಆರೋಗ್ಯಮಾತಾ ಪುಣ್ಯಕ್ಷೇತ್ರದ ಆಧ್ಯಾತ್ಮ ಸಭಾಗಂಣದಲ್ಲಿ 24ನೇ ಅಕ್ಟೋಬರ್ 2019ರಂದು ವಿದ್ಯುಕ್ತವಾಗಿ ಸಸಿಗೆ ನೀರನ್ನು ಎರೆಯುವುದರ ಮೂಲಕ ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪೂಜ್ಯ ನಿಜಗುಣಪ್ರಭು ತೊಟಾಂದಾರ್ಯರು ಮಾತನಾಡುತ್ತಾ ಭಾರತ ದೇಶವು ಬಹು ಸಂಸ್ಕøತಿಯನ್ನು ಹೊಂದಿದ್ದು ನಾನು ಕ್ರೈಸ್ತ, ಹಿಂದು, ಮುಸ್ಲಿಂ ಆದರೂ ನಾನು ಭಾರತೀಯ, ಭಾರತದಲ್ಲಿರುವ ಮೂಢನಂಬಿಕೆಗಳನ್ನು ಹೊಗಲಾಡಿಸುವತ್ತ ಯುವಜನರು ಕಾರ್ಯಪ್ರವøತ್ತರಾಗಬೇಕು ಹಾಗೂ ನಾನು ನೆಟ್ಟ ಮರ ನನ್ನ ಮುಂದೆ ಬೆಳೆಯಿತು ನಾನೇಕೆ ಬೆಳೆಯಲಿಲ್ಲ?ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯದೇ ಅದಕ್ಕೆ ತಕ್ಕ ಉತ್ತವರವನ್ನು ನಮ್ಮ ಜೀವನದಲ್ಲಿ ಕಂಡುಕೋಳ್ಳುವಂತಾಗವೇಕು. ಅತಂತ್ರ ತಲೆ, ಕುತಂತ್ರ ತಲೆ , ಪರತಂತ್ರ ತಲೆ, ಸ್ವತಂತ್ರ ತಲೆಯ ಅರಿವನ್ನು ನೀಡಿ ಯುವಜನರು ಯಾವಾಗಲೂ ಸ್ವತಂತ್ರ ಆಲೋಚನೆಯುಳ್ಳವರಾಗಿ ನವ ಸಮಾಜ ನಿರ್ಮಾಣ ಮಾಡುವತ್ತ ಗಮನಹರಿಸಬೇಕೆಂಬ ಸಂದೇಶವನ್ನು ನೀಡಿದರು.
ಕರ್ನಾಟಕ ರಾಜ್ಯ ಕಥೋಲಿಕ ಯುವಜನ ಆಯೋಗದ ಅಧ್ಯಕ್ಷರು ಹಾಗೂ ಬಳ್ಳರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಿರುವ ವಂ ಡಾ ಹೆನ್ರಿ ಡಿಸೋಜ, ಪುತ್ತೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಗೀರ್ ವರ್ಗೀಸ್ ಹಾಗೂ ಪೂಜ್ಯ ನಿಜಗುಣಪ್ರಭು ತೊಟಾಂದಾರ್ಯರು ಸ್ವಾಮಿಗಳು, ಮಹಾಂತ ಪ್ರಭು, ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಫಾದರ್ ಲೂರ್ದ ಮತ್ತು ಸಿಸ್ಟರ್ ಜೆಸ್ಸಿ ರೀಟಾ, ಶಾರದಮ್ಮ ಬಸವದಳ, ಫಾದರ್ ಪ್ರೇಮ್, ಸುಜಿತ್ ಅಂತೋನಿ, ಫಾದರ್ ಲೂರ್ದರಾಜ್, ಕರ್ನಾಟಕದ 14 ಧರ್ಮಕ್ಷೇತ್ರದ ಯುವನಿರ್ದೇಶಕರು ಭಾಗವಹಿಸಿದ್ದರು.
ಫಾದರ್ ಅಂತೋನಿ ದಾಸವರು ಸ್ವಾಗತಿಸಿ, ಕುಮಾರಿ ದೀಪ್ತಿ, ನಿಶಿ ಕಾರ್ಯಕ್ರಮ ನಿರೂಪಿಸಿದರು