ಬಳ್ಳಾರಿ ಎಸ್ಪಿಯಾಗಿ ಲಕ್ಷ್ಮಣ್ ನಿಂಬರಗಿ ಅಧಿಕಾರ ಸ್ವೀಕಾರ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನಗರದಲ್ಲಿ ಬುಧವಾರ ನಿರ್ಗಮಿತ ಎಸ್ಪಿ ಅರುಣ್ ರಂಗರಾಜನ್ ಅವರಿಂದ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ದು, ಚುನಾವಣಾ ಕಾರ್ಯದ ಸಲುವಾಗಿ ವರ್ಗಾವಣೆ ಆಗಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ತಿಳಿದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವೆ’ ಎಂದರು.
ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬೆನಕನಹಳ್ಳಿಯ ನಿವಾಸಿಯಾಗಿರುವ ನಿಂಬರಗಿ ಹುಬ್ಬಳ್ಳಿ ಭೂಮರೆಡ್ಡಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕೆಲಕಾಲ ಕೆಎಲ್ಇ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕ ರಾಗಿ ಸೇವೆಯಲ್ಲಿದ್ದರು.
ಅವರು, 2014ರಲ್ಲಿ ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ 104ನೇ ರ‍್ಯಾಕ್ ಪಡೆದು ಐಪಿಎಸ್ ಅಧಿಕಾರಿ
ಯಾಗಿ ಸೇವೆಯಲ್ಲಿದ್ದಾರೆ. ಈ ಮುಂಚೆ ಮಂಗಳೂರು, ಚಿತ್ರದುರ್ಗ, ಉಡುಪಿ, ಬೆಂಗಳೂರಿನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.