ಬಳ್ಳಾರಿ ಜಿಲ್ಲಾ ಎಸ್ಪಿಯಾಗಿ ಲಕ್ಷ್ಮಣ್ ಬ ನಿಂಬರಗಿ ನೇಮಕ
ಬೆಂಗಳೂರು: ಉಡುಪಿ ಜಿಲ್ಲೆಯಿಂದ ವರ್ಗಾವಣೆಗೊಂಡು ಬೆಂಗಳೂರಿನ ವಯರ್ ಲೆಸ್ ವಿಭಾಗದ ಎಸ್ಪಿಯಾಗಿದ್ದ ಲಕ್ಷ್ಮಣ್ ನಿಂಬರಗಿ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಸರಕಾರ ಸೋಮವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಇತ್ತೀಚೇಗೆ ಅಷ್ಟೆ ಉಡುಪಿಯಿಂದ ನಿರ್ಗಮಿಸಿ ವಯರ್ ಲೆಸ್ ವಿಭಾಗದಲ್ಲಿ ಅಧಿಕಾರ ವಹಿಸಿದ್ದ ನಿಂಬರಗಿ ಅವರಿಗೆ ಸರಕಾರ ಸೋಮವಾರ ಬಳ್ಳಾರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆಯಿಂದ ಚುನಾವಣೆಯ ನೆಪವೊಡ್ಡಿ ಒಲ್ಲದ ಸ್ಥಳಕ್ಕೆ ಅನೀರೀಕ್ಷಿತವಾಗಿ ನಿಂಬರಗಿ ಅವರನ್ನು ವರ್ಗಾವಣೆಗೊಳಿಸಲಾಗಿತ್ತು ಎಂಬ ದೂರುಗಳು ಕೇಳಿಬಂದಿತ್ತು. ವರ್ಗಾವಣೆಯ ಹಿಂದೆ ಹಿರಿಯ ಅಧಿಕಾರಿಗಳು ಕೈಯಾಡಿಸಿದ್ದರು ಎನ್ನಲಾಗಿತ್ತು. ಕೊನೆಗೂ ಸರಕಾರ ನಿಂಬರಗಿ ಅವರಿಗೆ ಸೂಕ್ತ ಸ್ಥಾನವನ್ನು ನೀಡಿರುವುದಕ್ಕೆ ಉಡುಪಿಯ ಪೊಲೀಸ್ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.