ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ -2018 ಘೋಷಣೆ

Spread the love

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ -2018 ಘೋಷಣೆ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ನೀಡಲಾಗುವ “ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ -2018 ಗಳನ್ನು (ಕೊಂಕಣಿ ಪುರುಷರ ವಿಭಾಗದಲ್ಲಿ) ವೈದ್ಯಕೀಯ ಸೇವಾ ವೃತ್ತಿಯನ್ನು ಸಲ್ಲಿಸಿ, ಹಲವಾರು ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಹಿಮೊಫಿಲಿಯಾ, ತಲೆಸ್ಸೇಮಿಯಾ ಸೊಸೈಟಿಯ ಸ್ಥಾಪಕರಾಗಿ ಹಾಗೂ ಚೇತನಾ ಮಕ್ಕಳ ಅಭಿವೃದ್ಧಿ ಕೇಂದ್ರ ಸ್ಥಾಪಕ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ. ಹಾಗೂ ಮಂಗಳೂರಿನ ‘ಸೇವಾ ಭಾರತಿ ಟ್ರಸ್ಟ’ನ ಟ್ರಸ್ಟಿಯಾಗಿ ಮತ್ತು ಅಂಧ ಮಕ್ಕಳ ವಸತಿ ಶಾಲೆಯ ಸಮಾಲೋಚಕರಾಗಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಮಂಗಳೂರಿನ ಖ್ಯಾತ ಡಾ. ಯು. ವಿ. ಶೆಣೈ, ಇವರನ್ನು ‘ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ-2018 ನೀಡಲು ನಿರ್ಣಾಯಕ ಸಮಿತಿ ನಿರ್ಧರಿಸಿದೆ.

ಅಲ್ಲದೇ (ಕೊಂಕಣಿ ಮಹಿಳಾ ವಿಭಾಗದಲ್ಲಿ) ದ.ಕ. ಜಿಲ್ಲೆಯ ಪುತ್ತೂರಿನಲ್ಲಿ 1970 ರಿಂದ ಶ್ರೀ ರಾಮಕೃಷ್ಣ ಸೇವಾ ಸಮಾಜದ ಮೂಲಕ ಅನಾಥಾಶ್ರಮ ನಡೆಸುತ್ತಿರುವ ಹಾಗೂ ಇವರು ಹಿರಿಯ ನಾಗರಿಕರಿಗಾಗಿ ‘ಆನಂದಾಶ್ರಮ ಸೇವಾ ಟ್ರಸ್ಟ್’ ಸ್ಥಾಪಿಸಿ ‘ಜೀವನ ಸಂಧ್ಯಾ’ ವೃದ್ಧಾಶ್ರಮ ನಡೆಸುತ್ತಾ ಬಂದಿದ್ದಾರೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಂಡು ಸಾವಿರಾರು ಮಂದಿಗೆ ದೃಷ್ಠಿ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡು ಮತ್ತು ‘ಆಧಾರ’ ಎಂಬ ದಾದಿಯರ ತರಬೇತಿ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ, ಚಿಕಿತ್ಸಾಲಯಗಳಿಗೆ, ಧಾರ್ಮಿಕ ಕೇಂದ್ರಗಳಿಗೆ, ವೃದ್ಧಾಶ್ರಮಗಳಿಗೆ, ಅಂಗವಿಕಲರಿಗೆ, ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ, ಬಹುಮುಖ ಸಾಮಾಜಿಕ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಜನಪ್ರಿಯರೆನಿಸಿದ ಡಾ. ಪಿ. ಗೌರಿ ಪೈ, ಪುತ್ತೂರು ಇವರಿಗೆ ‘ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ-2018 ನೀಡಲು ನಿರ್ಣಾಯಕ ಸಮಿತಿ ನಿರ್ಧರಿಸಿದೆ.

ಎರಡೂ ಪ್ರಶಸ್ತಿಗಳನ್ನು ಮಣಿಪಾಲ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಶ್ರೀ ಟಿ. ವಿ. ಮೋಹನದಾಸ ಪೈಯವರು ಪ್ರಾಯೋಜಕರಾಗಿರುತ್ತಾರೆ. ಈ ಎರಡೂ ಪ್ರಶಸ್ತಿಗಳು 1.00 ಲಕ್ಷ ರೂಪಾಯಿ ಮೊತ್ತ, ಶಾಲು, ಸ್ಮರಣಿಕೆ, ಹಾಗೂ ಮಾನಪತ್ರವನ್ನು ಒಳಗೊಂಡಿರುತ್ತದೆ. ದಿ. 18-11-2018 ಮಂಗಳೂರಿನ ಟಿ. ವಿ. ರಮಣ ಪೈ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿಶ್ವ ಕೊಂಕಣಿ ಕೇಂದ್ರ ಪ್ರಕಟಣೆ ತಿಳಿಸಿದೆ.


Spread the love