ಬಸ್ರೂರಿನಲ್ಲಿ ಆರ್.ಜಿ.ಪಿ.ಎಸ್. ವತಿಯಿಂದ ಪರಿಶಿಷ್ಠ ಪಂಗಡದವರವರೊಂದಿಗೆ ಗ್ರಾಮ ಸಂವಾದ ಹಾಗೂ ಗ್ರಾಮ ವಾಸ್ತವ್ಯ
ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಸಮುದಾಯದೊಂದಿಗೆ ಗ್ರಾಮ ಸಂವಾದ ಹಾಗೂ ಪರಿಶಿಷ್ಠ ಪಂಗಡದ ಕುಟುಂಬದವರೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕುಂದಾಪುರದ ಬಸ್ರೂರಿನ ಪಾನಕದಕಟ್ಟೆ ಯಲ್ಲಿ ಆಯೋಜಿಸಲಾಗಿತ್ತು ಮಾರ್ಚ್ 1 ರಂದು ಜರುಗಿತು.
ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಇಂಟೆಕ್ ಅಧ್ಯಕ್ಷರಾದ ರಾಕೇಶ್ ಮಲ್ಲಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ರಾಜ್ಯ ಸಂಚಾಲಕರಾದ ಬಿ.ಎಮ್.ಸಂದೀಪ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕಿ ರೋಷನಿ ಓಲಿವೆರಾ, ಗ್ರಾಮಪಂಚಾಯತ್ ಸದಸ್ಯೆ ಶಶಿಕಲಾ, ದಲಿತ ಸಂಘದ ತಾಲೂಕು ಸಂಚಾಲಕ ರಾಜು ಬೆಟ್ಟದಮನೆ, ದಲಿತ ಸಂಘದ ತಾಲೂಕು ಸಂಚಾಲಕ ಸಂಘಟಕ ಪ್ರಭಾಕರ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ವೈ.ಬಿ.ರಾಘವೇಂದ್ರ, ಡಾ|ಸುನೀತಾ ಶೆಟ್ಟಿ, ಸತೀಶ್ ಜಪ್ತಿ, ಹೀರಾ, ಮನೋಜ್ ಹಾಗೂ ಇನ್ನಿತರರು ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಶಿಷ್ಠ ಪಂಗಡದ ಕುಟುಂಬದವರೊಂದಿಗೆ ಸಂವಾದ ಮತ್ತು ಸ್ಥಳೀಯ ಪರಿಶಿಷ್ಠ ಪಂಗಡದ ಸಮುದಾಯದವರಿಂದ ಸಾಂಪ್ರದಾಯಿಕ ಡೋಲು ವಾದನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.