Home Mangalorean News Kannada News ಬಸ್ ನಲ್ಲಿ  ಪಿಕ್ ಪಾಕೆಟ್ ಮಾಡಿದ ಕುಖ್ಯಾತ ಮೂರು ಅಂತರ್ ಜಿಲ್ಲಾ ಮಹಿಳೆಯರ ಬಂಧನ

ಬಸ್ ನಲ್ಲಿ  ಪಿಕ್ ಪಾಕೆಟ್ ಮಾಡಿದ ಕುಖ್ಯಾತ ಮೂರು ಅಂತರ್ ಜಿಲ್ಲಾ ಮಹಿಳೆಯರ ಬಂಧನ

Spread the love

ಬಸ್ ನಲ್ಲಿ  ಪಿಕ್ ಪಾಕೆಟ್ ಮಾಡಿದ ಕುಖ್ಯಾತ ಮೂರು ಅಂತರ್ ಜಿಲ್ಲಾ ಮಹಿಳೆಯರ ಬಂಧನ

ಉಡುಪಿ:  ಅಕ್ಟೋಬರ್ 20 ರಂದು ಸುಮಾರು 18.00 ಗಂಟೆಯಿಂದ 18.10 ಗಂಟೆಯ ಮದ್ಯೆ ಉಡುಪಿ ಸಿಟಿ ಬಸ್ ನಿಲ್ಯಾಣ ದಿಂದ ಕಡಿಯಾಳಿಗೆ ಹೋಗುವಾಗ ಬಸ್ ನಲ್ಲಿ ದಾರಿ ಮಧ್ಯೆ ಮೂರು ಜನ ಅಪರಿಚಿತ ಮಹಿಳೆಯರು ಪಿರ್ಯಾದುದಾರರಿಗೆ ಗೊತ್ತಾಗದ ರೀತಿಯಲ್ಲಿ ಅವರು ಹೆಗಲ ಮೇಲೆ ಹಾಕಿದ ಬ್ಯಾಗ್ ನ ಜಿಪ್ ತೆಗದು ಅದರ ಒಳಗಡೆ ಇದ್ಮ ಪರ್ಸ್ ಸಮೇತಾ ಆದರದ 4 ಎಟಿಎಮ್ ಕಾರ್ಡ್, ಓಟರ್ ಐಡಿ, ನಗದು ಹಣ ರೂ 5000 ನ್ನು ಕಳವು ಮಾಡಿ ನಂತರ ಎಟಿಎಮ್ ಬಳಸಿ ರೂ 25,000/- ನ್ನು ಉಡುಪಿಯ 2 ಎಟಿಎಂ ಹಣವನ್ನು ನಗದೀಕರಣಗೊಳಿಸಿದ್ದು ಈ ಬಗ್ಗೆ ಪಿರ್ಯಾದಿ ಶ್ರೀಮತಿ ಆರ್ಚನಾ ರಾವ್ ಎನ್ನುವವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ , ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು,ಇ ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ  ಕವಿತಾ (33) ಗುಂಡೂರು ಬಳ್ಳಾರಿ, ಸಬಿತಾ (35) ಬಳ್ಳಾರಿ, ಹಾಗೂ ಲತಾ (25) ಬಳ್ಳಾರಿ ರವರನ್ನು ದಿನಾಂಕ ಅಕ್ಟೋಬರ್ 21 ರಂದು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತಾರೆ.

ಆರೋಪಿಗಳು ಕುಖ್ಯಾತ ಪಿಕ್ ಪಾಕೆಟ್ ಮಾಡುವ ಅಂತರ್ ಜಿಲ್ಲಾ, ಕಳ್ಳರಾಗಿದ್ದು ದೇವಸ್ಥಾನ, ಮಾಲ್‌ಗಳು, ಬಸ್‌ನಿಲ್ಯಾಣ ಮತ್ತು ಬಸ್ ಗಳಲ್ಲಿ ಮೂರ್‌ರಿಂದ ನಾಲ್ಕು ಜನ ಮಹಿಳೆಯರು, ಎಳೆಯ ಮಕ್ಕಳೊಂದಿಗೆ ಗುಂಪಾಗಿ ಹೋಗಿ ವ್ಯಾನಿಟಿ ಬ್ಯಾಗ್ ಮತ್ತು ಪರ್ಸ್ ಇರುವ ಹೆಂಗಸರ ಬಳಿ ನಿಂತು ಅನಾವಶ್ಯಕ ಒತ್ತಡ ಹಾಕಿ ಅವರ ಮೈಗೆ ತಾಗಿ ನಿಂತು ಬ್ಯಾಗ್ ಒಳಗೆ ಇರುವ ಪರ್ಸ ಗಳನ್ನು ಚಾಲಾಕಿ ತನದಿಂದ ತೆಗೆದು ಅದರಲ್ಲಿರುವ ಬೆಲೆಬಾಳುವ ಸ್ವತ್ತುಗಳನ್ನು ಕ್ಷಣ ಮಾತ್ರದಲ್ಲಿ, ಕಳವು ಮಾಡುತ್ತಾರೆ.

ಈ ಕಾರ್ಯಚಾರಣೆಯು ಶ್ರೀ ಎನ್. ವಿಷ್ಣುವರ್ಧನ್, ಐಪಿಎಸ್, ಮಾನ್ನ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲೆ ರವರ ಆದೇಶದಂತೆ, ಶ್ರೀ ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಟಿ.ಆರ್ ಜೈಶಂಕರ್, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಮಂಜುನಾಥ ಪಿ ಐ ಮಣಿಪಾಲ ಉಡುಪಿ ನಗರ ಠಾಣೆಯ ಪಿಎಸ್‌ಐಗಳಾದ ಸಕ್ತಿವೇಲು, ಮತ್ತು ವಾಸಪ್ಪ ನಾಯ್ಕ, ಸಿಬ್ಬಂದಿಯವರಾದ ಎಎಸ್‌ಐ ಹರೀಶ್, ಹೆಚ್ಸಿ ಲೋಕೇಶ್, ಹೆಚ್ಸಿ ರಿಯಾಝ್ ಅಹ್ಮದ್, ಹೆಚ್‌ಸಿ ಹರ್ಷ, ಹೆಚ್. ಉಮೇಶ್‌, ಪಿಸಿ ಇಮ್ರಾನ್, ಪಿಸಿ ಸಂತೋಷ್ ರಾಠೋಡ್, ಪಿಸಿ ವಿಶ್ವನಾಥ ಶೆಟ್ಟಿ, ಮಹಿಳಾ ಸಿಬ್ಬಂದಿಗಳಾದ ಹೆಚ್ಸಿ ಶ್ರೀಮತಿ ಪಿಸಿ ವಿದ್ಯಾ, ಪಿಸಿ ರೂಪ ರವರೊಂದಿಗೆ ಚಾಲಕರಾದ ಅಶೋಕ್ ಹಾಗೂ ರಾಘವೇಂದ್ರ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ,


Spread the love

Exit mobile version