ಬಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆ
ಮಂಗಳೂರಿನ ಕಂಕನಾಡಿ ಗರಡಿ ಕ್ಷೇತ್ರದಿಂದ ಬ್ರಹ್ಮ ಬೈದರ್ಕಳ ಮೂರ್ತಿಗಳ ಭವ್ಯ ಶೋಭಾಯಾತ್ರೆಗೆ ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಚಾಲನೆ ನೀಡಿದರು.
ಭಾನುವಾರ ಬೆಳಿಗ್ಗೆ ಕಂಕನಾಡಿ ಗರಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಢಿದ ಶ್ರೀಗಳು ಬೆಳ್ತಂಗಡಿಯ ಶಿಶಿಲದಲ್ಲಿ ನಿರ್ಮಾಣವಾಗಿರುವ ಬ್ರಹ್ಮ ಬೈದರ್ಕಳ ಮತ್ತು ಇತರ ಪರಿವಾರ ದೈವಗಳ ಕ್ಷೇತ್ರದ ಸಮಸ್ತ ಕಾರ್ಯಗಳು ಯಶಸ್ವಿಯಾಗಿ ನೇರವೇರಲಿ ಎಂದು ಹಾರೈಸಿದರು. ಶೋಭಾಯಾತ್ರಾ ಸಮಿತಿಯ ಅಧ್ಯಕ್ಷರಾಗಿರುವ ಡಿ ವೇದವ್ಯಾಸ ಕಾಮತ್ ಮಾತನಾಡಿ, ತುಳುನಾಡಿನ ಸಮಸ್ತ ಜನರು ನಂಬುವ ಕೋಟಿ ಚೆನ್ನಯರು ಕೇವಲ ಪೌರಾಣಿಕ ಪುರುಷರು ಮಾತ್ರವಲ್ಲ, ಅವರು ದೈವಾಂಶ ಸಂಭೂತರೆಂದು ಇಡೀ ಮಾನವ ಕುಲವೇ ಒಪ್ಪಿಕೊಂಡಿವೆ. ಅವರ ಆರ್ಶೀವಾದದಿಂದ ಸಮಗ್ರ ತುಳುನಾಡು ಅಭಿವೃದ್ಧಿ ಕಂಡಿದೆ. ಅಂತಹ ಬ್ರಹ್ಮ ಬೈದರ್ಕಳರನ್ನು ಆರಾಧಿಸಲು ಶಿಶಿಲದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ಷೇತ್ರದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಮೂರ್ತಿಗಳ ಶೋಭಾಯಾತ್ರಾ ಸಮಿತಿಯ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿದರು.
ಕಂಕನಾಡಿ ಗರಡಿಯ ಧರ್ಮದರ್ಶಿ ಕೆ ಚಿತ್ತರಂಜನ್, ಮಾಜಿ ಎಸ್ಪಿ ಪೀತಾಂಬರ ಹೇರಾಜೆ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಮಾಜಿ ಶಾಸಕರಾದ ಮೋನಪ್ಪ ಭಂಡಾರಿ, ಎನ್ ಯೋಗೀಶ್ ಭಟ್, ಶಿಶಿಲ ಗರಡಿ ಕ್ಷೇತ್ರದ ಅನುವಂಶೀಯ ಧರ್ಮದರ್ಶಿ ಜನಾರ್ಧನ ಬಂಗೇರ ವಿ, ಶಿಶಿಲ ಕೇತ್ರದ ಗೌರವಾಧ್ಯಕ್ಷ ಹರೀಶ್ ಪೂಂಜಾ, ಗೋಕರ್ಣ ಕ್ಷೇತ್ರದ ಮೋಕ್ತೇಸರ ರವಿಶಂಕರ ಮಿಜಾರ್, ಮರೋಳಿ ಸೂರ್ಯನಾರಾಯಣ ಕ್ಷೇತ್ರದ ಗೌರವಾಧ್ಯಕ್ಷ ಗಣೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಸತ್ಯಜಿತ ಸುರತ್ಕಲ್, ಉಮಾನಾಥ ಕೋಟ್ಯಾನ್, ಮನಪಾ ಸದಸ್ಯರಾದ ರೂಪಾ ಡಿ ಬಂಗೇರ, ಸುಧೀರ್ ಶೆಟ್ಟಿ ಕಣ್ಣೂರು, ವಿಜಯ ಕುಮಾರ್ ಶೆಟ್ಟಿ, ಜಯಂತಿ ಆಚಾರ್, ಮೀರಾ ಕರ್ಕೆರ, ಸ್ಥಳೀಯ ಮುಖಂಡರಾಗಿರುವ ವಾಸುದೇವ ಕೊಠಾರಿ, ಸದಾನಂದ ಪೂಜಾರಿ ನುಂಗಿನಬೈಲು, ಸುರೇಂದ್ರ ಜಪ್ಪಿನಮೊಗರು, ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್ ಹಾಗೂ ಬೆಳ್ತಂಗಡಿಯ ಜಯಂತ್ ಕೋಟ್ಯಾನ್, ಸೋಮನಾಥ ಬಂಗೇರ, ಹರೀಶ್ ಸಾಲ್ಯಾನ್, ಗಣೇಶ್ ಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.