ಬಾಯಿಯ ಕ್ಯಾನ್ಸರ್ ತಡೆಗಟ್ಟುವುದು ಮತ್ತು ಶೀಘ್ರ ಪತ್ತೆಹಚ್ಚುವುದು: ಪ್ರಾಣರಕ್ಷಕ  ದೃಷ್ಟಿಕೋಣ

Spread the love

ಬಾಯಿಯ ಕ್ಯಾನ್ಸರ್ ತಡೆಗಟ್ಟುವುದು ಮತ್ತು ಶೀಘ್ರ ಪತ್ತೆಹಚ್ಚುವುದು: ಪ್ರಾಣರಕ್ಷಕ  ದೃಷ್ಟಿಕೋಣ.
ಲೇಖಕಿ: ಡಾ. ಅಕ್ಷತ ಕ ಣಿಯೂರು, ಸಹ ಪ್ರಾಧ್ಯಾಪಕಿ, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಾ ವಿಭಾಗ,
ಯೆನಪೊಯ ಡೆಂಟಲ್ ಕಾಲೇಜು
akshathak@yenepoya.edu.in
ಬಾಯಿಯ ಕ್ಯಾನ್ಸರ್ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ, ಆದರೆ ಇದು ತಡೆಯಬಹುದಾದ
ಕ್ಯಾನ್ಸರ್ ರೂಪಗಳಲ್ಲಿ ಒಂದಾಗಿದೆ. ಪ್ರಾರಂಭಿಕ ಪತ್ತೆ ಮತ್ತು ತಡೆಗಟ್ಟುವ ಕ್ರಮಗಳ ಮೂಲಕ ಈ ಕಾಯಿಲೆಯ
ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆರೋಗ್ಯ ತಜ್ಞರು ಜನರಿಗೆ ಅಪಾಯಕಾರಕ ಅಂಶಗಳು ಮತ್ತು
ಎಚ್ಚರಿಕೆ ಸಂಕೇತಗಳ ಬಗ್ಗೆ ಮಾಹಿತಿ ಹೊಂದಿರಲು ಸಲಹೆ ನೀಡುತ್ತಿದ್ದಾರೆ, ಇದರಿಂದ ಪ್ರಕರಣಗಳ ಸಂಖ್ಯೆ
ಕಡಿಮೆಯಾಗಬಹುದು.
ಪ್ರತಿ ವರ್ಷ ಫೆಬ್ರವರಿ 13 ರಂದು ಅಂತರಾಷ್ಟ್ರೀಯ ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಕರ ದಿನವನ್ನು
ಆಚರಿಸಲಾಗುತ್ತದೆ. ಈ ವರ್ಷದ ಆಚರಣೆಯಲ್ಲಿ ಬಾಯಿಯ ಕ್ಯಾನ್ಸರ್‌ ತಡೆಗಟ್ಟುವ ಮತ್ತು ಶೀಘ್ರ ಪತ್ತೆಹಚ್ಚುವ
ವಿಷಯದಲ್ಲಿ ಜನಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ.
ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ತುಟಿ, ಜಿಬ್, ನಾಲಿಗೆ, ಬಾಯಿ ಅಡಿಭಾಗ, ಕನ್ನಗಳು ಮತ್ತು ಗಂಟಲನ್ನು
ಪ್ರಭಾವಿಸುತ್ತದೆ. ಪ್ರಮುಖ ಅಪಾಯಕಾರಕ ಅಂಶಗಳಲ್ಲಿ ತಂಬಾಕು ಸೇವನೆ, ಮದ್ಯಪಾನದ ಅತಿಯಾದ ಸೇವನೆ, ಮತ್ತು
ಮಾನವ ಪಾಪಿಲೋಮಾ ವೈರಸ್ (HPV) ಸೋಂಕು ಸೇರಿವೆ. ದುರ್ಬಲ ಬಾಯಿಯ ಆರೈಕೆ ಮತ್ತು ಅಪೌಷ್ಟಿಕ
ಆಹಾರವೂ ಈ ಕಾಯಿಲೆಗೆ ಕಾರಣವಾಗಬಹುದು.
ಜೀವನಶೈಲಿಯ ಬದಲಾವಣೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಬಾಯಿಯ ಕ್ಯಾನ್ಸರ್ ತಡೆಗಟ್ಟಲು ಅವಶ್ಯಕ.
ಧೂಮಪಾನ ಮತ್ತು ಮದ್ಯಪಾನದ ಸೇವನೆಯನ್ನು ಕಡಿಮೆ ಮಾಡುವ ಮಹತ್ವವನ್ನು ಒತ್ತಿಹೇಳಿದಷ್ಟು ಕಡಿಮೆ. ಹಣ್ಣು-
ತರಕಾರಿಗಳ ಸಮತೋಲನಿತ ಆಹಾರವು ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಸುರಕ್ಷಿತ ಬಾಯಿಯ ಅಭ್ಯಾಸಗಳನ್ನು
ಅನುಸರಿಸುವುದು ಸಹ ಸೂಕ್ತವಾಗಿದೆ.
ಬಾಯಿಯ ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಲು ಪ್ರಾರಂಭಿಕ ಪತ್ತೆಯು ಅತ್ಯವಶ್ಯಕ. ನಿರಂತರ ಬಾಯಿಯ ಹುಣ್ಣುಗಳು,
ನಿರ್ದಿಷ್ಟ ಕಾರಣವಿಲ್ಲದ ರಕ್ತಸ್ರಾವ, ಹಲ್ಲುಗಳು ಅತಿಯಾಗಿ ಆಡುವುದು, ನಾಲಿಗೆ ಚಲನೆಗೆ ತಡೆ, ನುಂಗುವಲ್ಲಿ ತೊಂದರೆ,
ಬಾಯಿಯಲ್ಲಿ ಗುಡ್ಡೆ ಇರುವುದು, ದವಡೆಯಲ್ಲಿ ಮರಗಟ್ಟುವ ಭಾವನೆ, ಧ್ವನಿ ಬದಲಾವಣೆ, ಮತ್ತು ಕಾರಣವಿಲ್ಲದ
ತೂಕ ಇಳಿಕೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನಿಯಮಿತ ದಂತಪರೀಕ್ಷೆಗಳು ಮುಖ್ಯ ಪಾತ್ರ ವಹಿಸುತ್ತವೆ,
ಏಕೆಂದರೆ ದಂತ ವೈದ್ಯರು ಯಾವುದೇ ಅಸಾಮಾನ್ಯ ಬದಲಾವಣೆಗಳನ್ನು ಪ್ರಾರಂಭದಲ್ಲೇ ಗುರುತಿಸಬಲ್ಲರು. ಯಾವುದೇ
ಅನುಮಾನ ಇದ್ದರೆ ಅವರು ನಿಮ್ಮನ್ನು ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಕರಿಗೆ ರೆಫರ್
ಮಾಡುತ್ತಾರೆ.
ಬಾಯಿಯ ಕ್ಯಾನ್ಸರ್ ಪತ್ತೆಯಾಗದೇ ಉಳಿದರೆ ಪ್ರಾಣಾಪಾಯಕರವಾಗಬಹುದು. ಆದರೆ ಎಚ್ಚರಿಕೆಯಿಂದ, ನಿಯಮಿತ
ತಪಾಸಣೆಗಳ ಮೂಲಕ ಮತ್ತು ಆರೋಗ್ಯಕರ ಜೀವನಶೈಲಿಯ ಅನುಸರಣೆಯ ಮೂಲಕ, ವ್ಯಕ್ತಿಗಳು ತಮ್ಮ
ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ನೀವು ಯಾವುದೇ
ಲಕ್ಷಣಗಳನ್ನು ಅನುಭವಿಸಿದರೆ ತಕ್ಷಣವೇ ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಶಸ್ತ್ರಚಿಕಿತ್ಸಕರಿಗೆ ಸಂಪರ್ಕಿಸಿ—ಶೀಘ್ರ
ಕ್ರಮ ನಿಮ್ಮ ಪ್ರಾಣವನ್ನು ಉಳಿಸಬಹುದು.
ಯಾವುದೇ ಪ್ರಶ್ನೆಗಳಿಗಾಗಿ ಸಂಪರ್ಕಿಸಿ: ಡಾ. ಜಗದೀಶ್ ಚಂದ್ರ, ವಿಭಾಗ ಮುಖ್ಯಸ್ಥರು, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್
ಶಸ್ತ್ರಚಿಕಿತ್ಸಾ ವಿಭಾಗ, ಯೆನಪೊಯ ಡೆಂಟಲ್ ಕಾಲೇಜು


Spread the love
Subscribe
Notify of

0 Comments
Inline Feedbacks
View all comments