Home Mangalorean News Kannada News ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ- ಸಚಿವೆ ಡಾ. ಜಯಮಾಲಾ

ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ- ಸಚಿವೆ ಡಾ. ಜಯಮಾಲಾ

Spread the love

ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ- ಸಚಿವೆ ಡಾ. ಜಯಮಾಲಾ

ಉಡುಪಿ:  ಜನವರಿ ತಿಂಗಳ ಅಂತ್ಯದಲ್ಲಿ ಉಡುಪಿ ಜಿಲ್ಲೆಯ ಬಾರಕೂರಿನಲ್ಲಿ ಅಳುಪೋತ್ಸವ ವನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತೀಮಾನಿಸಲಾಯಿತು.

ಜಿಲ್ಲೆಯ ಪಾರಂಪರಿಕೆ,  ವೈವಿಧ್ಯತೆ ಮತ್ತು ಸಾಂಸ್ಕøತಿಕೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಸಚಿವರು, ಬಾರಕೂರು ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳನ್ನು  ಪ್ರವಾಸಿಗರಿಗೆ  ಪರಿಚಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ,  ಯುವ ಜನತೆಯನ್ನು ಆಕರ್ಷಿಸಲು ಸಾಹಸ ಕ್ರೀಡೆಗಳನ್ನು ಏರ್ಪಡಿಸಿ, ಜಾನಪದ ಜಾತ್ರೆ, ಜಾನಪದ ಕ್ರೀಡೆಗಳು, ವೈವಿಧ್ಯಮಯವಾದ ಸಾಂಸ್ಕøತಿಕ ಕಾರ್ಯಕ್ರಮಗಳು, ಗೊಂಬೆ ಪ್ರದರ್ಶನ, ಆಹಾರ ಮೇಳ, ಫಲ ಪುಷ್ಪ ಪ್ರದರ್ಶನವನ್ನು ಆಳುಪೋತ್ಸವದಲ್ಲಿ ಏರ್ಪಡಿಸುವಂತೆ ಡಾ. ಜಯಮಾಲಾ ಸೂಚಿಸಿದರು.

ಅಳುಪೋತ್ಸವ ಆಚರಣೆಗೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಸಚಿವರು,ಕಾರ್ಯಕ್ರದ ಯಶಸ್ವಿಗೆ ಎಲ್ಲಾ ಇಲಾಖೆಯ ಅಧಿಕರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಮತ್ತು ಬಾರಕೂರಿನ ಜನತೆಯನ್ನು  ಒಳಗೊಂಡ ಸಮಿತಿಯನ್ನು ರಚಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಉದ್ಘಾಟನೆಯ ದಿನದಂದು ಬೃಹತ್ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿ ಹಾಗೂ ವಿವಿಧ ವೇದಿಕೆಗಳನ್ನು ನಿರ್ಮಿಸಿ  ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತ ರಾವ್ ಪಾಟೀಲ್ ಉಪಸ್ಥಿತರಿದ್ದರು.


Spread the love

Exit mobile version