ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!
ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ.
ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು ಹೇಳಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೋಳಿ ಮೊಟ್ಟೆ ಮಾನವನ ದೇಹದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೊಟ್ಟೆಯನ್ನ ಬಾಲಕನ ದೇಹದೊಳಗೆ ಹಾಕಲಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ.
ಇಂಡೋನ್ಯೇಷ್ಯಾದ ಗೋವಾದವನಾದ ಅಕ್ಮಲ್‍ಗೆ ಎಕ್ಸ್ ರೇ ಕೂಡ ಮಾಡಿಸಲಾಗಿದ್ದು, ಆತ ನಿಜ ಹೇಳುತ್ತಿದ್ದಾನೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪೋಷಕರು ಹೇಳಿದ್ದಾರೆ.
ಅಕ್ಮಲ್ ತಂದೆ ರುಸ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 2 ವರ್ಷಗಳಲ್ಲಿ ಆತ 18 ಮೊಟ್ಟೆ ಇಟ್ಟಿದ್ದು, ಈಗ ಎರಡು ಮೊಟ್ಟೆ ಇಟ್ಟಿದ್ದಾನೆ. ಹೀಗಾಗಿ ಒಟ್ಟು 20 ಆಗಿದೆ. ನಾನು ಮೊದಲ ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಹಳದಿ ಅಂಶ ಮಾತ್ರ ಇತ್ತು, ಬಿಳಿಯದ್ದು ಇರಲಿಲ್ಲ. ಒಂದು ತಿಂಗಳ ಬಳಿಕ ಮತ್ತೊಂದು ಮೊಟ್ಟೆಯನ್ನ ಒಡೆದು ನೋಡಿದೆ. ಅದರಲ್ಲಿ ಪೂರ್ತಿ ಬಿಳಿ ಅಂಶ ಇತ್ತು, ಹಳದಿ ಬಣ್ಣದ್ದು ಇರಲಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯ ವಕ್ತಾರರು ಈ ಬಗ್ಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ಅಕ್ಮಲ್‍ನ ಗುದನಾಳಕ್ಕೆ ಮೊಟ್ಟೆಗಳನ್ನ ತುರುಕಲಾಗಿದೆ ಎಂಬ ಅನುಮಾನ ನಮಗಿದೆ. ನಾವು ಅದನ್ನ ನೇರವಾಗಿ ನೋಡಿಲ್ಲ ಎಂದು ಹೇಳಿದ್ದಾರೆ.
ಬಾಲಕನ ಮೇಲೆ ವೈದ್ಯರು ಸೂಕ್ಷ್ಮವಾಗಿ ಗಮನಹರಿಸಬೇಕೆಂಬ ಉದ್ದೇಶದಿಂದ ಸೈಕ್ ಯೂಸಫ್ ಆಸ್ಪತ್ರೆಯಲ್ಲಿ ಅಕ್ಮಲ್‍ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.