ಬಾಲ್ ಬ್ಯಾಡ್ಮಿಂಟನ್ : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಹ್ಯಾಟ್ರಿಕ್ ಪ್ರಶಸ್ತಿಯ ಗರಿ
ಮೂಡುಬಿದಿರೆ: ಅರ್.ಎಲ್ ಜಾಲಪ್ಪ ಇನ್ಸ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ದೊಡ್ಡಬಳ್ಳಾಪುರದಲ್ಲಿ ನಡೆದ ವಿಟಿಯು ಅಂತರ್ ವಲಯ ಬಾಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಚಾಂಪಿಯನ್ಶಿಪ್ ಮುಡಿಗೆರಿಸಿಕೊಳ್ಳುವ ಮೂಲಕ ಆಳ್ವಾಸ್ ಇನ್ಸ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹ್ಯಾಟ್ರಿಕ್ ಪ್ರಶಸ್ತಿಯನ್ನು ಪಡೆಯಿತು.
ಫೈನಲ್ನಲ್ಲಿ ಮಹಿಳಾ ವಿಭಾಗದಲ್ಲಿ ಮಲ್ನಾಡ್ ಕಾಲೇಜ್ ಅಫ್ ಇಂಜಿನಿಯರಿಂಗ್, ಹಾಸನವನ್ನು 35-15, 35-12 ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನದಗಿಸಿಕೊಂಡಿತು, ಪುರುಷರ ವಿಭಾಗದಲ್ಲಿ ಫೈನಲ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದ್ದು , ಅತಿಥೇಯ ಅರ್.ಎಲ್ ಜಾಲಪ್ಪ ಇನ್ಸ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ದೊಡ್ಡಬಳ್ಳಾಪುರ ಕಾಲೇಜ ಅನ್ನು 35-32, 35-28, 35-30 ಅಂಕಗಳೊಂದಿಗೆ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು.
ವಿಜೇತರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮ್ಯಾನೆಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ತರಬೇತುದಾರ ಪ್ರವೀಣ್ ಮತ್ತು ದೈಹಿಕ ಶಿಕ್ಷಣ ನೀರ್ದೆಶಕ ದಿಲೀಪ್ ಶೆಟ್ಟಿ ಅಭಿನಂದಿಸಿದರು.