ಬಾಲ ಕಾರ್ಮಿಕ ಪದ್ದತಿ ತಲೆ ತಗ್ಗಿಸುವ ವಿಚಾರ- ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ

Spread the love

ಬಾಲ ಕಾರ್ಮಿಕ ಪದ್ದತಿ ತಲೆ ತಗ್ಗಿಸುವ ವಿಚಾರ- ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ

ಉಡುಪಿ : ಬಾಲ ಕಾರ್ಮಿಕರನ್ನು ದುಡಿಮೆಗೆ ಬಳಸಿಕೊಳ್ಳುವುದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.

ಅವರು ಶುಕ್ರವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನ ಸಂಘ ಇವರ ಜಂಟಿ ಅಶ್ರಯದಲ್ಲಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓ ಗಳಿಗೆ ಅಯೋಜಿಸದ್ದ, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕಪದ್ದತಿ ನಿರ್ಮೂಲನೆಯ ಅರಿವು ಮೂಡಿಸುವ ಮತ್ತು ಗ್ರಾಮ ಮಟ್ಟದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡುವ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಉದ್ದಿಮೆಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವುದು ಕಾನೂನಿಗೆ ವಿರುದ್ದವಾಗಿದೆ, ಬಾಲ ಕಾರ್ಮಿಕ ಪದ್ದತಿ ಗ್ರಾಮ ಮಟ್ಟದಲ್ಲಿಯೇ ನಿರ್ಮೂಲನೆ ಆಗಬೇಕು, ಬಾಲ ಕಾರ್ಮಿಕ ಕಾನೂನುಗಳ ಕುರಿತು ಗ್ರಾಮ ಪಂಚಾಯತ್ ಗಳ ಎಲ್ಲಾ ಜನಪ್ರತಿನಿಧಿಗಳು ಹಾಗೂ ಪಿಡಿಓ ಗಳು ಅರಿವು ಹೊಂದರಬೇಕು, ಬಾಲ ಕಾರ್ಮಿಕರು ಪತ್ತೆಯಾದಲ್ಲಿ ಅವರಿಗೆ ಸೂಕ್ತ ಪುರ್ನವಸತಿ, ವಿದ್ಯಾಭ್ಯಾಸ ಒದಗಿಸಬೇಕು, ವಲಸೆ ಕಾರ್ಮಿಕರು ವಾಸಿಸುವ ಕಡೆಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು ಅವರನ್ನು ರಕ್ಷಿಸಬೇಕು ಎಂದು ಅಪರ ಜಿಲ್ಲಾದಿಕರಿ ಹೇಳೀದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕರಿ ಮಲ್ಲಿಕಾರ್ಜುನ ಜೋಗೂರ್ ಮಾತನಾಡಿ, ಬಾಲ ಕಾರ್ಮಿರನ್ನು ಬಳಸಿಕೊಳ್ಳುವ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ಮತ್ತು 50000 ಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ, ಕಾರ್ಮಿಕ ಇಲಾಖೆ ಹೊರತುಪಡಿಸಿ ಇತರೆ 12 ಇಲಾಖೆಗಳ ಅಧಿಕಾರಿಗಳಿಗೆ ಬಾಲ ಕಾರ್ಮಿಕ , ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಲುವ ಅಧಿಕಾರಿ ನೀಡಲಾಗಿದೆ, ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಪುರ್ನವಸತಿ ಕಲ್ಪಿಸಲು ಎಲ್ಲರ ಸಹಕರ ಅಗತ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಖೆ ಉಪ ನಿರ್ದೇಶಕರಿ ಗ್ರೇಸಿ ಗೊನ್ಸಾಲ್ವಿಸ್, ಸಂಪನ್ಮೂಲ ವ್ಯಕ್ತಿಗಳಾದ ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಹಾಗೂ ಅಪರ ಜಿಲ್ಲಾ ಸರ್ಕರಿ ವಕೀಲ ಮಹಮದ್ ಸುಹಾನ್ ಉಪಸ್ಥಿತರಿದ್ದರು. ಬಾಲ ಕಾರ್ಮಿಕ ಯೋಜನಾ ಸಂಘದ ನಿರ್ದೇಶಕ ಪ್ರಭಾಕರ ಆಚಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


Spread the love