Home Mangalorean News Kannada News ಬಾಳ: ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ 

ಬಾಳ: ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ 

Spread the love

ಬಾಳ: ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ 

ಮಂಗಳೂರು : ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನವೆಂಬರ್ 19 ರಂದು ಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳಪದವು ಎಂಬಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಬಿ. ಎ.ಎಸ್. ಎಫ್ ನ ಬಾಳ ಘಟಕ ಇವರು ತಮ್ಮ ಸಿ.ಎಸ್.ಆರ್. ನಿಧಿಯಿಂದ ನಿರ್ಮಿಸಿದ ಸಾರ್ವಜನಿಕ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎ.ಎಸ್.ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಸಿ. ಎಂ. ನಟರಾಜ್, ಬಿ.ಎ.ಎಸ್.ಎಫ್. ಸ್ಥಳೀಯ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್, ಸಹಾಯಕ ವ್ಯವಸ್ಥಾಪಕ ಸಂತೋಷ್ ಪೈ, ಮೈಕಲ್ ಡಿಸೋಜ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಂಜನಿ ಎಂ ಮೂಲ್ಯ, ಗ್ರಾಮ ಪಂಚಾಯತ್ ಸದಸ್ಯ ಸರ್ಫಾಜ್ ನವಾಜ್, ಗ್ರಾಮ ಕರಣಿಕರಾದ ಸಹನಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿ ಮಾತಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಆದಂ ಇವರು “ವಿಶ್ವ ಶೌಚಾಲಯ ದಿನಾಚರಣೆ ಸಂದರ್ಭದಲ್ಲಿ ಬಾಳ ಗ್ರಾಮದಲ್ಲಿ ಅರ್ಥ ಪೂರ್ಣವಾಗಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ ಗೊಂಡಿರುವುದು ಸುವರ್ಣಕ್ಷಾರಗಳಲ್ಲಿ ಬರೆದಿಡುವಂತಹ ವಿಷಯ. ಸೂಕ್ತ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದ ವಿವಿಧ ಸಂಸ್ಥೆಗಳ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ಯಾಂಕರ್ ಮತ್ತು ಲೋರಿಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಇದೊಂದು ಆಶಾದಾಯಕ ಬೆಳವಣಿಗೆ. ಶೌಚಾಯಲವೇನೋ ಲೋಕಾರ್ಪಣೆಗೊಂಡಿದೆ ಅದನ್ನು ಸುಸಿತ್ಥಿಯಲ್ಲಿ ಸಾರ್ವಜನಿಕರು ವ್ಯವಸ್ಥಿತವಾಗಿ ಬಳಸಬೇಕಾದುದು ಅತೀ ಅವಶ್ಯ. ಇಲ್ಲವಾದಲ್ಲಿ ಸಾರ್ವಜನಿಕ ಶೌಚಾಯಲದ ಉದ್ದೇಶವು ಫಲಪ್ರದವಾಗುವುದಿಲ್ಲ .ಆದುದರಿಂದ ಸಾರ್ವಜನಿಕರು ಅದನ್ನು ಸ್ವಂತ ಆಸ್ತಿ ಎಂಬಂತೆ ನಿಯಮಿತವಾಗಿ ನೀರನ್ನು ಬಳಕೆ ಮಾಡಿ ಸ್ವಚ್ಚವಾಗಿಡುವುದರಲ್ಲಿ ಸಹಕರಿಸಬೇಕು” ಎಂದು ಕರೆ ನೀಡಿದರು. ಪಂಚಾಯತ್ ಅಭಿವೃಧ್ದಿ ಅಧಿಕಾರಿ ವಿಶ್ವನಾಥ ಬಿ. ಸ್ವಾಗತಿಸಿ ವಂದಿಸಿದರು.

ವಿಶ್ವ ಶೌಚಾಲಯ ದಿನದ ಅಂಗವಾಗಿ ಸ್ವಚ್ಚತಾ ಜಾಗೃತಿ ಪ್ರಯುಕ್ತ ನವೆಂಬರ್ 18 ರಂದು ಕಳವಾರು ಗ್ರಾಮ ದಲ್ಲಿ ಹಾಗೂ 19 ರಂದು ಬಾಳ ಗ್ರಾಮದಲ್ಲಿ ದ್ವಿಚಕ್ರ ವಾಹನ ಜಾಥಾ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಬಹಳಷ್ಟು ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿದ್ದರು.


Spread the love

Exit mobile version