Home Mangalorean News Kannada News ಬಿಎಸ್ವೈ ಸಂಪುಟದಲ್ಲಿ ಮೂವರಿಗೆ ಡಿಸಿಎಂ ಪಟ್ಟ – ಕೋಟಾಗೆ ಮುಜರಾಯಿ, ಮೀನುಗಾರಿಕೆ, ಬಂದರು ಖಾತೆ 

ಬಿಎಸ್ವೈ ಸಂಪುಟದಲ್ಲಿ ಮೂವರಿಗೆ ಡಿಸಿಎಂ ಪಟ್ಟ – ಕೋಟಾಗೆ ಮುಜರಾಯಿ, ಮೀನುಗಾರಿಕೆ, ಬಂದರು ಖಾತೆ 

Spread the love

ಬಿಎಸ್ವೈ ಸಂಪುಟದಲ್ಲಿ ಮೂವರಿಗೆ ಡಿಸಿಎಂ ಪಟ್ಟ – ಕೋಟಾಗೆ ಮುಜರಾಯಿ, ಮೀನುಗಾರಿಕೆ, ಬಂದರು ಖಾತೆ 

ಬೆಂಗಳೂರು: ಕೊನೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ವಾರ ಕಳೆದ ಬಳಿಕ ಕೊನೆಗೂ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಇದರೊಂದಿಗೆ ಸಿಎಂ ಬಿಎಸ್ವೈ ಸಂಪುಟದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ. ಯಾವೆಲ್ಲಾ ಸಚಿವರಿಗೆ, ಯಾವ ಖಾತೆ ದೊರೆಯಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತಿಂಗಳ ಬಳಿಕ ಸಚಿವ ಸಂಪುಟ ರಚನೆಯಾಯಿತು. ಆದರೆ, ಖಾತೆ ಹಂಚಿಕೆ ಮಾತ್ರ ಕಗ್ಗಂಟಾಗಿ ಉಳಿದಿತ್ತು. ವಾರ ಕಳೆದ ಬಳಿಕ ಅಳೆದು ತೂಗಿ ಇದೀಗ ಖಾತೆ ಹಂಚಿಕೆ ಫೈನಲ್ ಆಗಿದ್ದು, ಸೋಮವಾರ ರಾತ್ರಿ ಅಧಿಕೃತ ಪಟ್ಟಿ ಹೊರಬಿದ್ದಿದೆ. ಮೂವರು ನಾಯಕರಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಮತ್ತು ಲಕ್ಷ್ಮಣ್ ಸವದಿಯವರಿಗೆ ಡಿಸಿಎಂ ಸ್ಥಾನವನ್ನು ನೀಡಲಾಗಿದ್ದು, ಯಾರಿಗೆ? ಯಾವ ಖಾತೆ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

ರಾಜ್ಯ ನೂತನ ಸಚಿವರಿಗೆ ಖಾತೆ ಹಂಚಿಕೆ
1. ಆರ್.ಅಶೋಕ್ – ಕಂದಾಯ ಖಾತೆ
2. ವಿ.ಸೋಮಣ್ಣ – ವಸತಿ, ನಗರಾಭಿವೃದ್ಧಿ ಖಾತೆ
3. ಬಸವರಾಜ್ ಬೊಮ್ಮಾಯಿ – ಗೃಹ ಖಾತೆ
4. ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
5. ಜಗದೀಶ್ ಶೆಟ್ಟರ್ – ಬೃಹತ್ & ಮಧ್ಯಮ ಕೈಗಾರಿಕೆ
6. ಲಕ್ಷ್ಮಣ ಸವದಿ – ಸಾರಿಗೆ ಇಲಾಖೆ
7. ಗೋವಿಂದ ಕಾರಜೋಳ – ಲೋಕೋಪಯೋಗಿ, ಸಮಾಜ ಕಲ್ಯಾಣ
8. ಡಾ. ಅಶ್ವತ್ಥ್ ನಾರಾಯಣ – ಉನ್ನತ ಶಿಕ್ಷಣ & ಐಟಿ-ಬಿಟಿ
9. ಜೆ.ಸಿ. ಮಾಧುಸ್ವಾಮಿ – ಕಾನೂನು & ಸಂಸದೀಯ, ಸಣ್ಣ ನೀರಾವರಿ
10. ಬಿ. ಶ್ರೀರಾಮುಲು – ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
11. ಸುರೇಶ್ ಕುಮಾರ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
12. ಪ್ರಭು ಚೌಹಾಣ್ – ಪಶು ಸಂಗೋಪನಾ ಖಾತೆ
13. ಹೆಚ್. ನಾಗೇಶ್ – ಅಬಕಾರಿ
14. ಸಿ.ಸಿ. ಪಾಟೀಲ್ – ಗಣಿ & ಭೂ ವಿಜ್ಞಾನ ಇಲಾಖೆ
15. ಸಿ.ಟಿ. ರವಿ – ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
16. ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ, ಮೀನುಗಾರಿಕೆ, ಬಂದರು
17. ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ


Spread the love

Exit mobile version