ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯದ ದಿನದ ಆಚರಣೆ

Spread the love

ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯದ ದಿನದ ಆಚರಣೆ

ಮಂಗಳೂರು, ಆಗಸ್ಟ್ ೨೨: ಬಾಲ ಯೇಸುವಿನ ಪುಣ್ಯಕ್ಷೇತ್ರದ  ಕ್ಯಾಂಪಸ್‌ನಲ್ಲಿ ಆಗಸ್ಟ್ ೨೨, ಗುರುವಾರದಂದು ’ಕೊಂಕಣಿ ಮಾನ್ಯತಾ ದಿನ ೨೦೨೪’  ಮತ್ತು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ಅಯೋಜಿಸಲಾಗಿತ್ತು.

ಕೊಂಕಣಿ ಬಾವುಟವನ್ನು ಹಾರಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾತಾನಾಡಿದ ಅವರು. “ಕೊಂಕಣಿ ಭಾಷೆಯನ್ನು ಮನೆಯಲಿ ಮಾತನಾಡಬೇಕು ಮತ್ತು ಕೊಂಕಣಿ ಸಂಸ್ಕೃತಿಯ ಮಹತ್ವವನ್ನು ತಿಳಿದು ಮುಂದಿನ ಪೀಳಿಗೆಗೆ ಹಸ್ತಾತಂತರಿಸಬೇಕು ಎಂದು ಹೇಳಿದರು ಹಾಗೂ ಕೊಂಕಣಿ ಮಾನ್ಯತಾ ದಿನದ ಶುಭಾಶಯಗಳನ್ನು ಕೋರಿದರು.

ಭಾರತದಲ್ಲಿ ನಾವು ನೂರಾರು ಭಾµಗಳನ್ನು ಮಾತನಾಡುತ್ತೇವೆ, ಆದರೆ ಕೆಲವೇ ಭಾµಗಳನ್ನು ಅಧಿಕೃತ ಭಾµಯಾಗಿ ಗುರುತಿಸಲಾಗಿದೆ. ಕೊಂಕಣಿ ೧೮ ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಪ್ರಯುಕ್ತ ಕೊಂಕಣಿ ಭಾಷೆಯ ಪುಸ್ತಕ ಹಾಗೂ ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಚಿತ್ರನಟಿ ವೆಲ್ಸಿಟಾ ಡಯಾಸ್, ಶ್ರೀ ಜೋಸೆಫ್ ಮತಾಯಸ್, ಪಾ. ಮೆಲ್ವಿನ್ ಡಿಕುನ್ಹಾ, ಪಾ. ಐವನ್ ಡಿಸೋಜಾರವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ವಿಕ್ಷೀಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Photo Album


Spread the love