ಬಿಜೆಪಿಗೆ ಹಿಂದೂ ಅಸ್ತ್ರ ಪ್ರಯೋಗದಿಂದ ಗೆಲುವು; ಮೋದಿ ಅಲೆಯಿಂದಲ್ಲ: ಸಿದ್ದರಾಮಯ್ಯ
ಬೆಂಗಳೂರು: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದೂ ಅಸ್ತ್ರ ಪ್ರಯೋಗ ಮಾಡಿ ಗೆಲುವು ಸಾಧಿಸಿದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಮಶಾನ ಮತ್ತಿತರ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡಿ ಬಿಜೆಪಿ ಅಲ್ಲಿ ಗೆದ್ದಿದೆ ಎಂದರು.
ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಬಿಜೆಪಿ ಗೆಲುವಿಗೆ ಕಾರಣ ಎನ್ನುವುದಾದರೆ ಪಂಜಾಬ್, ಗೋವಾದಲ್ಲಿ ಏಕೆ ಆ ಅಲೆ ಕೆಲಸ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದರು.
ಸಣ್ಣ, ದೊಡ್ಡ ರಾಜ್ಯಗಳ ವಿಷಯ ಅಲ್ಲ. ಪಂಜಾಬ್, ಗೋವಾದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ಈಗ ಏಕೆ ಅಲ್ಲಿ ಗೆಲ್ಲಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಜನ ಕೊಟ್ಟಿರುವ ತೀರ್ಪು ಒಪ್ಪಬೇಕಾಗುತ್ತದೆ ಎಂದು ಹೇಳಿದರು.
‘ಮೋದಿ ಅವರು ಪಂಬಾಬ್‍ನಲ್ಲಿ ಸಾಕಷ್ಟು ಚುನಾವಣಾ ಪ್ರಚಾರ ನಡೆಸಿದ್ದರು. ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ವಿಚಾರವನ್ನೂ ಅಲ್ಲಿ ಪದೇ ಪದೇ ಪ್ರಸ್ತಾಪಿಸಿದ್ದರು. ಆದರೂ ಅಲ್ಲಿ ಮೋದಿ ಅಲೆಯಿಂದ ಕೆಲಸವಾಗಲಿಲ್ಲ. ಹಾಗಾದರೆ, ಅಲೆ ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ?
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರು ಐದು ವರ್ಷ ಉತ್ತಮವಾಗಿ ಆಡಳಿತ ನಡೆಸಿದ್ದರು. ಆದರೂ ಆಡಳಿತ ವಿರೋಧಿ ಅಲೆ, ಮುಲಾಯಂ ಸಿಂಗ್ ಯಾದವ್ ಕುಟುಂಬದ ಜಗಳ, ಮತಗಳ ಧ್ರುವೀಕರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹಿಂದೂ ಅಸ್ತ್ರವನ್ನು ಪ್ರಬಲವಾಗಿ ಪ್ರಯೋಗಿಸಿದ್ದರ ಪರಿಣಾಮ ಎಸ್ಪಿ-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಸೋಲಾಗಿದೆ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.
ಪಂಜಾಬ್‍ನಲ್ಲೂ ಬಿಜೆಪಿ ಹಿಂದೂ ಹೆಸರಲ್ಲಿ ಮತಗಳಿಸುವ ಪ್ರಯತ್ನ ನಡೆಸಿತು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ ಎಂದರು.
ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ, ಆ ರೀತಿ ಇರಲು ಸಾಧ್ಯವಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಮಾಡಿದ ಪಾಪದ ಕೆಲಸವನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂದು ಹೇಳಿದರು.
ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾದರೆ ಪಂಬಾಜ್ ಫಲಿತಾಂಶ ನಮಗೆ ನೆರವಾಗಬಹುದಲ್ಲವೇ? ಎಂದು ಪ್ರಶ್ನಿಸಿದರು.
ಕ್ರಪೆ : ಪ್ರಜಾವಾಣಿ
Says the guy whose party is notorious for exploiting minority ‘vote bank’ to grab power!! LOL
Can you imagine someone in India frankly expressing truth and facts as Geert Wilders does in the following video clip? Well, not until we get rid of pseudo-secularism disease that is rampant in our media and politics. I hope that he wins the general elections and delivers one more blow towards eminent death of pseudo-secularism.
https://www.youtube.com/watch?v=Zz5WmxvwQK4
As the BJP romps home with more than 300 seats in a 403-member UP assembly after two decades, the crux of the UP election is that Modi’s opponents could not match him in weaving a broader political narrative around development. While Modi communalised his development narrative, there was no secular alternative. The SP, Congress and BSP displayed a conspicuous lack of imagination and creativity in challenging Modi’s message and this finally led to their downfall. In this context, the BJP was seen by a major section of the state’s Hindu voters as the only viable option. For all its talk… Read more »