Home Mangalorean News Kannada News ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಉತ್ತರ ಕನ್ನಡದಿಂದ ಕಾಗೇರಿ ಕಣಕ್ಕೆ

ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಉತ್ತರ ಕನ್ನಡದಿಂದ ಕಾಗೇರಿ ಕಣಕ್ಕೆ

Spread the love

ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಉತ್ತರ ಕನ್ನಡದಿಂದ ಕಾಗೇರಿ ಕಣಕ್ಕೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ರಘುಚಂದನ್ ಹಾಗೂ ಗೋವಿಂದ ಕಾರಜೋಳ ನಡುವೆ ಟಿಕೆಟ್ಗಾಗಿ ಫೈಟ್ ನಡೆಯುತ್ತಿದೆ. ಆದರೆ, ಕಾರಜೋಳ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ರಾಜ್ಯ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸಲು ಹೈಕಮಾಂಡ್ ನಿರ್ಧರಿಸಿದೆ.

ಯಾರಿಗೆಲ್ಲ ಟಿಕೆಟ್
ರಾಯಚೂರು ಲೋಕಸಭಾ ಕ್ಷೇತ್ರ-ರಾಜಾ ಅಮರೇಶ್ವರ ನಾಯಕ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ-ಡಾ.ಕೆ.ಸುಧಾಕರ್
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ-ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೈತಪ್ಪಿದ ಟಿಕೆಟ್)
ಬೆಳಗಾವಿ ಲೋಕಸಭಾ ಕ್ಷೇತ್ರ-ಜಗದೀಶ್ ಶೆಟ್ಟರ್
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ನಿರ್ಧಾರವಾಗಿಲ್ಲ


Spread the love

Exit mobile version