ಬಿಜೆಪಿ ಪಕ್ಷದ ನಟನೆ ದಿಕ್ಕು ತಪ್ಪಿಸುವ ಪ್ರಯತ್ನ : ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ
ದಿನನಿತ್ಯ ತೈಲ ಬೆಲೆ ಹಾಗೂ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿದ್ದು ಜನ ಸಾಮಾನ್ಯರು ಕೇಂದ್ರ ಸರಕಾರ ವಿರುದ್ಧ ಸಂಪೂರ್ಣ ಆಕ್ರೋಶ ಗೊಂಡಿದ್ದಾರೆ. ಮಾತ್ರವಲ್ಲ ಬಿಜೆಪಿ ಪಕ್ಷವು ಜನಸಾಮಾನ್ಯರಿಗೆ ಮುಖವನ್ನು ತೋರಿಸಲು ಯೋಗ್ಯತೆ ಇಲ್ಲದವರಾಗಿದ್ದಾರೆ. ಇದೀಗ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಿ ಪ್ರತಿಭಟನೆ ನಡೆಸುವುದು ಜನರ ದಿಕ್ಕನ್ನು ತಪ್ಪಿಸುವ ಹತಾಶ ಪ್ರಯತ್ನವನ್ನು ಮಾಡುತ್ತದೆ. ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಈ ದೇಶದ ಸಂವಿಧಾನದ ಬಗ್ಗೆ ತಿಳುವಳಿಕೆ ಹಾಗೂ ಅಪಾರ ಗೌರವವಿದ್ದು ಕಳೆದ ನಾಲ್ಕು ತಿಂಗಳಿಂದ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಹಗಲಿರುಳು ಶ್ರಮಿಸುತ್ತಿದ್ದು ಜನಸಾಮಾನ್ಯರು ಮುಖ್ಯಮಂತ್ರಿಗಳ ಬಗ್ಗೆ ಅಪಾರ ಗೌರವವನ್ನು ತೋರಿಸುತ್ತಿದ್ದಾರೆ.
ಇದನ್ನು ಸಹಿಸದ ಬಿಜೆಪಿ ಮುಖಂಡರು ಕಳೆದ ನಾಲ್ಕು ತಿಂಗಳುಗಳಿಂದ ರಾಜ್ಯದಲ್ಲಿ ಆತಂತ್ರ ಆಡಳಿತ ಪರಿಸ್ಥಿತಿ ಹಾಗೂ ಶಾಸಕರನ್ನು ಖರೀದಿಸುವ ಪ್ರಯತ್ನವನ್ನು ಮಾಡುತ್ತಾ ಇದ್ದಾರೆ. ಆದರೆ ಈ ಕಾರ್ಯ ಫಲಿಸದೆ ಹತಾಶೆಗೊಂಡು ಅವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಿ ಪ್ರತಿಭಟನೆ ನಡೆಸಿ ಪುಕ್ಕಟೆ ಪ್ರಚಾರವನ್ನು ಪಡೆಯುತ್ತಿದ್ದಾರೆ. ಪೆÇೀಲಿಸ್ ಇಲಾಖೆಯು ನಿಷ್ಪಕ್ಷವಾಗಿ ಸೇವೆಯನ್ನು ನೀಡುತ್ತಿದ್ದರೂ ಅವರ ಬಗ್ಗೆ ಅಪಪ್ರಚಾರವನ್ನು ನಡೆÉಸುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಲೋಕ ಸಭೆ ಚುನಾವಣೆ ನಡೆಯಲಿದ್ದು ಬಿಜೆಪಿ ಪಕ್ಷವು ಇನ್ನೂ ಹೆಚ್ಚಿನ ರಾಜಕೀಯ ನಾಟಕವಾಡಿ ಜನರನ್ನು ಒಲೈಸಲು ಪ್ರಯತ್ನಿಸುವುದರಲ್ಲಿ ಸಂಶಯವಿಲ್ಲ. ಆದರೆ ಕರ್ನಾಟಕದ ಬುದ್ಧಿವಂತ ಜನರು ಇವರ ನಟನೆಗೆ ಯಾವುದೇ ಮಹತ್ವವನ್ನು ಕೊಡುವುದಿಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.