ಬಿಜೆಪಿ ಬೈಕ್ ಜಾಥಾಗೆ, ಕುಂದಾಪುರ, ಹೆಬ್ರಿಯಲ್ಲಿ ಪೋಲಿಸರಿಂದ ಬ್ರೇಕ್, ಬಂಧನ – ಬಿಡುಗಡೆ

Spread the love

ಬಿಜೆಪಿ ಬೈಕ್ ಜಾಥಾಗೆ, ಕುಂದಾಪುರ, ಹೆಬ್ರಿಯಲ್ಲಿ ಪೋಲಿಸರಿಂದ ಬ್ರೇಕ್, ಬಂಧನ – ಬಿಡುಗಡೆ

ಕುಂದಾಪುರ: ರಾಜ್ಯ ಬಿಜೆಪಿ ಯುವ ಮೋರ್ಚಾ ಸಪ್ಟೆಂಬರ್ 7 ರಂದು ಆಯೋಜಿಸಿರುವ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ವತಿಯಿಂದ ಕುಂದಾಪುರ ಮತ್ತು ಹೆಬ್ರಿಯಲ್ಲಿ ಆಯೋಜಿಸಿದ ಬೈಕ್ ಜಾಥಾಕ್ಕೆ ಜಿಲ್ಲಾ ಪೋಲಿಸರು ತಡೆದು ಹಲವು ಬಿಜೆಪಿ ಮುಖಂಡರು ಸಹಿತ ಒಟ್ಟು 316 ಮಂದಿಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹೆಮ್ಮಾಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಬೈಕ್ ರ್ಯಾಲಿಯನ್ನು ಆರಂಭದಲ್ಲೇ ಪೋಲಿಸರು ತಡೆದು ಕುಂದಾಪುರದಲ್ಲಿ 86 ಬೈಕ್ ಸಹಿತ 110 ಕಾರ್ಯಕರ್ತರನ್ನು ಮತ್ತು ಹೆಮ್ಮಾಡಿಯಲ್ಲಿ 75 ಬೈಕ್ ಜೊತೆಗೆ 105 ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಕಾರ್ಕಳದ ಹೆಬ್ರಿಯಲ್ಲಿ ಶಾಸಕ ಸುನೀಲ್ ಕುಮಾರ್ ನೇತ್ರತ್ವದಲ್ಲಿ ಪೋಲಿಸರು ತಡೆದು ಶಾಸಕ ಸೇರಿದಂತೆ 40 ಬೈಕುಗಳು ಹಾಗೂ 101 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.


Spread the love