ಬಿಜೆಪಿ ಮುಸ್ಲಿಮರಿಗೆ ಘೋಷಿಸಿದ ಈದ್ ಕಿಟ್ ಬಗ್ಗೆ ಯಶ್ಪಾಲ್, ಸುನೀಲ್ ಪ್ರತಿಕ್ರಿಯೆ ಏನು?
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಪ್ರಶ್ನೆ
ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಮೋದಿ ಹೆಸರಲ್ಲಿ ಈದ್ ಕಿಟ್ ನೀಡಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಈದ್ ಕಿಟ್ ಕೊಡಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇದೇ ಕಾರ್ಯಕ್ರಮವನ್ನು ಕಾಂಗ್ರೆಸ್ನವರು ಮಾಡಿದಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಕರಾವಳಿಯ ಸ್ವಯಂ ಘೋಷಿತ ಹಿಂದೂ ಶಾಸಕರು,ಮುಖಂಡರುಗಳ ಆರ್ಭಟ ಹೇಗಿರುತಿತ್ತು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೃಷ್ಣ ಶೆಟ್ಟಿ,ಕಾಂಗ್ರೆಸ್ ನವರು ಈದ್ ಕಿಟ್ ಕೊಟ್ಟರೆ ಬಿಜೆಪಿ ನಾಯಕರು ಈಗಾಗಲೇ ಬೀದಿಗಿಳಿಯುತ್ತಿದ್ದರು. ಸದನದಲ್ಲಿ ,ರಸ್ತೆಗಳಲ್ಲಿ ಕಾಂಗ್ರೆಸ್ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ, ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ರಾದ್ದಾಂತ ಮಾಡುತ್ತಿದ್ದರು. ಆದರೆ ಈಗ ‘ಸೌಗಾತ್-ಎ-ಮೋದಿ’ ಹೆಸರಿನಲ್ಲಿ ಬಿಜೆಪಿಯ ನಾಯಕರೇ ಮುಸ್ಲಿಮರಿಗೆ ಈದ್ ಕಿಟ್ ಕೊಡುತ್ತಿದ್ದಾರೆ. ಇದು ತುಷೀಕರಣವಲ್ಲವೆ? ಇದು ಓಲೈಕೆ ರಾಜಕಾರಣವಲ್ಲವೆ? ಇದನ್ನು ಪ್ರಶ್ನಿಸುವ ಎದೆಗಾರಿಕೆ ,ದಮ್ಮು ತಾಕತ್ತು ಸುನಿಲ್ ಕುಮಾರ್ ಕಾರ್ಕಳ ,ಯಶ್ಪಾಲ್ ಸುವರ್ಣ ಹಾಗೂ ಇಂತಹ ನಾಯಕರನ್ನು ಹಿಂಬಾಲಿಸುವ ನಾಯಕರಗಳಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ ?