ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ ಪೌರುಷ – ಕೆ. ವಿಕಾಸ್ ಹೆಗ್ಡೆ

Spread the love

ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ ಪೌರುಷ – ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಜಿಲ್ಲಾ ಕೆ ಡಿ ಪಿ ಸಭೆಯನ್ನು ಟೀಕಿಸುವ ಬಿಜೆಪಿ ಶಾಸಕರು ಹಾಗೂ ಸಂಸದರದ್ದು ಉತ್ತರ ಕುಮಾರನ ಪೌರುಷ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.

ಜಿಲ್ಲಾ ಕೆ ಡಿ ಪಿ ಸಭೆಯನ್ನು ಟೀಕಿಸುವ ಮೊದಲು ಜಿಲ್ಲೆಯ ಬಿಜೆಪಿ ಶಾಸಕರುಗಳು ಜಿಲ್ಲೆಯಲ್ಲಿ ಸುದೀರ್ಘ ಅವಧಿಯಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸಂಸದರ ಹಾಗೂ ಶಾಸಕರುಗಳ ಸಾಧನೆ ಏನು ಎನ್ನುವುದನ್ನು ಜನರ ಮುಂದೆ ಇಡಲಿ.

ಉಡುಪಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಅಕ್ರಮ-ಸಕ್ರಮ, ಅರ್ಜಿ ನಮೂನೆ 94 ಸಿ ಹಾಗೂ 94 ಸಿಸಿ ಅಡಿ ಭೂ ಮಂಜೂರಾತಿ, ಸರ್ಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಪಶ್ಚಿಮ ವಾಹಿನಿ ಯೋಜನೆಯಡಿ ನಡೆದ ಕಿಂಡಿ ಅಣೆಕಟ್ಟುಗಳ ಅಸಮರ್ಪಕ ನಿರ್ವಹಣೆ ಹಾಗೂ ಕೋಟ್ಯಂತರ ರೂಪಾಯಿ ಅವ್ಯವಹಾರ, ಮರಳು, ಜಲ್ಲಿ, ಕಲ್ಲು ಇತ್ಯಾದಿ ಪೂರೈಕೆಯಲ್ಲಿ ಸಮಸ್ಯೆ, ಸ್ಥಳೀಯ ಸಂಸ್ಥೆಗಳಲ್ಲಿ ದೈನಂದಿನ ಜನಸಾಮಾನ್ಯರ ವ್ಯವಹಾರಗಳಲ್ಲಿ ಅನಗತ್ಯ ಕಿರುಕುಳ, ಪ್ರವಾಸೋದ್ಯಮದಲ್ಲಿ ಹಿನ್ನಡೆ, ಸಿ ಆರ್ ಝೆಡ್ ಸಮಸ್ಯೆ, ಡೀಮ್ಡ್ ಅರಣ್ಯ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಈ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಜನಪ್ರತಿನಿದಿನಗಳು ಕಾರಣ.

ಲಕ್ಷ್ಮೀ ಹೆಬ್ಬಾಳ್ಕರ್ ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹಾಗೂ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಉಡುಪಿ ಬಿಜೆಪಿ ಜನಪ್ರತಿನಿದಿನಗಳು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿ ಈಗ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ ಹಾಗೂ ಉಸ್ತುವಾರಿ ಸಚಿವರನ್ನು ಟೀಕಿಸುವುದು ಅವರ ರಾಜಕೀಯ ದಿವಾಳಿತನವಾಗಿದೆ. ಈಗ ಜಿಲ್ಲೆಯ ಜನರಿಗೂ ಅರ್ಥವಾಗಿದೆ ಉಡುಪಿ ಜಿಲ್ಲೆಯ ಬಿಜೆಪಿ ಜನಪ್ರತಿನಿದಿನಗಳದ್ದು ಉತ್ತರ ಕುಮಾರನ ಪೌರುಷ ಎಂದು. ಇನ್ನಾದರೂ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಂಸದರು ಅನಗತ್ಯ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments