ಬಿಜೆಪಿ ಸೋಲಿಸಿ, ಸಂವಿಧಾನ ಉಳಿಸಿ-ಸಿಪಿಐ ಕರೆ
ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕಿದೆ.
ಹೋದಲ್ಲೆಲ್ಲಾ ಸುಳ್ಳೇ ಹೇಳುವ, ಆಶ್ವಾಸÀನೆಗಳನ್ನು ಚುನಾವಣಾ ಸ್ಟಂಟ್ ಎಂದು ಪರಿಗಣಿಸಿ ಅವನ್ನು ಚುನಾವಣೆ ನಂತರ ಗಾಳಿಗೆ ತೂರುವ, ‘ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ.’ ಎಂದು ಹೇಳುತ್ತಾ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಬೃಷ್ಟಾಚಾರ ನಡೆಸಿದ, ಚುನಾವಣೆ ಗೆಲ್ಲಲು ದೇಶಕಾಯುತ್ತಿರುವ ಸೈನಿಕರನ್ನೆ ಬಲಿಕೊಡುವ, ಎಲ್ಲರ ವಿಕಾಸ ಎಂದು ಹೇಳಿ ಬರೀ ಅದಾನಿ ಅಂಬಾನಿಗಳ ವಿಕಾಸ ಮಾಡುತ್ತಿರುವ, ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿರುವ, ಯುವಜನರಿಗೆ ಉದ್ಯೋಗ ಒದಗಿಸುವಲ್ಲಿ ವಿಫಲವಾದ, ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚುತಿದ್ದರೂ ಅದರ ಬಗ್ಗೆ ಚಕಾರವೆತ್ತದೆ ಅತ್ಯಾಚಾರಿಗಳನ್ನು ರಕ್ಷಿಸುವ, ಕಾರ್ಮಿಕ ಕಾನೂನುಗಳನ್ನು ಬದಲಿಸಿ ಕಾರ್ಮಿಕರನ್ನು ಬೀದಿಗೆ ಎಸೆಯುವ, ರೈತರ ಬೇಡಿಕೆಗಳ ಬಗ್ಗೆ ತಿರಸ್ಕಾರ ತೋರುತ್ತಿರುವ, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ನಾಗರಿಕರು ಎಂದು ಪರಿಗಣಿಸುವ, ಬೆಲೆಯೇರಿಕೆಯನ್ನು ತಡೆಗಟ್ಟದ ಈ ಬಿಜೆಪಿ ಸರಕಾರ ಮುಂದುವರಿಯಲು ಯಾವುದೇ ಉಚಿತ ಕಾರಣಗಳಿಲ್ಲ.
ಆದುದರಿಂದ ದೇಶ ಮತ್ತು ಸಂವಿಧಾನ ಉಳಿಸಲು, ಈ ಚುನಾವಣೆಗಳಲ್ಲಿ ‘ಇಂಡಿಯಾ’ ಒಕ್ಕೂಟದ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪದ್ಮರಾಜ ಆರ್ ಪೂಜಾರಿ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾದ ಜಯಪ್ರಕಾಶ್ ಹೆಗ್ಡೆ ಇವರುಗಳಿಗೆ ತಮ್ಮ ಮತಗಳನ್ನು ಚಲಾಯಿಸಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕೆಂದು, ಭಾರತ ಕಮ್ಯುನಿಷ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಎಲ್ಲಾ ಮತದಾರರನ್ನು ವಿನಂತಿಸುತ್ತದೆ.