Home Mangalorean News Kannada News ಬಿಡ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಬಿಡ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Spread the love

ಬಿಡ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ತನ್ನ ಏಳನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2019ರ ಫೆಬ್ರವರಿ 16ರಂದು ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಮಧುವಿಗೆ 5 ಪವನ್ ಚಿನ್ನ, ಮದುವೆ ವಸ್ತ್ರ ಖರೀದಿಗೆ ನಗದು, ವರನಿಗೆ ಉಡುಗೊರೆ ಹಾಗೂ ಮದುವೆ ಖರ್ಚನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಭರಿಸಲಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಕಾಸರಗೋಡು ಜಿಲ್ಲೆಗಳ ಹೆಣ್ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದ್ದು, ವರಾನ್ವೇಷಣೆಯ ಹೊಣೆಗಾರಿಕೆ ಅರ್ಜಿದಾರರದ್ದಾಗಿದೆ. ಆಯ್ಕೆ ಸಮಯದಲ್ಲಿ ಅನಾಥ, ವಿಕಲ ಚೇತನ ಮತ್ತು ಮದುವೆ ವಯಸ್ಸು ಮೀರಿರುವ ಹೆಣ್ಮಕ್ಕಳ ಮದುವೆಗೆ ಆಧ್ಯತೆ ನೀಡಲಾಗುತ್ತಿದ್ದು, ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ವಧೂ-ವರನ ಹೆಸರು, ವಯಸ್ಸು, ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದು, ಜಮಾಅತ್‍ನ ದೃಡೀಕರಣದೊಂದಿಗೆ ಡಿ. 31ರ ಒಳಗಾಗಿ, ಉಮರ್ ಯು. ಹೆಚ್. ಸಂಚಾಲಕರು, ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹ ಸಂಘಟನಾ ಸಮಿತಿ, ಸಿ-24, 2ನೇ ಮಹಡಿ, ಅಲ್ ರಹಬಾ ಪ್ಲಾಝಾ ನೆಲ್ಲಿಕಾಯಿ ರಸ್ತೆ, ಮಂಗಳೂರು – 575001 ದೂ. ಸಂ. 9845054191 ವಿಳಾಸಕ್ಕೆ ಕಳುಹಿಸುವಂತೆ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ, ಪ್ರಧಾನ ಸಲಹೆÀಗಾರ ಮುಹಮ್ಮದ್ ಕಲ್ಲಾಪು ಹಾಗೂ ಸಾಮೂಹಿಕ ವಿವಾಹ ¸ಂಘಟನಾ ಸಮಿತಿಯ ಸಂಚಾಲಕ ಉಮರ್ ಯು.ಹೆಚ್. ಭಾಗವಹಿಸಿದ್ದರು.


Spread the love

Exit mobile version