ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ ಉಚಿತ ಚಿಕಿತ್ಸೆ: ಆಸ್ಪತ್ರೆಗಳ ಪಟ್ಟಿ
ಮ0ಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಬಿ.ಪಿ.ಎಲ್ ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯಶ್ರೀ, ಎ.ಪಿ.ಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯಭಾಗ್ಯ, ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನುಷ್ಟಾನಗೊಳಿಸುತ್ತಿದ್ದು. ಏಳು ಗಂಭೀರ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ (ಮೋಟಾರು ವಾಹನ ಕಾಯಿದೆಯಡಿಯಲ್ಲಿ ಒಳಗೊಳ್ಳದ ಪ್ರಕರಣಗಳು), ನವಜಾತ ಶಿಶುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳಿಗೆ ಉಚಿತವಾಗಿ ಒಡಂಬಡಿಕೆ ಹೊಂದಿದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಈ ಮೂರು ಯೋಜನೆಗಳೊಂದಿಗೆ ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಪರಿಷ್ಕøತ ಪಟ್ಟಿ ಈ ರೀತಿ ಇದೆ.
ಫಾದರ್ ಮುಲ್ಲರ್ ಆಸ್ಪತ್ರೆ, ಕಂಕನಾಡಿ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ – ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಅಪಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳು.
ಗ್ಲೋಬಲ್ ಆಸ್ಪತ್ರೆ, ಮಣ್ಣಗುಡ್ಡ -ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಅಪಘಾತ, ಸುಟ್ಟಗಾಯಕ್ಕೆ ಚಿಕಿತ್ಸೆ.
ಕೆ.ಎಂ.ಸಿ ಆಸ್ಪತ್ರೆ, ಅತ್ತಾವರ -ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಅಪಘಾತ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು –ಮೂತ್ರಪಿಂಡದ ಕಾಯಿಲೆ, ನರರೋಗ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಅಪಘಾತ, ಸುಟ್ಟಗಾಯಕ್ಕೆ ಚಿಕಿತ್ಸೆ. ಯೆನೆಪೋಯ ಆಸ್ಪತ್ರೆ, ದೇರಳಕಟ್ಟೆ – ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಅಪಘಾತ, ಯೆನೆಪೋಯ ಆಸ್ಪತ್ರೆ, ಕೋಡಿಯಾಲ್ಬೈಲ್ -ಹೃದಯರೋಗ ಮತ್ತು ಮೂತ್ರಪಿಂಡದ ಕಾಯಿಲೆ, ಒಮೇಗಾ ಆಸ್ಪತ್ರೆ – ಹೃದಯ ರೋಗ, ನರ ರೋಗ, ಮೂತ್ರಪಿಂಡದ ಕಾಯಿಲೆ, ಕಣಚೂರು ಆಸ್ಪತ್ರೆ – ಮೂತ್ರಪಿಂಡದ ಕಾಯಿಲೆ ಮತ್ತು ಅಪಘಾತದ ಚಿಕಿತ್ಸೆ ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಪ್ರಗತಿ ಆಸ್ಪತ್ರೆ, ಪುತ್ತೂರು -ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಮತ್ತು ಅಪಘಾತದ ಚಿಕಿತ್ಸೆ, ಎಂ.ಐ.ಒ ಆಸ್ಪತ್ರೆ, ಪಂಪ್ವೆಲ್ – ಕ್ಯಾನ್ಸರ್ ಚಿಕಿತ್ಸೆ ಕೆ.ಎಂ.ಸಿ ಜ್ಯೋತಿ ಸರ್ಕಲ್ -ಹೃದಯ ರೋಗಕ್ಕೆ ಚಿಕಿತ್ಸೆ
ಹೆಚ್ಚಿನ ಮಾಹಿತಿಗಾಗಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಒಡಂಬಡಿಕೆ ಹೊಂದಿರುವ ಆಸ್ಪತ್ರೆಗಳ ಆರೋಗ್ಯ ಮಿತ್ರರನ್ನು ಸಂಪರ್ಕಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.