Home Mangalorean News Kannada News ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ ಕ್ಯಾನ್ಸರ್ ಚಿಕಿತ್ಸೆಗೆ ನೆರವು

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ ಕ್ಯಾನ್ಸರ್ ಚಿಕಿತ್ಸೆಗೆ ನೆರವು

Spread the love

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್  ಕ್ಯಾನ್ಸರ್ ಚಿಕಿತ್ಸೆಗೆ ನೆರವು

ಕೊಟ್ಟಾರ :ನೀರ್‍ಮಾರ್ಗ ಅಡ್ಯಾರ್ ಪದವು ನಿವಾಸಿ ಕೃಷ್ಣ ಕುಮಾರ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಫ್ರೆಂಡ್ಸ್ ಬಲ್ಲಾಳ್‍ಬಾಗ್ ಬಿರುವೆರ್ ಕುಡ್ಲವತಿಯಿಂದ ನಲ್ವತ್ತ ನಾಲ್ಕು ಸಾವಿರ ರೂ. ಸಹಾಯ ಧನ ವಿತರಿಸಲಾಯಿತು.

ಸಂಸ್ಥೆಯ ಕಚೇರಿಯಲ್ಲಿ ಉದ್ಯಮಿಗಳಾದ ರಾಕೇಶ್ ಕೋಟ್ಯಾನ್, ರವೀಂದ್ರ ನಿಕ್ಕಮ್ ಸಹಾಯ ನಿಧಿ ವಿತರಿಸಿದರು. ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಲ್ಲಾಳ್‍ಬಾಗ್ ಮಾತನಾಡಿ,ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‍ಬಾಗ್ ಅಸ್ತಿತ್ವಕ್ಕೆ ಬಂದು ಕೇವಲ 3 ವರ್ಷಗಳಲ್ಲಿ ತನ್ನ ಸಮಾಜಮುಖಿ ಕಾರ್ಯಗಳಿಂದ ಈವರೆಗೆ ನೂರಾರು ಅಶಕ್ತ ಕುಟುಂಬಗಳಿಗೆ ಧನ ಸಹಾಯ ಒದಗಿಸಿದೆ.

ದಾನಿಗಳಿಂದ ಹಾಗೂ ಬಿರುವೆರ್ ಕುಡ್ಲ ಸದಸ್ಯರು ಪ್ರತೀ ತಿಂಗಳು ನೀಡುವ ದೇಣಿಗೆ ಸಂಗ್ರಹಿಸಿ ಈ ಕುಟುಂಬಕ್ಕೆ ನೀಡಿದ್ದೇವೆ. ಮುಂದೆಯೂ ನಾವು ಸಮಾಜದಲ್ಲಿನ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಹಾಯ ಒದಗಿಸಲಿದ್ದೇವೆ ಎಂದರು. ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಲತೇಶ್ ಪೂಜಾರಿ, ರಿನಿತ್ ರಾಜ್, ಅಶ್ರಫ್ ಆಲಿ,ಕಿಶೋರ್ ಬಾಬು, ಅಭಿಷೇಕ್ ಅಮೀನ್,ಯತೀಶ್ ಬಲ್ಲಾಳ್ ಬಾಗ್, ಸುಹಾನ್, ದೀಪು ಶೆಟ್ಟಿಗಾರ್,ರೋಹಿದಾಸ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version