ಬಿರುವೆರ್ ಕುಡ್ಲ ವತಿಯಿಂದ ಧನಸಹಾಯ
ಉಪ್ಪಳ: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಅಬುಧಾಬಿ ಬಿರುವೆರ್ ಕುಡ್ಲ ಘಟಕದ ವತಿಯಿಂದ ಉಪ್ಪಳದ ಪೆರ್ಮುದೆ ಎಂಬಲ್ಲಿ ವಾಸಿಸುತ್ತಿರುವ ಅನಾರೋಗ್ಯ ಪೀಡಿತ ದಂಪತಿಗಳಿಗೆ ಧನಸಹಾಯ ಮಾಡಿ ಮಾನವೀಯತೆ ಮೆರೆದಿದೆ.
ಫ್ರೆಂಡ್ಸ್ ಬಳ್ಲಾಲ್‍ಬಾಗ್ ಬಿರುವೆರ್ ಕುಡ್ಲ ಸಂಘಟನೆ ಸ್ಥಾಪನೆಯಾಗಿ ಕೇವಲ ಒಂದೂವರೆ ವರ್ಷಗಳಲ್ಲಿಯೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನಾನುರಾಗಿಯಾಗಿದೆ. ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್‍ಬಾಗ್ ಅವರ ದಕ್ಷ ಮಾರ್ಗದರ್ಶನದಲ್ಲಿ ಸಂಘದ ಯುವಕರು ಜನಪರ ಕಾರ್ಯಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ದಕ್ಷಿಣ ಕನ್ನಡ ಮಾತ್ರವಲ್ಲದೆ ನೆರೆರಾಜ್ಯ ಕೇರಳ್ ಕಾಸರಗೋಡಿನಲ್ಲಿಯೂ ಅಶಕ್ತರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉಪ್ಪಳದ ಪೆರ್ಮುದೆ ಎಂಬಲ್ಲಿ ಅನಾರೋಗ್ಯ ಪೀಡಿತರಾಗಿ ಕಷ್ಟಮಯ ಜೀವನ ಸಾಗಿಸುತ್ತಿದ್ದ ಲಕ್ಷ್ಮಿ ಮತ್ತು ಪುರುಷೋತ್ತಮ ದಂಪತಿಗಳ ಮನೆಗೆ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ ತೆರಳಿದ ಅಬುಧಾಬಿ ಬಿರುವೆರ್ ಕುಡ್ಲ ಘಟಕದ ಸದಸ್ಯರು ಧನ ಸಹಾಯ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಂಘದ ಸದಸ್ಯರಾದ ಸುರೇಶ್ ಪೂಜಾರಿ ಸಂಘಟನೆಯ ಕಾರ್ಯವೈಖರಿಗಳ ಮಾಹಿತಿ ಬನೀಡಿದರು. ಅಬುಧಾಬಿ ಬಿರುವೆರ್ ಕುಡ್ಲ ಘಟಕದ ರಾಕೇಶ್, ನರೇಶ್ ಪೂಜಾರಿ, ಉದಯ ಕುಮಾರ್, ಹರ್ಷ, ಪುನೀತ್, ಯತೀಶ್ ಪೂಜಾರಿ, ಅಭಿಜಿತ್ ಅಭಿ ಬಿರ್ಕನಕಟ್ಟೆ ಉಪಸ್ಥಿರಿದ್ದರು. ಮಾತ್ರವಲ್ಲ ಈ ವೇಳೆ ಉಪ್ಪಳ ಪ್ರದೇಶದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿಯೂ ಸಂಘಟನೆ ವತಿಯಿಂದ ಧನಸಹಾಯ ಮಾಡಲಾಯಿತು.