ಬಿಲ್ಲವರಿಗೆ ಅನ್ಯಾಯ ಮಾಡಿದ ಬಿಜೆಪಿ ಸೋಲು ಕಾಣುವುದೆ ನನ್ನ ಕೊನೆಯ ಆಸೆ; ಜನಾರ್ದನ ಪೂಜಾರಿ
ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೂಲಕ ಅದರ ನಾಯಕರ ದುರಹಂಕಾರಿ ಪ್ರವೃತ್ತಿಯನ್ನು ನಿಲ್ಲಿಸಬೇಕು ಇದು ನನ್ನ ರಾಜಕೀಯ ಜೀವನದ ಕೊನೆಯ ಆಸೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬಿಲ್ಲವ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರಿನ ಮೂಲ್ಕಿಯಲ್ಲಿ ಬಿಲ್ಲವ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ತಾನು ಗೆಲ್ಲಲು ಪಕ್ಷಕ್ಕಾಗಿ ದುಡಿಯಲು ಮತ್ತು ತನ್ನ ಪಕ್ಷದ ಹೋರಾಟದಲ್ಲಿ ಭಾಗಿಯಾಲು ಮಾತ್ರ ಬಿಲ್ಲವ ಸಮಾಜದ ಯುವಕರು ಬೇಕು. ಆದರೆ ಟಿಕೆಟ್ ಕೊಡಿಸುವಾಗ ಬಿಲ್ಲವ ಸಮಾಜ ಬೇಡಾವಾಗಿದೆ. ಕೋಮುವಾದ ಪಸರಿಸಲು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಲ್ಲವ ಯುವಕರನ್ನು ಬಳಸಿಕೊಂಡು ಬಿಜೆಪಿ ಪಕ್ಷದ ನಾಯಕರು ಹಾಗೂ ಸಂಸದ ನಳಿನ್ ಈಗ ಇಡೀ ಸಮುದಾಯವನ್ನೇ ಮೂಲೆಗೆ ದೂಡಿದ್ದಾರೆ.
ಉಡುಪಿ ಮತ್ತು ಮಂಗಳೂರಿನಲ್ಲಿ ಬಿಲ್ಲವ ಸಮುದಾಯದ ಶೇ.30ಕ್ಕೂ ಹೆಚ್ಚು ಜನಸಂಖ್ಯೆ ಇರುವಾಗ ನಮ್ಮ ಸಮುದಾಯಕ್ಕೆ ಪ್ರತಿಯೊಂದು ಪಕ್ಷವೂ 5 ಅಭ್ಯರ್ಥಿಗಳನ್ನು ಘೋಷಿಸಬೇಕಿತ್ತು. ಆದರೆ ಬಿಜೆಪಿ ಕೇವಲ ನೆಪ ಮಾತ್ರಕ್ಕೆ 2 ಕ್ಷೇತ್ರ ಮಾತ್ರ ನೀಡಿದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ನೀಡುವ ದೃಷ್ಟಿಯಲ್ಲಿ 3 ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಗಳನ್ನು ಹಾಗೂ ಮುಸ್ಲಿಂ, ಕ್ರೈಸ್ತ ಹಾಗೂ ಜೈನ ಸಮುದಾಯಕ್ಕೂ ಟಿಕೇಟ್ ನೀಡಿದೆ. ಆದರೆ ಬಿಜೆಪಿ ಬಂಟ ಸಮುದಾಯಕ್ಕೆ 6 ಸೀಟನ್ನು ಕೊಟ್ಟಿದ್ದರೆ, ಬ್ರಾಹ್ಮಣರಿಗೆ 3 ಕ್ಷೇತ್ರ ನೀಡಿ ಮಿಕ್ಕಿದ್ದರಲ್ಲಿ ಬಿಲ್ಲವರಿಗೆ 2 ಕೊಟ್ಟಿದೆ. ಬಿಜೆಪಿಯ ಇಂತಹ ದುರಂಹಕಾರಿ ಪ್ರವೃತ್ತಿಯನ್ನು ಬಿಲ್ಲವರು ವಿರೋಧಿಸಬೇಕು ಎಂದರು.
ಈ ಚುನಾವಣೆಯಲ್ಲಿ ಬಿಲ್ಲವರಿಗೂ ಬಿಜೆಪಿ ಬೇಡವಾಗಿದೆ. ಬಿಲ್ಲವ ಯುವಕರೆ್ಲಲರೂ ಒಟ್ಟಾಗಿ ಬಿಜೆಪಿ ವಿರುದ್ದ ಮತ ಚಲಾಯಿಸಿ ಕರಾವಳಿಯಲ್ಲಿ ಬಿಲ್ಲವರಿಗೆ ಅವಮಾನ ಮಾಡಿದ ಬಿಜೆಪಿ ಸೋಲು ಕಾಣುವುದೆ ನನ್ನ ಕೊನೆಯ ಆಸೆ ಎಂದರು.
Mr Poojary, you should be avoiding this type of casteist talk at the fag end of your career. Just take a stately stance and stop pandering to Pappu.