ಬಿಷಪ್ ದೀಕ್ಷೆ: ವಾಹನ ನಿಲುಗಡೆ ವ್ಯವಸ್ಥೆ
ಸೆಪ್ಟೆಂಬರ್ 15ರಂದು ನಡೆಯುವ ಬಿಷಪ್ ದೀಕ್ಷೆ ಹಾಗೂ ಪಟ್ಟಾಬಿಷೇಕ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ ಜಿಲ್ಲೆಯಿಂದ ಪ್ರತ್ಯೇಕ ಬಸ್ಸಿಗಳಲ್ಲಿ ಆಗಮಿಸುವವರು ಅರ್.ಟಿ.ಓ ಕಚೇರಿಯ ಬಳಿ ಇಳಿಸಿ, ಸ್ಟೇಟ್‍ಬ್ಯಾಂಕ್ ಮುಖಾಂತರ ಮಿಲಾಗ್ರಿಸ್ ಚರ್ಚ್, ಮಿಲಾಗ್ರಿಸ್ ಕಾಲೇಜ್ ಅಥವಾ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಸ್ಸುಗಳನ್ನು ನಿಲುಗಡೆ ಮಾಡುವುದು. ಮಿನಿ ಬಸ್ಸು, ಟೆಂಪೊ ಟ್ರಾವೆಲ್ಸ್‍ಗಳು ಭಕ್ತಾದಿಗಳನ್ನು ಕೊರ್ಪರೇಷನ್ ಬ್ಯಾಂಕ್ ಮುಖ್ಯ ಕಚೇರಿಯ ಹತ್ತಿರ ಇಳಿಸಿ ನೇರವಾಗಿ ಎಮ್ಮೆಕೆರೆ ಮೈದಾನದಲ್ಲಿ ನಿಲುಗಡೆ.
ಚತುರ್ಥ್‍ಚಕ್ರ ವಾಹನಗಳಲ್ಲಿ ಬರುವವರು ಕೊರ್ಪರೇಷನ್ ಬ್ಯಾಂಕ್ ಹತ್ತಿರ ಭಕ್ತಾಧಿಗಳನ್ನು ಇಳಿಸಿ ನೇರವಾಗಿ ಸೈಂಟ್ ಅನ್ಸ್ ಶಾಲಾ ಮುಖಾಂತರ ನೆಹರು ಮೈದಾನ್, ಫುಟ್‍ಬಾಲ್ ಗೌಂಡ್, ಟೌನ್‍ಹಾಲ್ ಹಾಗೂ ಮಿಲಾಗ್ರಿಸ್ ಜುಬುಲಿಹಾಲ್ ಕೆಳ ಅಂತಸ್ತು ನಿಲುಗಡೆ, ದ್ವಿಚಕ್ರ ವಾಹನಗಳು ಸೈಂಟ್ ಅನ್ಸ್ ಗೇಟ್ 1,4, 5 ರಲ್ಲಿ ನಿಲುಗಡೆ.
11.30 ಘಂಟೆಗೆ ಸಭಾ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಸೈಂಟ್ ಅನ್ಸ್ ಗೇಟ್ 2, 3 ರಲ್ಲಿ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಭಕ್ತಾಧಿಗಳು ಪೊಲೀಸ್ ಸಂಚಾರಿ ಇಲಾಖೆ ಹಾಗೂ ಸ್ವಯಂ ಸೇವಕರೊಡನೆ ಸಹಕರಿಸಬೇಕಾಗಿ ಸ್ವಯಂ ಸೇಕರ ಸಮಿತಿಯ ಸಂಚಾಲಕರಾದ ಶ್ರೀ ಸುಶೀಲ್ ನೊರೊನ್ಹರವರು ತಿಳಿಸಿದ್ದಾರೆ.