Home Mangalorean News Kannada News ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರಿಗೆ ಎಂ.ಸಿ.ಸಿ. ಬ್ಯಾಂಕಿನ ಪರವಾಗಿ ಸನ್ಮಾನ

ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರಿಗೆ ಎಂ.ಸಿ.ಸಿ. ಬ್ಯಾಂಕಿನ ಪರವಾಗಿ ಸನ್ಮಾನ

Spread the love

ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜರಿಗೆ ಎಂ.ಸಿ.ಸಿ. ಬ್ಯಾಂಕಿನ ಪರವಾಗಿ ಸನ್ಮಾನ

ಮಂಗಳೂರು ಕಥೋಲಿಕ್ ಕೋ-ಅಪರೇಟಿವ್ ಬ್ಯಾಂಕಿನ ಚುನಾಯಿತ ನಿರ್ದೇಶಕರ ಆಡಳಿತ ಮಂಡಲಿಯ ಮೊದಲ ಸಭೆಯು ದಿನಾಂಕ 05.09.2018ರಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆವೆರೆಂಡ್ ಡಾ. ಆಲೋಸಿಯಸ್ ಪಾವ್ಲ್ ಡಿ’ಸೋಜರವರ ಆಶೀರ್ವಚನದೊಂದಿಗೆ ಪ್ರಾರಂಭವಾಯಿತು. ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊರವರು ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಬಿಷಪರನ್ನು ಸ್ವಾಗತಿಸಿ, ತಮ್ಮನ್ನು ಜೀವನದ ಪ್ರತಿಘಟ್ಟದಲ್ಲೂ ಹರಸಿ ಪ್ರೋತ್ಸಾಹಿಸಿದ ಬಿಷಪರ ಉದಾತ್ತತೆಯನ್ನು ಸ್ಮರಿಸಿದರು. ಬ್ಯಾಂಕಿನ ಅಧ್ಯಕ್ಷರಾಗಿ ಬಿಷಪರ ಮಾರ್ಗದರ್ಶನ ಹಾಗೂ ಆಶಿರ್ವಾದದೊಂದಿಗೆ ಬ್ಯಾಂಕನ್ನು ಮುನ್ನಡೆಸಲು ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬ್ಯಾಂಕಿನ ನೂತನ ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊರವರು ಮಂಗಳೂರು ಧರ್ಮಪ್ರಾಂತ್ಯಕ್ಕೆ ಬಿಷಪ್‍ರವರು ನೀಡಿದ 23 ವರ್ಷಗಳ ನಿಸ್ವಾರ್ಥ ಸೇವೆಯನ್ನು ಹೊಗಳಿ ಶ್ಲಾಘಿಸಿದರು ಹಾಗೂ ಅವರ ನಿವೃತ್ತಿ ಜೀವನವು ಫಲಪ್ರದವಾಗಲಿ ಎಂದು ಆಶಿಸಿದರು. ಬ್ಯಾಂಕಿನ ಪ್ರಗತಿ ಮತ್ತು ಸುಧಾರಣೆಗೆ ಹೊಸ ಆಡಳಿತ ಮಂಡಲಿಗೆ ಬಿಷಪರ ಆಶಿರ್ವಾದ ಹಾಗೂ ಸಲಹೆ ಸೂಚನೆಗಳು ಯಾವಾಗಲು ಅಗತ್ಯವಿದೆ ಎಂದು ಹೇಳಿದರು.

ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸನ್ಮಾನ ಪತ್ರ ವಾಚಿಸಿದರು.

ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, 16 ಶಾಖೆಗಳ ಪ್ರಬಂಧಕರು ನಿರ್ಗಮಿತ ಬಿಷಪರವರನ್ನು ಮಂಗಳೂರು ಧರ್ಮಪ್ರಾಂತ್ಯಕ್ಕೆ ಸಲ್ಲಿಸಿದ ಪ್ರೀತಿಯ ಸೇವೆಗಾಗಿ ಹಾಗೂ ಪ್ರತ್ಯೇಕವಾಗಿ ಬ್ಯಾಂಕಿನ ಮೇಲಿನ ಅಭಿಮಾನಕ್ಕಾಗಿ ಗೌರವಿಸಿ ವಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತಾಡಿದ ಬಿಷಪ್‍ರವರು ಬ್ಯಾಂಕಿನ ಮೇಲೆ ತಮಗಿರುವ ಒಲವು ಹಾಗೂ ಅಭಿಮಾನವನ್ನು ಪ್ರಕಟಿಸಿ, ಬ್ಯಾಂಕಿನ ನೂತನ ಆಡಳಿತ ಮಂಡಳಿಯ ಸದಸ್ಯರು ಒಗ್ಗಟಿನಿಂದ ಕಾರ್ಯನಿರ್ವಹಿಸಿ ಬ್ಯಾಂಕನ್ನು ಪ್ರಗತಿಯತ್ತ ಮುನ್ನಡೆಸುವಂತೆ ಕರೆ ನೀಡಿದರು. ಪ್ರತಿಯೊಬ್ಬರ ನಿಸ್ವಾರ್ಥ ಸೇವೆಯು, ನಿರ್ದೇಶಕರಾಗಲಿ ಅಥವಾ ಸಿಬ್ಬಂದಿಯಾಗಲಿ ಉತ್ತಮ ಫಲ ನೀಡುವುದಾಗಿ ಕಿವಿ ಮಾತು ಹೇಳಿದರು. ಸಿಬ್ಬಂದಿಯನ್ನು ಉದ್ದೇಶಿಸಿ ಗ್ರಾಹಕರ ಸೇವೆ ಮತ್ತು ಗ್ರಾಹಕರ ತ್ರಪ್ತಿಗಾಗಿ ಪ್ರಥಮ ಪ್ರಾಮುಖ್ಯತೆಯನ್ನು ನೀಡಬೇಕೆಂದು ಕರೆ ನೀಡಿದರು. ಸಿಬ್ಬಂದಿಯವರು ಗ್ರಾಹಕರಿಗೆ ನೀಡುವ ಸೌಲಭ್ಯಕ್ಕಾಗಿ ಸಿಬ್ಬಂದಿಯವರನ್ನು ಪೆÇ್ರೀತ್ಸಾಹಿಸಲು ಹೊಸ ಆಡಳಿತ ಮಂಡಳಿಗೆ ಬಿಶಪರು ಕರೆ ನೀಡಿದರು.

ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿ’ಸಿಲ್ವಾ ವಂದಿಸಿ ನಿರ್ದೇಶಕಿ ಐರಿನ್ ರೆಬೆಲ್ಲೊರವರು ನಿರ್ವಹಿಸಿದರು.


Spread the love

Exit mobile version