ಬಿ.ಎಂ.ಭಟ್‌ಗೂ ಸಿಐಟಿಯುಗೂ ಸಂಬಂಧ ಇಲ್ಲ – ಸಿಐಟಿಯು ದ.ಕ ಜಿಲ್ಲಾ ಸಮಿತಿ

Spread the love

ಬಿ.ಎಂ.ಭಟ್‌ಗೂ ಸಿಐಟಿಯುಗೂ ಸಂಬಂಧ ಇಲ್ಲ – ಸಿಐಟಿಯು ದ.ಕ ಜಿಲ್ಲಾ ಸಮಿತಿ

ಮಂಗಳೂರು: ಸಿಐಟಿಯು ಮುಖಂಡ ಕಮ್ಯೂನಿಸ್ಟ್ ನಾಯಕ ಎಂದು ಹೇಳಿಕೊಳ್ಳುತ್ತಿರುವ ಬಿ.ಎಂ.ಭಟ್‌ರವರು ಬೇರೆ ಬೇರೆ ಸಂಘಟನೆಗಳ ಹೆಸರನ್ನು ಬಳಸಿ ಸಿಐಟಿಯು ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡುತ್ತಿರುವುದನ್ನು ಸಿಐಟಿಯು ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಬಿ.ಎಂ.ಭಟ್‌ರವರನ್ನು ಅಶಿಸ್ತಿನ ಕಾರಣದಿಂದಾಗಿ ಸಿಐಟಿಯು ಸಂಘಟನೆಯಿಂದ ಉಚ್ಛಾಟನೆ ಮಾಡಲಾಗಿದ್ದು ಅವರು ನಾಯಕತ್ವವಹಿಸುವ ಯಾವುದೇ ಸಂಘಟನೆ ಸಿಐಟಿಯುನೊಂದಿಗೆ ಅಫಿಲಿಯೇಶನ್ ಪಡೆದಿಲ್ಲ. ಅವರು ಸಿಐಟಿಯುನ ಬಾವುಟವಾಗಲೀ ಹೆಸರಾಗಲೀ ಬಳಕೆ ಮಾಡುವುದರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು.

ಕಾನೂನು ವಿರುದ್ಧವಾಗಿ ವ್ಯವಹಾರ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ರವರ ಮೇಲೆ ಕೂಡಾ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕು, ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ವಿಪರೀತ ಬಡ್ಡಿ ವಸೂಲಿ ಮಾಡುತ್ತಿರುವುದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಿಐಟಿಯು ಸಂಘಟನೆ ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತದೆ. ಸಾಲ ಪಡೆಯುವಾಗ ಷರತ್ತುಗಳು ಕಾನೂನುಬದ್ಧವಿರಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ರ ತನಿಖೆ ನಡೆಸಿ ಕ್ರಮವಹಿಸಬೇಕು.

ಮೈಕ್ರೋ ಫೈನಾನ್ಸ್ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುವುದನ್ನು ಸಿಟಿಯುಯು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಹಾಗೆನೇ ಇಂತಹ ಸುಲಿಗೆಕೋರ ಸಂಸ್ಥೆಗಳ ಸಾಲ ಕೂಪಕ್ಕೆ ಬಲಿ ಬೀಳಬಾರದೆಂದು ಜನಸಾಮಾನ್ಯರನ್ನು ಒತ್ತಾಯಿಸುತ್ತದೆ.


Spread the love