ಬೀಜಾಡಿಗೆ ಡಿಸಿ ಪ್ರಿಯಾಂಕ ಭೇಟಿ: ನವಯುಗ ಕಂಪನಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ

Spread the love

ಬೀಜಾಡಿಗೆ ಡಿಸಿ ಪ್ರಿಯಾಂಕ ಭೇಟಿ: ನವಯುಗ ಕಂಪನಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ

ಕುಂದಾಪುರ: ಕಳೆದ ಹಲವು ದಿನಗಳಿಂದ ಸರ್ವಿಸ್ ರಸ್ತೆಯನ್ನು ಅಗೆದು ಖಾಲಿ ಜೆಲ್ಲಿ ಹಾಕಿ ಹಾಗೇ ಬಿಟ್ಟು ನಾಪತ್ತೆಯಾಗಿದ್ದ ನವಯುಗ ಕಂಪನಿ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಹರಿಹಾಯ್ದ ಘಟನೆ ಶನಿವಾರ ಬೀಜಾಡಿಯಲ್ಲಿ ನಡೆಯಿತು.

ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ತಂಡವನ್ನು ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಬೀಜಾಡಿ ಸರ್ವಿಸ್ ರೋಡ್ ಯೂ ಟರ್ನ್ ನಿಂದ ಬೀಜಾಡಿ ವೈ ಜಂಕ್ಷನ್ ತಿರುವು ತನಕ ಕಾಲ್ನಡೆಗೆಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ ಇಂಜಿನಯರ್ ಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು. ದಿನವಿಡಿ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರೂ ಸೇರಿದಂತೆ ಸ್ಥಳೀಯರೂ ತಿರುಗಾಡುವು ದಾದರೂ ಹೇಗೆ? ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್ ಗಳಿಲ್ಲ, ಇಷ್ಟೊಂದೂ ಅಪಾಯಕಾರಿ ಇರುವಾಗ ನಿಮಗಿನ್ನೂ ಕಾಲವಾಕಾಶ ಕೊಡುವ ಪ್ರಶ್ನೆಯೇ ಇಲ್ಲ. ಸೋಮವಾರದಂದು ಕಾಮಗಾರಿ ಕೈಗೆತ್ತಿಕೊಳ್ಳು ವುದಿಲ್ಲ ವಾದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್ ಹಾಕಿ ಕಾನೂನೂತ್ಮಾಕ ಕೇಸುಗಳನ್ನು ದಾಖಲಿಸುವುದರ ಮೂಲಕ ಜರೂರು ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಅದೇಶ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ತಿಪ್ಪೇಸ್ವಾಮಿ ಹಾಗೂ ನವಯುಗ ಕಂಪನಿ ಅಧಿಕಾರಿಗಳ ತಂಡ ಉಪಸ್ಥಿತರಿದ್ದು ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿದರು.

ಸ್ಥಳೀಯರ ತರಾಟೆ: ಡಿಸಿ ಸ್ಥಳಕ್ಕೆ ಬೇಟಿ ಕೊಟ್ಟಾಗ ಸ್ಥಳೀಯರು ನವಯುಗ ಕಂಪನಿ ಇಂಜಿನಿಯರ್ ಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ವಿಜಯ್ ಸ್ಯಾಮ್ ಸನ್ ಇವರನ್ನೂ ತರಾಟೆಗೆ ತೆಗೆದುಕೊಂಡರು. ಇಷ್ಟು ವರ್ಷ ಕಾಮಗಾರಿ ವಿಳಂಭವಾಗಿ ದಲ್ಲದೇ ಸರ್ವಿಸ್ ರೋಡ್ ನ್ನೂ ಅಗೆದು ಹಾಕಿ ಸಾರ್ವಜನಿಕರು ತಿರುಗಾಡದ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಿ. ಈ ಸರ್ವಿಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡುವಾಗ ಮೇಲ್ಬಾಗದ ಹೆದ್ದಾರಿಯಲ್ಲಿ ಓಡಾಡೋವ ವಾಹನಗಳನ್ನು ಕಂಡು ಹೆದರ ಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ . ಏಲ್ಲಿಯಾದರೂ ಮೇಲ್ಗಡೆ ಓಡಾಡೋವ ವಾಹನ ಪಲ್ಟಿಯಾದರೇ ಇದಕ್ಕೆ ಹೊಣೆಯಾರು ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬೆರೆಟ್ಟೂ, ಬೀಜಾಡಿ ಗ್ರಾಮ ಪಂಚಾಯತಿ ಸದಸ್ಯ ವಾದಿರಾಜ ಹೆಬ್ಬಾರ್, ಪಿಡಿಒ ಗಣೇಶ,ಗೋಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಸ್ಪತಿ ಪುತ್ರನ್, ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನ ಮನೆ, ಚಂದ್ರಶೇಖರ ಬೀಜಾಡಿ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ಬೀಜಾಡಿ ಮಿತ್ರ ಸಂಗಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ಬೀಜಾಡಿ, ಪದಾಧಿಕಾರಿಗಳಾದ ಅನೂಪ್ ಕುಮಾರ್ ಬಿ.ಆರ್, ನಾಗರಾಜ ಕಲಾವಿದ, ರಾಜೇಶ್ ಆಚಾರ್ ಗೋಪಾಡಿ, ಗಿರೀಶ್ ಬೀಜಾಡಿ, ರಾಜೇಶ್ ಆಚಾರ್ ಬೀಜಾಡಿ, ವಕ್ವಾಡಿ ಯುವಶಕ್ತಿ ಮಿತ್ರ ಮಂಡಲ ವಕ್ವಾಡಿ ಪ್ರಮುಖ ಸಂತೋಷ ಕುಲಾಲ್ ವಕ್ವಾಡಿ, ಬೀಜಾಡಿ ಬಡಾಗಡಿ ನಾಗಬೊಬ್ಬರ್ಯ ದೈವಸ್ಥಾನ ಚಾತ್ರಬೆಟ್ಟು ಇದರ ಅಧ್ಯಕ್ಷ ಶ್ರೀಧರ್ ಚಾತ್ರಬೆಟ್ಟು, ಮೂಡುಗೋಪಾಡಿ ರಿಫಾಯಿ ಜುಮ್ಮ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎಮ್,ನಾಸೀರ್, ಬೀಜಾಡಿ ರಿಕ್ಷಾ ಚಾಲಕರ ಸಂಘದ ಪ್ರಮುಖ ದಿನೇಶ್ ಹಲ್ತೂರು, ಉದ್ಯಮಿ ಗಳಾದ ಸುರೇಶ್ ಬೆಟ್ಟಿನ್, ಜಯಕರ ಶೆಟ್ಟಿ, ಮಹೇಶ್ ಮಟ್ಟಿ , ಕರುಣಾಕರ ಶೆಟ್ಟಿ ಕೆದೂರು, ಮಹೇಶ್ ಭಂಡಾರಿ, ಸುಭಾಷ್ ಚಂದ್ ಮೊದಲಾದವರೂ ಇದ್ದರು.


Spread the love