Home Mangalorean News Kannada News ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲು

ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲು

Spread the love

ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲು

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಶನಿವಾರ (ಅ.26) ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ.

ಘಟನೆಯಲ್ಲಿ ನೀರುಪಾಲಾಗಿದ್ದ ಕುಂದಾಪುರ ಮೂಲದ ಅಜಯ್ ಮೃತಪಟ್ಟಿದ್ದು, ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರುಪಾಲಾದ ಮತ್ತೊಬ್ಬ ಯುವಕನಾಗಿದ್ದು, ಈತನಿಗಾಗಿ ಹುಡುಕಾಟ ಮುಂದುವರೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ.

ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನ ದಾಸರಹಳ್ಳಿಯಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ ಅದರಂತೆ ಇಂದು (ಶನಿವಾರ) ಬೆಳಿಗ್ಗೆ ತನ್ನ ಇನ್ನಿಬ್ಬರು ಸ್ಥಳೀಯ ಸ್ನೇಹಿತರ ಜೊತೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರಪಾಲಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version