Home Mangalorean News Kannada News ಬೀಜಾಡಿ : ಮರಣಬಲೆ ಬಿಡಲು ಹೋಗಿದ್ದ ಯುವಕ ಸಮುದ್ರ ಪಾಲು

ಬೀಜಾಡಿ : ಮರಣಬಲೆ ಬಿಡಲು ಹೋಗಿದ್ದ ಯುವಕ ಸಮುದ್ರ ಪಾಲು

Spread the love

ಬೀಜಾಡಿ : ಮರಣಬಲೆ ಬಿಡಲು ಹೋಗಿದ್ದ ಯುವಕ ಸಮುದ್ರ ಪಾಲು

ಕುಂದಾಪುರ: ಕೋಟೇಶ್ವರ ಹಳೆಅಳಿವೆ ಬಳಿ ಯುವಕನೊರ್ವ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಫೆ. 25 ರಂದು ಮಂಗಳವಾರ  ಸಂಭವಿಸಿದೆ.

ಮೃತಯುವಕ ಬೀಜಾಡಿ ಪೆಟ್ನಿ ಮನೆ ಕುಮಾರ್ ಅವರ ಪುತ್ರ ಮೇಘರಾಜ್ (24) ಎಂದು ಗುರುತಿಸಲಾಗಿದೆ.

ಮೇಘರಾಜ್ ಅವರು  ಹಳಿಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಗಿದ್ದು ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ದಡ ಸೇರಿರುತ್ತದೆ.

ತಕ್ಷಣ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಗಂಗೊಳ್ಳಿ ಹಾಗೂ K.N.D ಸುದರ್ಶನ್ ಎಸ್ ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಇವರು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version