Home Mangalorean News Kannada News ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಎಲ್ಲಾ ಬೀಡಿ ಡಿಪೋಗಳಿಗೆ ವರ್ಗಾವಣೆ

ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಎಲ್ಲಾ ಬೀಡಿ ಡಿಪೋಗಳಿಗೆ ವರ್ಗಾವಣೆ

Spread the love

ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಎಲ್ಲಾ ಬೀಡಿ ಡಿಪೋಗಳಿಗೆ ವರ್ಗಾವಣೆ

 

ದಿನಾಂಕ 23-10-2018 ರಂದು ಆರಂಭವಾದ ಬೀಡಿ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹವನ್ನು ಭಾರತ್ ಬೀಡಿ ವಕ್ರ್ಸ್ ಕದ್ರಿ ಇದರ ಮುಂದುಗಡೆ ದಿ:26-10-2018ರ ತನಕ ನಡೆಸಲಾಯಿತು. 2018 ಎಪ್ರಿಲ್ 1 ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಸಾವಿರ ಬೀಡಿಗೆ ರೂ.210 ಕನಿಷ್ಟ ಕೂಲಿಯನ್ನು ಹಾಗೂ 2015 ಎಪ್ರಿಲ್ 1 ರಿಂದ ನೀಡಬೇಕಾದ ತುಟ್ಟಿಭತ್ತೆ ರೂ.12.75 ಮೊತ್ತವನ್ನು ಕೂಡಲೇ ನೀಡಬೇಕೆಂದು ಸಿಐಟಿಯು ಹಾಗೂ ಎಐಟಿಯುಸಿ ಸಂಯೋಜಿತಗೊಂಡಿರುವ ಬೀಡಿ ಕಾರ್ಮಿಕರು ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು.

 ದಿ:26-10-2018 ರಂದು ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಗರಾಜ್‍ರವರು ಧರಣಿ ಸತ್ಯಾಗ್ರಹವನ್ನು ಕೈಬಿಟ್ಟು ಕಾನೂನಿಗೆ ಮೊರೆ ಹೋಗಿರುವ ಮಾಲಕರನ್ನು ಕಾನೂನು ಮುಖಾಂತರವೇ ಪ್ರಶ್ನಿಸಿ ನ್ಯಾಯ ಪಡೆಯುವುದು ಉಚಿತವೆಂದು ಸಲಹೆ ನೀಡಿದರು. ತಮ್ಮ ಇಲಾಖೆಯಲ್ಲಿ ನೀಡಬೇಕಾದ ಸರ್ವ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದರು. ದಿ:26-10-2018 ರಂದು ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಭಾರತ್ ಬೀಡಿ ವಕ್ರ್ಸ್ ಕದ್ರಿಯಲ್ಲಿ ಸ್ಥಗಿತಗೊಳಿಸಲಾಯಿತು. ಆದರೆ ದಿ:27-10-2018 ರಿಂದ ಜಿಲ್ಲೆಯ ಬೇರೆ ಬೇರೆ ಬೀಡಿ ಕಂಪೆನಿಗಳ ಡಿಪೋಗಳ ಮುಂದೆ ಧರಣಿ ಸತ್ಯಾಗ್ರಹ ಮತ್ತು ಘೆರಾವ್ ಹೋರಾಟವನ್ನು ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.

ಧರಣಿ ಸತ್ಯಾಗ್ರಹದ ಸಮಾರೋಪ ಕಾರ್ಯಕ್ರಮದಲ್ಲಿ ಬೀಡಿ ಫೆಡರೇಶನ್ ಸಿಐಟಿಯು ಮುಂದಾಳುಗಳಾದ ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ವಸಂತ ಆಚಾರಿ, ಬೀಡಿ ಫೆಡರೇಶನ್ ಎಐಟಿಯುಸಿ ಮುಂದಾಳುಗಳಾದ ಸೀತಾರಾಮ ಬೇರಿಂಜೆ, ಸುರೇಶ್‍ರವರುಗಳು ಭಾಷಣ ಮಾಡಿದರು. ಧರಣಿ ಸತ್ಯಾಗ್ರಹದ ನೇತೃತ್ವವವನ್ನು ಸಿಐಟಿಯುನ ಸದಾಶಿವ ದಾಸ್, ರಮಣಿ, ಜಯಂತಿ ಶೆಟ್ಟಿ, ಯು.ಜಯಂತ ನಾಯ್ಕ್, ಪದ್ಮಾವತಿ ಶೆಟ್ಟಿ, ಸಂಜೀವ ಬಂಗೇರ, ಗಂಗಯ್ಯ ಅಮೀನ್, ರಾಮಣ್ಣ ವಿಟ್ಲ, ಬಾಬು ದೇವಾಡಿಗ, ರಾಧಾ, ಗಿರಿಜ, ಲಕ್ಷ್ಮಿ, ಭಾರತಿ ಬೋಳಾರ್, ವಸಂತಿ, ರೋಹಿಣಿ, ಲೋಲಾಕ್ಷಿ, ನೋಣಯ್ಯ ಗೌಡ, ಎಐಟಿಯುಸಿನ ಎಚ್.ವಿ.ರಾವ್, ಬಿ.ಕುಕ್ಯಾನ್, ಶಿವಪ್ಪ, ಕರುಣಾಕರ, ಸರಸ್ವತಿ ಕಡೇಶಿವಾಲಯ, ಭಾಸ್ಕರ, ವನಜ, ಶೃತಿರವರುಗಳು ವಹಿಸಿದ್ದರು.


Spread the love

Exit mobile version