Home Mangalorean News Kannada News ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ರದ್ದು: ಮಹಾನಗರಪಾಲಿಕೆ ಎಚ್ಚರಿಕೆ

ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ರದ್ದು: ಮಹಾನಗರಪಾಲಿಕೆ ಎಚ್ಚರಿಕೆ

Spread the love

ಬೀದಿ ವ್ಯಾಪಾರಿಗಳ ಗುರುತಿನ ಚೀಟಿ ರದ್ದು: ಮಹಾನಗರಪಾಲಿಕೆ ಎಚ್ಚರಿಕೆ

ಮ0ಗಳೂರು : ನಗರಪಾಲಿಕೆಯ ಅಧಿಕೃತ ಬೀದಿ ವ್ಯಾಪಾರಸ್ಥರ ವಲಯದಲ್ಲಿ ವ್ಯಾಪಾರ ಮಾಡದಿದ್ದರೆ ಬೀದಿ ವ್ಯಾಪಾರಿಗಳಿಗೆ ನೀಡಲಾಗಿರುವ ಗುರುತಿನ ಚೀಟಿಯನ್ನೇ ರದ್ದುಪಡಿಸುವುದಾಗಿ ಮಂಗಳೂರು ಮಹಾನಗರಪಾಲಿಕೆ ಎಚ್ಚರಿಸಿದೆ.

   ಈಗಾಗಲೇ ಮಂಗಳೂರು ಮಹಾನಗರಪಾಲಿಕೆಯ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆಯ ಹಿತದೃಷ್ಟಿಯಿಚಿದ ಹಾಗೂ ನಗರದ ವಾಹನ ಸಂಚಾರ ಮತ್ತು ಪಾದಚಾರಿಗಳು/ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪ್ರಥಮ ಹಂತವಾಗಿ ಮಂಗಳೂರು ಮಹಾನಗರಪಾಲಿಕೆಯ ಸ್ಟೇಟ್ ಬ್ಯಾಂಕ್, ಸರ್ವೀಸ್ ಬಸ್ ಸ್ಯಾಂಡ್, ಲೇಡಿಗೋಶನ್ ಮತ್ತು ಮೈದಾನದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರವನ್ನು ಮಾಡುವ ಮತ್ತು ಬೀದಿ ವ್ಯಾಪಾರಿಯ ಗುರುತಿನ ಚೀಟಿಯನ್ನು ಹೊಂದಿರುವವರಿಗೆ ಸರ್ವೀಸ್ ಬಸ್ ಸ್ಯಾಂಡ್ ಹತ್ತಿರ ವ್ಯವಸ್ಥಿತವಾದ “ಬೀದಿ ವ್ಯಾಪಾರಸüರ ವಲಯ”ವನ್ನು ವ್ಯವಸ್ಥೆ ಮಾಡಿಕೊಡಲಾಗಿದೆ.

ಬೀದಿ ವ್ಯಾಪಾರಿಯ ಗುರುತಿನ ಚೀಟಿಯನ್ನು ಹೊಂದಿರುವ ಬೀದಿ ಬದಿ ವ್ಯಾಪಾರಸ್ಥüರಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ತಿಳಿಸಿದರೂ ಸಹ ಬೀದಿ ವ್ಯಾಪಾರಿ ವಲಯದಲ್ಲಿ ತಮ್ಮ ವ್ಯಾಪಾರವನ್ನು ನಡೆಸದೇ, ನಗರದ ವಾಹನದ ಸಂಚಾರ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬೀದಿ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಕಂಡು ಬಂದಿರುತ್ತದೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿದೆ.

 ಈ ಹಿನ್ನೆಲೆಯಲ್ಲಿ ಆಗಸ್ಟ್ 21 ರಿಂದ ಬೀದಿ ಬದಿ ವ್ಯಾಪಾರದ ವಲಯದಲ್ಲಿ “ಬೀದಿ ವ್ಯಾಪಾರಿಯ ಗುರುತಿನ ಚೀಟಿ”ಯನ್ನು ಹೊಂದಿರುವ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರವನ್ನು ತೊಡಗಿಸದೇ ಇದ್ದಲ್ಲಿ “ಬೀದಿ ವ್ಯಾಪಾರಿಯ ಗುರುತಿನ ಚೀಟಿ”ಯನ್ನು ರದ್ದುಗೊಳಿಸಲಾಗುವುದೆಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

 


Spread the love

Exit mobile version