ಬೃಹತ್‌ ಸಮಾವೇಶ- ಬಿಗಿ ಬಂದೋಬಸ್ತ್; 3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

Spread the love

ಬೃಹತ್‌ ಸಮಾವೇಶ- ಬಿಗಿ ಬಂದೋಬಸ್ತ್; 3 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಮಂಗಳೂರು: ಬೃಹತ್‌ ಸಮಾವೇಶ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಂದೋಬಸ್ತ್ಗಾಗಿ 3 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. 8 ಮಂದಿ ಎಸ್‌ಪಿ, 12 ಮಂದಿ ಎಎಸ್‌ಪಿ, 40 ಮಂದಿ ಡಿಎಸ್‌ಪಿ, 9 ಇನ್‌ಸ್ಪೆಕ್ಟರ್‌, 200 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು, 300 ಎಎಸ್‌ಐಗಳು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ರ್ಯಾಪಿಡ್‌ ಇಂಟರ್‌ವೆನ್ಶನ್‌ ವಾಹನ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ
ಕೊಳ್ಳಲಾಗಿದೆ. ಸಮಾವೇಶ ನಡೆಯುವ ಮೈದಾನ ಮತ್ತು ಸುತ್ತಲಿನ ಪ್ರದೇಶದಲ್ಲಿಯೇ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ವಾಹನ ಸಂಚಾರ ಮಾರ್ಪಾಟು
ಸಮಾವೇಶ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯ ವರೆಗೆ ವಾಹನಗಳ ಮಾರ್ಗವನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.
– ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ- ಶಿರಾಡಿ ಘಾಟಿ ರಸ್ತೆಯಾಗಿ ಸಂಚರಿಸಬೇಕು.

– ಬೆಂಗಳೂರಿನಿಂದ ಮಂಗಳೂರಿಗೆ ಮೆಲ್ಕಾರ್‌-ಬಿ.ಸಿ. ರೋಡ್‌ ವಯಾ ಕೊಣಾಜೆ- ತೊಕ್ಕೊಟ್ಟು-ಮಂಗಳೂರು ರಸ್ತೆಯಾಗಿ ಸಂಚರಿಸಬೇಕು.

– ಮಂಗಳೂರಿನಿಂದ ಬೆಂಗಳೂರು ಕಡೆಗೆ ನಂತೂರು-ಪಂಪ್‌ವೆಲ್‌- ತೊಕ್ಕೊಟ್ಟು-ಕೊಣಾಜೆ- ಬಿ.ಸಿ.ರೋಡ್‌ ಮಾರ್ಗವಾಗಿ ಸಂಚರಿಸಬೇಕು.

– ಬಿ.ಸಿ. ರೋಡ್‌ನಿಂದ ಮಂಗಳೂರು ಕಡೆಗೆ ಪೊಳಲಿ ಕೈಕಂಬ ಮಾರ್ಗದಲ್ಲಿ ಸಂಚರಿಸಬೇಕು.

ವಾಹನ ಪಾರ್ಕಿಂಗ್‌ ಸ್ಥಳ
– ಮಂಗಳೂರಿನಿಂದ ದ್ವಿಚಕ್ರ ವಾಹನಗಳಲ್ಲಿ ಆಗಮಿಸು ವವರಿಗೆ ಜಾಗ್ವಾರ್‌ ಶೋರೂಂ ಎದುರಿನ ಮೈದಾನ.

– ಮಂಗಳೂರಿನಿಂದ ಬರುವ ಎಲ್ಲ ಕಾರು ಮತ್ತು ಇತರ ಚತಷcಕ್ರ ವಾಹನಗಳಿಗೆ ಸೀಝರ್‌ ಬೀಡಿ ಮೈದಾನ.

– ಮಂಗಳೂರು ಮತ್ತು ಬಿ.ಸಿ. ರೋಡ್‌ ಕಡೆಯಿಂದ ಬರುವ ಬಸ್‌ಗಳಿಗೆ ಮೋತಿಶ್ಯಾಂ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಂಬ್ಳಿ ಪಾರ್ಕಿಂಗ್‌ ಮೈದಾನ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ಎಲ್ಲ ಕಾರು ಮತ್ತು ಇತರ ಚತುಷcಕ್ರ ವಾಹನಗಳಿಗೆ ಅಡ್ಯಾರ್‌ ಕಟ್ಟೆ ಜುಮ್ಮಾ ಮಸೀದಿ ಮೈದಾನ.

– ಎಲ್ಲ ಪೊಲೀಸ್‌-ತುರ್ತು ಸೇವೆಗಳ ವಾಹನಗಳಿಗೆ ವೆಲ್‌ರಿಂಗ್‌ ಪಾರ್ಕಿಂಗ್‌ ಮತ್ತು ಶಂಕರ್‌ ವಿಠಲ್‌ ಪಾರ್ಕಿಂಗ್‌ ಸ್ಥಳ.

– ಬಿ.ಸಿ. ರೋಡ್‌ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಹಮೀದ್‌Õ ಮೈದಾನ.

– ಬಿ.ಸಿ.ರೋಡ್‌ ಕಡೆಯಿಂದ ಬರುವ ಕಾರು, ಇತರ ಚತುಷcಕ್ರ ವಾಹನಗಳಿಗೆ ಡಾ| ಶ್ಯಾಮ್ಸ್‌ ಮೈದಾನ.

– ಬಿ.ಸಿ. ರೋಡ್‌, ಫ‌ರಂಗಿಪೇಟೆ ಕಡೆಯಿಂದ ಬರುವ ಬಸ್‌ಗಳಿಗೆ ಹೆರಿಟೇಜ್‌ ಮೈದಾನ.

– ಅಡ್ಯಾರ್‌ ಗಾರ್ಡನ್‌ ತುರ್ತು ಪಾರ್ಕಿಂಗ್‌ಗೆ ಮೀಸಲು.


Spread the love